ಸಿಎಂ ವಿರುದ್ದ ನಾಲಿಗೆ ಹರಿಬಿಟ್ಟ ಸಂಜಯ ಪಾಟೀಲ : ನೀ ಸಗಣಿ ತಿಂದಿಯಾ ವಾಂತಿ ಮಾಡೇಂದು ವಾಗ್ದಾಳಿ
ಬೆಳಗಾವಿ : ಸದಾ ಒಂದಿಲ್ಲ ಒಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸದಾ ಸುದ್ದಿಯಲ್ಲಿ ಇರುತ್ತಿದ್ದ ಬಿಜೆಪಿಯ ಮಾಜಿ ಶಾಸಕ ಸಂಜಯ ಪಾಟೀಲ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ “ನೀ ಸಗಣಿ ತಿಂದಿಯಾ ವಾಂತಿ ಮಾಡು ಮಗನೇ ಎಂದು ಏಕವಚನದಲ್ಲಿ ನಾಲಿಗೆ ಹರಿಬಿಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ಗುರುವಾರ ಬೆಳಗಾವಿಯಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ ವೇಳೆ ಎಚ್‌ಡಿಕೆ ನಿರಾಣಿ, ಜೊಲ್ಲೆ ವಿರುದ್ಧ ಆರೋಪಗಳ ಬಗ್ಗೆ ಸಿಎಂ ಪ್ರಶ್ನೆ ವಿಚಾರವಾಗಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿಯವರು ಭ್ರಷ್ಟಾಚಾರಿಗಳು, ನಿಮಗೆ ನಾಚಿಕೆಯಾಗುವುದಿಲ್ಲವೇ ಎನ್ನುತ್ತಿದ್ದ ಸಿದ್ದರಾಮಯ್ಯ ನೀನು ಯಾವದೇ ಕಪ್ಪುಚುಕ್ಕೆ ಇಲ್ಲದ ಕಳಂಕರಹಿತ ರಾಜಕಾರಣಿ ಎಂದು ಬೀಗುತ್ತಿದ್ದಿ ಆದರೆ ಈಗ ಹಗರಣದಲ್ಲಿ ಸಿಲುಕಿದ್ದಾನೆ ಆದರೆ, ನಾನೇ ವಕೀಲ, ನಾನೇ ನ್ಯಾಯಾಧೀಶ ಮತ್ತು ನನ್ನದೇ ನ್ಯಾಯಾಲಯ ಎಂಬಂತೆ ವರ್ತಿಸುತ್ತಿದ್ದು, ನನಗೊಂದು ನ್ಯಾಯ, ಮತ್ತೊಬ್ಬರಿಗೆ ಒಂದು ನ್ಯಾಯ ಎನ್ನುವಂತೆ ವರ್ತಿಸುತ್ತಿದ್ದಾನೆ. ಸಿದ್ದರಾಮಯ್ಯ ನಿನಗೆ ನಾಚಿಕೆ ಇದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಬಿಟ್ಟುಕೊಡು ಎಂದು ಸಿಎಂ ವಿರುದ್ದ ಹರಿಹಾಯ್ದರು.
ಮಾಜಿ ಸಿಎಂ ಎಚ್‌ಡಿ. ಕುಮಾರಸ್ವಾಮಿ ಮತ್ತು ನಿರಾಣಿ ಹಾಗೂ ಜೊಲ್ಲೆ ವಿರುದ್ಧ ಕಾಂಗ್ರೆಸ್ ಆರೋಪ ವಿಚಾರವಾಗಿ ಮಾತನಾಡಿ, ನ್ಯಾಯ ವ್ಯವಸ್ಥೆ ಇದೆ, ಅವರ ವಿರುದ್ದ ತನಿಖೆಗೆ ಯಾರು ಬೇಡ ಅಂದಿಲ್ಲ. ಈಗಲೇ ಈ ವಿಚಾರ ಯಾಕೆ ಪ್ರಸ್ತಾಪ ಆಯಿತು. ನೀವು ಸಿಕ್ಕ ಮೇಲೆ ಇನ್ನೊಬ್ಬ ಕಳ್ಳನಿಗೆ ಹುಡುಕುವುದು. ನಿಮ್ಮ ಮೇಲೆ ಆರೋಪ ಬಂದ ಮೇಲೆ ಈಗ ಬಿಜೆಪಿ ನಾಯಕರ ಹೆಸರು ಬರುತ್ತಿವೆ.
ಯಡಿಯೂರಪ್ಪ ಜೈಲಿಗೆ ಹೋದಾಗ ರಾಕ್ ಡ್ಯಾನ್ಸ್ ಮಾಡಿದಿ. ಈಗ ನೀ ಮಗನ ಸಗಣಿ ತಿಂದಿಯಾ ಅದನ್ನ ಮೊದಲು ವಾಂತಿ ಮಾಡು ಎಂದು ಸಂಜಯ ಪಾಟೀಲ್ ನುಡಿದಿದ್ದಾರೆ.
ಮೊದಲು ಸಿಎಂ ಸಿದ್ದರಾಮಯ್ಯ ತಮ್ಮ ಸ್ತಾನಕ್ಕೆ ರಾಜೀನಾಮೆ ನೀಡಬೇಕು. ಎಚ್‌ಡಿಕೆ ನಿರಾಣಿ, ಜೊಲ್ಲೆ ವಿರುದ್ಧ ಆರೋಪಗಳ ಬಗ್ಗೆ ಸಿಎಂ ಪ್ರಶ್ನೆ ವಿಚಾರ. ಮಾಧ್ಯಮಗಳ ಪ್ರಶ್ನೆಗೆ ಮಾಜಿ ಶಾಸಕ ಸಂಜಯ ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ಇಷ್ಟು ದಿವಸ ಯಾಕೆ ನೆನಪು ಆಗಿರಲಿಲ್ಲ ಎಂದು ಪ್ರಶ್ನೆ ಮಾಡಿದರು. ಯಾರೇ ತಪ್ಪು ಮಾಡಿರು ಕ್ರಮಕೈಗೊಳ್ಳಲಿ. ಮೊದಲು ನೀನು ಸಗಣಿ ತಿಂದಿದೀಯಾ ಅದನ್ನ ವಾಂತಿ ಮಾಡು ಎಂದು ಸಂಜಯ ಪಾಟೀಲ್ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್‌ನ ಕೆಲವು ನಾಯಕರು ಏನೇನೋ ಮಾತನಾಡುತ್ತಿದ್ದಾರೆ. ನೀವು ಎಲುಬಿಲ್ಲದ ನಾಲಿಗೆ ಹರಿಬಿಡಬೇಡಿ ಎಂದು ಎಚ್ಚರಿಕೆ ಕೊಟ್ಟ ಸಂಜಯ ಪಾಟೀಲ ಅವರು, ಇದು ಬಾಂಗ್ಲಾ ದೇಶವಲ್ಲ, ಭಾರತ ಎಂಬುದನ್ನು ಐವಾನ್ ಡಿಸೋಜಾ ಅರಿತುಕೊಳ್ಳಬೇಕು. ರಾಜ್ಯಪಾಲರ ಬಗ್ಗೆ ಹಗುರವಾಗಿ ಮಾತನಾಡಿರುವ ನಿಮಗೆ ಬಾಂಗ್ಲಾದೇಶಕ್ಕೆ ಹೋಗುವ ಆಸೆಯಿದ್ದರೆ ಹೋಗಿ. ನಾವೇ ಬಸ್ ಅಥವಾ ವಿಮಾನದ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ವ್ಯಂಗ್ಯವಾಡಿದರು.