ಮಹಲಿಂಗಪುರ

ಸಾಹಿತಿ ಸಂಗಮೇಶ ಕೋಟಿ ನೆನಪಲ್ಲಿ ಪತ್ನಿ ಪುಸ್ತಕ ದಾನ

ಸಾಹಿತಿ ಸಂಗಮೇಶ ಕೋಟಿ ನೆನಪಲ್ಲಿ ಪತ್ನಿ ಪುಸ್ತಕ ದಾನ
ಮಹಾಲಿಂಗಪುರದ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪ್ರೌಢಶಾಲೆಯ ಗ್ರಂಥಾಲಯಕ್ಕೆ ಭಾಗ್ಯಶ್ರೀ ಕೋಟಿ ಅವರು ಅಗಲಿದ ಪತಿಯ ಹೆಸರಲ್ಲಿ

ಮಹಾಲಿಂಗಪುರ27: ಸ್ಥಳೀಯ ವಿದ್ಯಾನಗರ ನಿವಾಸಿ, ವಚನ ಸಾಹಿತ್ಯ ಪರಿಷತ್ ಅಧ್ಯಕ್ಷೆ ಭಾಗ್ಯಶ್ರೀ ಕೋಟಿ ಅವರು ತಮ್ಮ ಅಗಲಿದ ಪತಿ ಸಾಹಿತಿ ಸಂಗಮೇಶ ಕೋಟಿ ನೆನಪಲ್ಲಿ ಶಾಲೆಗೆ ಪುಸ್ತಕ ದಾನ ಮಾಡುವ ಮೂಲಕ ಅಕ್ಷರ ಪ್ರೀತಿ ಹಂಚುವ ಕಾರ್ಯ ಮಾಡುತ್ತಿದ್ದಾರೆ.  

ಮಹಾಲಿಂಗಪುರದ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಗ್ರಾಮರ್, ಗಿನ್ನಿಸ್ ಬುಕ್ ಸೇರಿದಂತೆ 135 ಪುಸ್ತಕಗಳನ್ನು ಹಾಗೂ ಗುಪ್ತ ನಗದು ದೇಣಿಗೆಯನ್ನೂ ನೀಡಿ ಶಾಲೆಯ ಗ್ರಂಥಾಲಯಕ್ಕೆ ಪ್ರೋತ್ಸಾಹ ನೀಡಿದರು.  

ನಂತರ ಮಾತನಾಡಿ, ಪ್ರಸಿದ್ದ ಲೇಖಕರು ಬರೆದ, ಜನಪ್ರಿಯ ಪ್ರಕಾಶನದ ಅದ್ಭುತ ಪುಸ್ತಕಗಳು ಸಂಗ್ರಹದಲ್ಲಿದ್ದು, ಅಗತ್ಯವಿದ್ದ ಕಡೆ ಓದುವ ಹವ್ಯಾಸಿಗಳಿಗೆ ಉಚಿತವಾಗಿ ನೀಡುತ್ತಿದ್ದೇನೆ. ಪುಸ್ತಕ ಪ್ರೀತಿ ಉಳಿಯಬೇಕು. ಪುಸ್ತಕವೇ ಜೀವಾಳದಂತೆ ಪ್ರೀತಿಸಿ ಬದುಕಿದ ಪತಿಯ ಹೆಸರೂ ಉಳಿಯಬೇಕು. ಅಕ್ಷರ ಪ್ರೀತಿ ಹಂಚುವುದರಿಂದ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆಂಬ ನಂಬಿಕೆ ನನಗಿದೆ ಎಂದರು.  

ಪ್ರಾಚಾರ್ಯ ಡಿ.ಬಿ.ಕೋಳಿ, ಉಪಪ್ರಾಂಶುಪಾಲ ಬಿ.ಎನ್‌.ಅರಕೇರಿ, ವಿಜ್ಞಾನ ಶಿಕ್ಷಕಿ ಸಪನಾ ಅನಿಗೋಳ ಇದ್ದರು. 

ಸುದ್ದಿ ಓದಿ