ಮಹಲಿಂಗಪುರ

ರಾಷ್ಟ್ರದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಮುಡಿಗೇರಿಸಿಕೊಂಡ ಮಹಾಲಿಂಗಪುರದ ಸಪನಾ

ರಾಷ್ಟ್ರದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಮುಡಿಗೇರಿಸಿಕೊಂಡ ಮಹಾಲಿಂಗಪುರದ ಸಪನಾ

ಮಹಾಲಿಂಗಪುರ 28: ಪಟ್ಟಣದ ಕೆಎಲ್‌ಇ ಸಂಸ್ಥೆ, ಎಸ್‌ಸಿಪಿ ಪ್ರೌಢಶಾಲೆ ವಿಜ್ಞಾನ ಶಿಕ್ಷಕಿ ಸಪನಾ ಶ್ರೀಶೈಲ. ಅನಿಗೋಳ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ ನೀಡುವ 2023ನೇ ಸಾಲಿನ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 

ಪ್ರಸಕ್ತ ವರ್ಷ ನೀಡುತ್ತಿರುವ ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾದ ಕರ್ನಾಟಕ ರಾಜ್ಯದ ಶಿಕ್ಷಕರಲ್ಲಿ ಇವರೂ ಒಬ್ಬರು ಎನ್ನುವದು ವಿಶೇಷವಾಗಿದೆ.  

ಅಚ್ಚುಮೆಚ್ಚಿನ ಶಿಕ್ಷಕಿ : ಎಂ.ಎಸ್ಸಿ. ಬಿ.ಇಡಿ ಪದವಿಧರೆ ಅನಿಗೋಳ ಕಳೆದ 19 ವರ್ಷಗಳಿಂದ ಸ್ಥಳೀಯ ಕೆಎಲ್‌ಇ ಸಂಸ್ಥೆ, ಎಸ್‌ಸಿಪಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಆಧುನಿಕತೆಗೆ ತಕ್ಕಂತೆ ಹೊಸ ಬೋಧನಾ ಕೌಶಲ್ಯಗಳನ್ನು ಅಳವಡಿಸಿಕೊಂಡು ಸ್ಮಾರ್ಟಕ್ಲಾಸ್, ಶೈಕ್ಷಣಿಕ ???ಪ್ ಮತ್ತು ಕಂಪ್ಯೂಟರ್ ಬಳಸಿ ಅತ್ಯಂತ ಕಠಿಣ ವಿಷಯಗಳನ್ನು, ಪ್ಲಾಸ್ಟಿಕ್ ದುರ್ಬಳಕೆಯಿಂದ ಭೂಮಿ, ಪರಿಸರಕ್ಕೆ ಹಾನಿ ಕುರಿತು ಮಕ್ಕಳಿಗೆ ತಿಳಿ ಹೇಳುತ್ತ, ಸಾವಿರಾರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ವಿಜ್ಞಾನ ಶಿಕ್ಷಕಿಯಾಗಿದ್ದಾರೆ. ಎರಡು ವರ್ಷಗಳ ಹಿಂದೆಯೂ (2021ರಲ್ಲಿ) ರಾಜ್ಯ ಸರ್ಕಾರದಿಂದ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದುಕೊಂಡಿದ್ದರು. 

ರಾಷ್ಟ್ರಪತಿಗಳಿಂದ ಪ್ರಶಸ್ತಿ ಪ್ರದಾನ: ಕೇಂದ್ರ ಪ್ರತಿ ವರ್ಷ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ ಆಯೋಜನೆ ಮಾಡಿ, ಕಠಿಣ, ಪಾರದರ್ಶಕ ಮತ್ತು ಆನ್‌ಲೈನ್ ಮೂಲಕ ಮೂರು ಹಂತಗಳ ಪೈಪೋಟಿ ನಡೆಸಿ, ಈ ಹಂತಗಳಲ್ಲಿ ಆಯ್ಕೆಯಾದ ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ಭಾರತದ ಗೌರವಾನ್ವಿತ ರಾಷ್ಟ್ರಪತಿಗಳ ನೀಡಿ ಗೌರವಿಸುತ್ತಾರೆ. ಪ್ರಸ್ತುತ ವರ್ಷದ (2023ರ) ರಾಷ್ಟ್ರೀಯ ಪ್ರಶಸ್ತಿಗಳನ್ನು ನವದೆಹಲಿಯ ವಿಜ್ಞಾನ ಭವನದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿಕ್ಷಣ ಸಚಿವಾಲಯ ಸಹಯೋಗದಲ್ಲಿ ಸೆಪ್ಟೆಂಬರ್ 5ರ ಶಿಕ್ಷಕರ ದಿನಾಚರಣೆಯಂದು ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಪ್ರದಾನ ಮಾಡಲಿದ್ದಾರೆ.ಅರ್ಹತಾ ಪ್ರಮಾಣ ಪತ್ರದೊಂದಿಗೆ ರೂ 50ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ಬೆಳ್ಳಿ ಪದಕವನ್ನು ಹೊಂದಿದೆ.  

ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ, ಸಿಬ್ಬಂದಿಗಳು ಅಲ್ಲದೆ ಊರಿನ ಪ್ರಮುಖರು ಉತ್ತಮ ಶಿಕ್ಷಕಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಸಪನಾ ಅನಿಗೋಳ ಅವರನ್ನು ಅಭಿನಂದಿಸಿದ್ದಾರೆ. 

19 ವರ್ಷಗಳ ಶೈಕ್ಷಣಿಕ ಸೇವೆಯಿಂದಾಗಿ ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ನೀಡಿದ್ದು, ನನ್ನ ಜೀವನದ ಉತ್ತಮ ಮತ್ತು ಸಂತಸದ ಘಳಿಗೆಯೂ ಆಗಿದೆ. ದೊರೆತಿರುವ ಈ ಪ್ರಶಸ್ತಿಯಿಂದಾಗಿ ನನ್ನ ಸಾಮಾಜಿಕ ಹಾಗೂ ಶೈಕ್ಷಣಿಕ ಜವಾಬ್ದಾರಿ ಹೆಚ್ಚಿದೆ ಅಲ್ಲದೆ ಭವಿಷ್ಯದ ವಿಧ್ಯಾರ್ಥಿಗಳಿಗೆ ಇನ್ನಷ್ಟು ಉತ್ತಮ ಶಿಕ್ಷಣ ನೀಡುವ ಹಾಗೂ ಸಾಮಾಜಿಕವಾಗಿ ಸೇವೆ ಸಲ್ಲಿಸುವ ಅವಕಾಶವೂ ನನಗೆ ದೊರೆಯುತಂತಾಗಿದೆ.  

ಸಪನಾ ಶ್ರೀಶೈಲ ಅನಿಗೋಳ.  

ಅತ್ಯುತ್ತಮ ಶಿಕ್ಷಕಿ ರಾಷ್ಟ್ರ ಪ್ರಶಸ್ತಿ ವಿಜೇತರು. 

ರಾಷ್ಟ್ರ ಗೌರವ ಹಾಗೂ ದೇಶ ಭಕ್ತ ನಿರ್ಮಾಣದಲ್ಲಿ ಮಕ್ಕಳನ್ನು ಪ್ರೇರೆಪಿಸಿದ್ದಿರಿ ಮತ್ತು ತಮ್ಮ ಕಾರ್ಯವು ಸದಾ ಶೈಕ್ಷಣಿಕ ಚಟುವಟಿಕೆಗಳಿಂದ ಕೂಡಿದ್ದಾಗಿದೆ. ತಾವು ರಾಜ್ಯ, ಅಂತರ್ರಾಜ್ಯ, ಪ್ರಾದೇಶಿಕ ಪ್ರಶಸ್ತಿಗಳನ್ನು ಪಡೆದಿದ್ದಿರಿ. ಈಗ ತಮಗೆ ಉತ್ತಮ ಶಿಕ್ಷಕಿ ರಾಷ್ಟ್ರೀಯ ಪ್ರಶಸ್ತಿ ದೊರೆತಿರುವುದೂ ಸಹ ಸಮಯೋಚಿತವೇ ಆಗಿದೆ. 

ಎಸ್ ಎಂ ಮುಲ್ಲಾ  

ಕ್ಷೇತ್ರ ಶಿಕ್ಷಣಾಧಿಕಾರಿ ಮುಧೋಳ. 


ಸುದ್ದಿ ಓದಿ