ಮಹಾಲಿಂಗಪುರದಲ್ಲಿ ಸಸ್ಯ ಶ್ಯಾಮಲ ಮೂಲಕ ಸಸಿ ನೆಡುವ ಕಾರ್ಯಕ್ರಮ
ಮಹಾಲಿಂಗಪುರ 24: ಸರಕಾರಿ ಪ್ರೌಢಶಾಲೆ ಮಹಾಲಿಂಗಪುರ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಘನ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸಸ್ಯ ಶ್ಯಾಮಲ ಯೋಜನೆಯ ಅಂಗವಾಗಿ ಅರಣ್ಯ ಇಲಾಖೆ ನೀಡಿದ 12 ಸಸಿಗಳನ್ನು ಸರಕಾರಿ ಪ್ರೌಢಶಾಲೆ ಮಹಾಲಿಂಗಪುರ ಆವರಣದಲ್ಲಿ ನೆಡಲಾಯಿತು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಶಿವಬಸು ಯರಗಟ್ಟಿ, ಪ್ರೌಢಶಾಲೆ ಎಸ್ಡಿಎಮ್ಸಿ ಅಧ್ಯಕ್ಷ ಸಂಜಯ ರಾಠೋಡ, ಮುಖ್ಯ ಗುರುಗಳಾದ ಸಮೀರ ಚಿಪ್ಪಾಡಿ, ಸಹಶಿಕ್ಷಕರು ಧನಂಜಯ ಕುಲಕರ್ಣಿ, ಸದಾಶಿವ ಕಂಬಾರ, ಕೋಲಕಾರ, ಗುರುಮಾತೆಯರಾದ ಬಿ ಎಸ್ ಜಿರಲೀ, ಬೀಳಗಿ, ಅಲ್ಲಾಖಾನ್, ಖಾನವೀಲಕರ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.