ಸಂಗಮೇಸ್ವರಸ್ವಾಮಿ ರಥೋತ್ಸವ
ಬ್ಯಾಡಗಿ 09 : ಪಟ್ಟಣದ ಸಂಗಮೇಸ್ವರ ನಗರದ ಸಂಗಮೇಸ್ವರಸ್ವಾಮಿ ರಥೋತ್ಸವ ಮಂಗಳವಾರ ಸಂಜೆ ಶ್ರದ್ದಾಭಕ್ತಿಯಿಂದ ನೆರವೇರಿಸಲಾಯಿತು. ಜಾನಪದ ಕಲಾ ತಂಡ, ವೀರಭದ್ರನ ಕುಣಿತ ಮತ್ತು ಮಹಿಳಾ ವೀರಗಾಸೆ ರಥೋತ್ಸವದಲ್ಲಿ ವಿಶೇಷ ಆಕರ್ಷಣೆ ನೀಡಿದವು. ವಿದ್ಯುತ್ ದೀಪ ಮತ್ತು ಪುಷ್ಪಗಳಿಂದ ಅಲಂಕರಿಸಿದ ರಥೋತ್ಸವದ ಕಳಸಕ್ಕೆ ಭಕ್ತರು ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿಯನ್ನು ಸಮಪ್ರಿಸುತ್ತಿರುವ ದೃಶ್ಯಗಳು ಕಂಡು ಬಂದವು. ಸಂಜೆ 5 ಕ್ಕೆ ಆರಂಭವಾದ ರಥೋತ್ಸವ ಗುಮ್ಮನಹಳ್ಳಿ ರಸ್ತೆಯವರೆಗೂ ಸಾಗಿತು. ದಾರಿಯುದ್ಧಕ್ಕೂ ಹಣ್ಣು ಕಾಯಿ ನೈವೇದ್ಯ ಅರ್ಿಸಿದರು. ರಾತ್ರಿ 8 ಗಂಟೆಯ ಬಳಿಕ ಗೋಧಿ ಹುಗ್ಗಿ. ಅನ್ನ ಸಾಂಬಾರ ಪ್ರಸಾದ ವಿತರಿಸಲಾಯಿತು ಎಂದು ಸಂಮೇಶ್ವರ ಟ್ರಸ್ಟ್ ಕಮೀಟಿಯ ಚಂದ್ರಶೇಖರ ಹೊಸಮನಿ ತಿಳಿಸಿದರು.