ಸಂಕೇಶ್ವರದಲ್ಲಿ ಲೋಕಾರ್ಪಣೆಗೊಂಡ ಸಂಗೊಳ್ಳಿ ರಾಯಣ್ಣ ಕಂಚಿನ ಪ್ರತಿಮೆ : ಸಚಿವ ಜಾರಕಿಹೊಳಿ ಅನಾವರಣ, ಭಂಡಾರಮಯ ವಾದ ಪಟ್ಟಣ

ಸಂಕೇಶ್ವರದಲ್ಲಿ ಲೋಕಾರ್ಪಣೆಗೊಂಡ ಸಂಗೊಳ್ಳಿ ರಾಯಣ್ಣ ಕಂಚಿನ ಪ್ರತಿಮೆ : ಸಚಿವ ಜಾರಕಿಹೊಳಿ ಅನಾವರಣ, ಭಂಡಾರಮಯ ವಾದ ಪಟ್ಟಣ

ಸಂಕೇಶ್ವರ : ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ, ರಾಷ್ಟ್ರ ಸಂತ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕಂಚಿನ ಪ್ರತಿಮೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಮಂಗಳವಾರ ಲೋಕಾರ್ಪಣೆ ‌ಮಾಡಿದರು.


   ಈ ವೇಳೆಯಲ್ಲಿ ನಿಡಸೋಸಿ ಶಿವಲಿಂಗೇಶ್ವರ ಶ್ರೀ, ಶಂಕರಾಚಾರ್ಯ ಮಠದ ವಿದ್ಯಾನರಸಿಂಹ ಭಾರತಿ ಶ್ರೀಗಳು, ಅಮರೇಶ್ವರ ಶ್ರೀಗಳು, ಮಾಜಿ ಸಂಸದ ರಮೇಶ ಕತ್ತಿ, ಹುಕ್ಕೇರಿ ಶಾಸಕ ನಿಖಿಲ್ ಕತ್ತಿ ಅವರು ಉಪಸ್ಥಿತರಾಗುವ ಮೂಲಕ ಪ್ರತಿಮೆ ಅನಾವರಣಕ್ಕೆ ಉಪಸ್ಥಿತರಿದರು.


     ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಹುಟ್ಟುಹಬ್ಬದ ದಿನವಾದ ಅಗಷ್ಟ್  15ರಂದು ಸಂಕೇಶ್ವರದ ರಾಯಣ್ಣ ವೃತದಲ್ಲಿ ನೂತನ ಸಂಗೊಳ್ಳಿ ರಾಯಣ್ಣನ ಕಂಚಿನ ಪ್ರತಿಮೆ ಅನಾವರಣ ಮಾಡುವ ಬಗ್ಗೆ ಪಟ್ಟಣದ ಹಾಲಮತ ಸಮಾಜ ಮತ್ತು ಕನ್ನಡಪರ ಸಂಘಗಳು ನಿರ್ಧಸಿದ್ದವು. ಅದರಂತೆ ಮಂಗಳವಾರ ಪ್ರತಿಮೆ ಅನಾವರಣ ಗೊಂಡಿತು. ಈ ವೇಳೆಯಲ್ಲಿ ಕುಂಭ ಹೊತ್ತ ನೂರಾರು ಮಹಿಳೆಯರು ರಸ್ತೆ ಉದ್ದಕ್ಕು ಮೆರವಣಿಗೆ ಮೂಲಕ ಪಟ್ಟಣದಲ್ಲಿ ಸಂಚರಿಸಿದರು.

     ಅದರಂತೆ ರಾಯಣ್ಣನ ಕಂಚಿನ ಪ್ರತಿಮೆಯಪ್ರತಿಮೆಾವರಣ ಮಾಡಲಾಯಿತು. ಈ ಪ್ರತಿಮೆಯನ್ನು ದಿ. ರಾಜೇಶ್ವರಿ ವಿಶ್ವನಾಥ ‌ಕತ್ತಿ ಚಾರಿಟೇಬಲ್ ಟ್ರಸ್ಟ್ ಇವರು ಕಾಣಿಕೆ ರೂಪದಲ್ಲಿ ನೀಡಿದ್ದರು. 

ಸುದ್ದಿ ಓದಿ