ವಿಜಯಪುರ

ಗೂಗಿಹಾಳ ಗ್ರಾಮದ ಹಜರತ್ ಪೀರ್ ರಾಜ್ ಬಸ್ಕರ್ ದೇವರ ಜಾತ್ರೋತ್ಸವದಲ್ಲಿ ಸತೀಶಕುಮಾರ ಅಡವಿಗೆ ಸನ್ಮಾನ

ಗೂಗಿಹಾಳ ಗ್ರಾಮದ ಹಜರತ್ ಪೀರ್ ರಾಜ್ ಬಸ್ಕರ್ ದೇವರ ಜಾತ್ರೋತ್ಸವದಲ್ಲಿ ಸತೀಶಕುಮಾರ ಅಡವಿಗೆ ಸನ್ಮಾನ

ಲೋಕದರ್ಶನ ವರದಿ 

           ತಾಂಬಾ 10 : ಉಪಕಾರ ಮಾಡಿದವರನ್ನು ಯಾವತ್ತು ಸ್ಮರಿಸಬೇಕು ಅದು ಮನುಷ್ಯ ಧರ್ಮ ಆದರೆ ಇವತ್ತಿನ ಜನರು ಮಾಡಿದ ಉಪಕಾರವನ್ನು ಬೀಟ್ಟು ಕ್ಷಣಿಕ ಯೋಚನೆ ಮಾಡುತ್ತಾರೆ ಅಂತವರಿಗೆ ಹಜರತ್ ಪೀರ್ ರಾಜ್ ಬಸ್ಕರ್ ತಕ್ಕ ಶಿಕ್ಷೇನಿಡುತ್ತಾನೆ ಎಂದು ನೂತನ ಕೆಡಿಪಿ ಸದಸ್ಯ ಸತೀಶಕುಮಾರ ಅಡವಿ ಹೆಳಿದರು. 

ಗೂಗಿಹಾಳ ಗ್ರಾಮದ ಹಜರತ್ ಪೀರ್ ರಾಜ್ ಬಸ್ಕರ್ ದೇವರ ಜಾತ್ರೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಈ ಒಂದು ಚಿಕ್ಕ ಗ್ರಾಮಕ್ಕೆ ಜಮೀನು ನೀಡಿದ ಬೊರಳಗಿ ಮನೆತನದವರು ಹಾಗೂ ಈ ಗ್ರಾಮಕ್ಕೆ ವಿದುತ್ ಸಂಪರ್ಕ ಕಲ್ಪಿಸುವ ಕಾರ್ಯಮಾಡಿದ್ದು ಸಾಲೂಟಗಿ ಯೋಗಪ್ಪಗೌಡ್ರು ಈ ಗ್ರಾಮವು ಒಂದು ಪುಟ್ಟ ದ್ವೀಪದಂತೆ ಇತ್ತು ಯಾವದೆ ರಸ್ತೆ ಸಂಪರ್ಕ ಇರಲಿಲ್ಲ ಅದನ್ನು ಗುರುತ್ತಿಸಿ ಇಲ್ಲಿ ರಸ್ತೆ ಸಂಪರ್ಕ ಕಲ್ಪಿಸಿ ಕೊಟ್ಟ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರ ಕಾರ್ಯ ಶ್ಲಾಘನಿಯ.

           ಅದರಂತೆ ಈಗ ಬಸ್ ಸೌಕರ್ಯನು ಕುಡಾ ಮಾಡಿದ್ದಾರೆ. ಇದಕ್ಕೆಲ್ಲಕ್ಕೂ ಕಾರಣಿಕರ್ತರಾದ ಕರಿಮಸಾಬ ಕಸಾಬ ಹಾಗೂ ಶರಣಪ್ಪ ಅಡವಿ ಅವರನ್ನು ನೆನಪಿಸಿ ಕೊಳ್ಳಬೆಕೆಂದರು.  ಗ್ರಾಪಂ ಅಧ್ಯಕ್ಷ ರಜಾಕ ಚಿಕ್ಕಗಸಿ, ಪ್ರಕಾಶ ಮುಂಜಿ, ರವಿ ನಡಗಡ್ಡಿ, ಸುನಂದ ಎಂಪೂರೆ, ಮಲ್ಲಪ್ಪ ಸಣ್ಣತಂಗಿ, ಅಶೋಕ ಚೌಧರಿ, ನಜೀರ ಗೌರ, ಕಾಂತನಗೌಡ ಪಾಟೀಲ, ಹಿರಗಪ್ಪ ನಾಯ್ಕೋಡಿ, ಮಶ್ಯಾಕ ಕಸಾಬ, ಹಮ್ಮಿದ ಚೌಧರಿ, ವಿಠ್ಠಲ ಅವಟಿ ಸೇರಿದಂತೆ ಮತ್ತಿತರರು ಇದ್ದರು. 


ಸುದ್ದಿ ಓದಿ