ಹಗರಿಬೊಮ್ಮನಹಳ್ಳಿ

15ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹ

15ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹ



ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 31: ತಾಲೂಕಿನ ವರದಾಪುರ ಗ್ರಾಮದಲ್ಲಿ ರುಕ್ಮಿಣಿ ರಾಮ ಕಾರ್ಖಾನೆಯ ಮಾಲೀಕರು ರೈತರಿಗೆ ಸುಳ್ಳು ಭರವಸೆಗಳನ್ನು ಭೂಮಿ ಖರೀದಿಸಿದ್ದು ಆ ಭೂಮಿಯನ್ನು ಹಿಂದಿರುಗಿಸಬೇಕು ಇಲ್ಲವೇ ಕಾರ್ಖಾನೆ ಪ್ರಾರಂಭಿಸುವಂತೆ ಒತ್ತಾಯಿಸಿ ಮಾಡುತ್ತಿರುವು ಧರಣಿ ಸತ್ಯಾಗ್ರಹವು ಗುರುವಾರ 15ನೇ ದಿನಕ್ಕೆ ಕಾಲಿಟ್ಟಿತು. 


ಧರಣಿಯಲ್ಲಿ ರಾಜ್ಯ ರೈತ ಸಂಘದ ಕಾರ್ಯದರ್ಶಿ ಬಿ.ಗೋಣಿ ಬಸಪ್ಪ ಭಾಗವಹಿಸಿ ಮಾತನಾಡಿ ರೈತರ ಜಮೀನನ್ನು ಖರಿದಿಸುವಾಗ ರೈತರಿಗೆ ಇಲ್ಲಸಲ್ಲದ ಆಸೆ ಆಮಿಷಗಳನ್ನು ತೋರಿಸಿ ಜಮೀನನ್ನು ಖರೀದಿ ಮಾಡಿದ್ದಾರೆ, ರೈತರು ತಮ್ಮ ಕುಟುಂಬದ ಸದಸ್ಯರೊಬ್ಬರಿಗೆ ನೌಕರಿ ಸೇರಿದಂತೆ ಗ್ರಾಮದ ಮೂಲಸೌಕರ್ಯ, ಮಕ್ಕಳ ಶೈಕ್ಷಣಿಕ ಸಬಲತೆಗೆ ಜೊತೆಯಾಗಿರುವ ಭರವಸೆ ನೀಡಿದ್ದು ಸದ್ಯ ಅದೆಲ್ಲ ಹುಸಿಯಾಗಿದೆ ಹಾಗೂ ಖರೀದಿ ಮಾಡಿದ ಜಮೀನನ್ನು ತಮ್ಮ ಸಂಭಂಧಿಕರ ಹೆಸರಿಗೆ ನೊಂದಾಣಿ ಮಾಡಿಕೊಂಡಿದ್ದು ಅದನ್ನೀಗ ಮಾರಾಟ ಮಾಡುತ್ತಿರುವುದು ರೈತರಿಗೆ ಅನ್ಯಾಯ ವೆಸಗಿದಂತಾಗುತ್ತದೆ ಕೂಡಲೇ ಜಿಲ್ಲಾಡಳಿತ ಮದ್ಯಪ್ರವೇಶಿಸಿ ರೈತರಿಗೆ ನ್ಯಾಯ ಕೊಡಿಸಬೇಕು ಭೂಮಿ ಹಿಂತಿರುಗಿಸುವವರೆಗೆ ಧರಣಿ ನಿಲ್ಲದು, ರೈತ ದೇಶಧ ಬೆನ್ನೆಲುಬು ಎಂಬುದು ಕೇವಲ ಭಾಷಣಗಳಿಗೆ ಸೀಮಿತವಾಗಿದೆ, ರೈತರು ಇಂದು ಬೀದಿಗೆ ಬಂದು ಧರಣಿ ನಡೆಸುತ್ತಿದ್ದರೂ ಜಿಲ್ಲಾಡಳಿತ ಇತ್ತ ತಲೆ ಹಾಕದಿರುವುದು ನಿಜಕ್ಕೂ ರೈತರ ಬಗ್ಗೆ ಇರುವ ಅಬೀಮಾನ ಎಂತಹುದ್ದು ಎಂದು ತೋರಿಸುತ್ತದೆ, ಎನೇ ಆಗಲಿ ರೈತರ ಭೂಮಿ ಹಿಂದಿರುಗಿಸುವವರೆಗೆ ಧರಣಿ ನಿಲ್ಲದು ಎಂದು ಗುಡುಗಿದರು. 

ಕಳೆದ 15ದಿನಗಳಲ್ಲಿ ಜೆಡಿಎಸ್ ಸೇರಿದಂತೆ ಕೆಆರ್‌ಎಸ್ ಪಕ್ಷಗಳು ರೈತರ ಪರವಾಗಿ ಬೆಂಬಲ ಸೂಚಿಸಿವೆ. ಗುರುವಾರ ಧರಣಿ ವೇಳೆ ಜಿಲ್ಲಾಡಳಿತ ಹಾಗೂ ರುಕ್ಮಿಣಿ ರಾಮ ಕಾರ್ಖಾನೆ ವಿರುಧ್ಧ ಘೋಷಣೆಗಳನ್ನು ಕೂಗಿದರು.ಈ ಸಂಧರ್ಭಧಲ್ಲಿ ಕೊಲ್ಕರ್ ಹನುಮಂತಪ್ಪ, ಹರಟೆ ಕಾಳಪ್ಪ, ಹೆಚ್‌.ನಾಗರಾಜ, ಮುದುಕಪ್ಪ, ಟಿ.ರವಿ ಕುಮಾರ ಸೇರಿದಂತೆ ಇನ್ನಿತರರು ಧರಣಿಯಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ