ದಲಿತ ಸಂಘಟನೆಗಳಿಂದ ಅಗಲಿದ ವಿಚಾರವಾದಿ ಮಂಟೆಲಿಂಗಯ್ಯ ಶ್ರದ್ಧಾಂಜಲಿ ಸಭೆ : ಇಷ್ಟು ಬೇಗ ಅವರು ನಮ್ಮನ್ನಗಲಿದ್ದು ನೋವು ತಂದಿದೆ ಎಂದ ಅಭಿಮಾನಿಗಳು

ದಲಿತ ಸಂಘಟನೆಗಳಿಂದ ಅಗಲಿದ ವಿಚಾರವಾದಿ ಮಂಟೆಲಿಂಗಯ್ಯ ಶ್ರದ್ಧಾಂಜಲಿ ಸಭೆ : ಇಷ್ಟು ಬೇಗ ಅವರು ನಮ್ಮನ್ನಗಲಿದ್ದು ನೋವು ತಂದಿದೆ ಎಂದ ಅಭಿಮಾನಿಗಳು

ಸಂಕೇಶ್ವರ : ಇತ್ತಿಚೆಗೆ ನಿಧನರಾದ ಖಾತ್ಯ ವಿಚಾರವಾದಿ, ಹಿಂದುಳಿದ ವರ್ಗದ ಧ್ವನಿ, ದಲಿತ ಹೋರಾಟಗಾರ ಮಂಟೆಲಿಂಗಯ್ಯ ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ಹುಕ್ಕೇರಿ ತಾಲೂಕಿನ ಸಮಸ್ತ ದಲಿತ ಸಂಘಟನೆಗಳ ವತಿಯಿಂದ ಸಂಕೇಶ್ವರದಲ್ಲಿ ಶನಿವಾರ ಆಯೋಜಿಸಲಾಯಿತು. 


    ಸಂಕೇಶ್ವರದ ಪುರಸಭೆ ಸಮುದಾಯ ಭವನ ಜರುಗಿದ ಈ ಸಭೆಯಲ್ಲಿ ಮಂಟೆಲಿಂಗಯ್ಯ ಅವರ ಭಾವಚಿತ್ರಕ್ಕೆ ರವೀಂದ್ರ ಕಾಂಬಳೆ ಅವರು ಪುಷ್ಪಾಚರಣೆ ಮಾಡುವ ಮೂಲಕ. ಬಳಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಿವೃತ್ತ ಮುಖ್ಯಾಧ್ಯಾಪಕ ನಾಗೇಂದ್ರ ಭೋಸಲೆ ಅವರು ಮಾತನಾಡಿ, ನಾವು ಪ್ರಾಥಮಿಕ ಶಾಲೆಯಲ್ಲಿ ಕಲಿತಿರುವಾಗ ಮಂಟೆಲಿಂಗಯ್ಯ ಅವರು ಸ್ಥಾಪಿಸಿದ ಎಜೆಎಮ್ ಎಸ್ ಎಂಬ ದಲಿತ ಸಂಘದ ಮುಂದಾಳತ್ವದಲ್ಲಿ ನಾವು ಹಲಾವರು ಹೋರಾಟದಲ್ಲಿ ಭಾಗಿಯಾಗುತ್ತಿದ್ದೇವು. ಮಂಟೆಲಿಂಗಯ್ಯ ಅವರು ಅಂಬೇಡ್ಕರ್ ಅವರನ್ನು ಭಾರತ ರತ್ನ ಅಲ್ಲ, ವಿಶ್ವರತ್ನ ಎನ್ನುತ್ತಿದ್ದರು. ಮಂಟೆಲಿಂಗಯ್ಯ ಅವರ ಮಾರ್ಗದಲ್ಲಿ ನಾವು ಇಂದಿಗೂ ಸಾಗುತ್ತಿದ್ದೇವೆ ಎಂದರು. 

   ಶಿಕ್ಷಕ ಅನಿಲ ಜೆ. ಕಾಂಬಳೆ ಕಾಂಬಳೆ ಮಾತನಾಡಿ, ಕೆಲವರು ಅಂಬೇಡ್ಕರ್ ಎಸ್.ಸಿ ಎಸ್.ಟಿ ಜನರಿಗೆ ಎಲ್ಲ ನೀಡಿದ್ದಾರೆ ನಮಗೆ ಎನು ನೀಡಿದ್ದಾರೆ ಎನ್ನುತ್ತಾರೆ, ಆದರೆ ಸಂವಿಧಾನ ಮೊದಲ ಪುಟದಲ್ಲಿ ನಾವೆಲ್ಲರೂ ಭಾರತೀಯರು ಎಂದು ಅಂಬೇಡ್ಕರರು ನಮೂದಿಸಿದ ಬಗ್ಗೆ ವಿವರಿಸಿದರು. 

  ಇದೇ ನ್ಯಾಯವಾದಿ ವಿಕ್ರಂ ಕರನಿಂಗ ಅವರು ಮಾತನಾಡಿ, ಮಂಟೆಲಿಂಗಯ್ಯ ನವರ ಜೊತೆಗಿದ್ದ ತಮ್ಮ 14 ವರ್ಷದ ಒಡನಾಟದ ಬಗ್ಗೆ ವಿವರಿಸಿದರು. ಅಲ್ಲದೆ ಮಂಟೆಲಿಂಗಯ್ಯ ಸಾಗಿ ಬಂದ ವಿಷಯದ ಬೆಳಕು ಚೆಲ್ಲಿದರು. 

   ಬಳಿಕ ಗೀರಿರಾಜ ಮತ್ತು ಕಿರಣ‌ ಕಾಂಬಳೆ ಮಾತನಾಡಿ, ಮಂಟೆಲಿಂಗಯ್ಯ ಅವರು ಮನಸ್ಸು ಮಾಡಿದ್ದರೆ ಒಳ್ಳೆಯ ರಾಜಕಾರಣಿ, ಸಚಿವ, ಶಾಸಕರು ಆಗಬಹುದಿತ್ತು. ಆದರೆ ಅವರು ರಾಜಕೀಯದಿಂದ ದೂರ ಉಳಿದು ಹಿಂದುಳಿದ ವರ್ಗಗಳ ಏಳ್ಗೆಗೆ ಹೋರಾಟಗಾರರಾಗಿ ಕಾರ್ಯ ಮಾಡಿದರು. ಅವರ ಹೋರಾಟ ಮುಂದುವರೆಸಿಕೊಂಡರೆ ಅವರ ಆತ್ಮಕ್ಕೆ ಶಾಂತಿ ದೊರೆಯುತ್ತದೆ ಎಂದರು. 

   ಈ ವೇಳೆಯಲ್ಲಿ ರವೀಂದ್ರ ಕಾಂಬಳೆ, ಪ್ರಮೋದ ಹೊಸಮನಿ, ಅರ್ಜುನ ದೊಡ್ಡಮನಿ, ಮಹೇಶ ಹಟ್ಟಿಹೊಳಿ, ದಿಲಿಪ ಹೊಸಮನಿ, ಗಂಗಾರಾಮ ಭೂಸಗೋಳ, ಪ್ರಕಾಶ ಇಟೇಕರ್, ರಾಜು ಭೂಸಗೋಳ, ಚಿದಾನಂದ ವಾರಕರಿ, ಆಶೋಕ ಬಾಳೇಶ, ಬಾಬು ಕರನಿಂಗ, ಕೆ.ಆರ್. ಭೀಮಗೋಳ, ಬಿ.ಎಲ್.ಜಿನರಾಳಕರ್, ರಾಹುಲ ವಾರಕರಿ ಸೇರಿದಂತೆ ಅನೇಕ ದಲಿತ ಮುಖಂಡರು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು. ರಾಮಕೃಷ್ಣ ಪಾನಬುಡೆ ಸ್ವಾಗತಿಸಿ, ನಿರೂಪಿಸಿದರು. ಚಿದನಂದ ವಾರಕರಿ ವಂದಿಸಿದರು. 



ಸುದ್ದಿ ಓದಿ