ಸಮಂತಾ ನಡೆಯಿಂದ ಮತ್ತೊಮ್ಮೆ ಅಕ್ಕಿನೇನಿ ಕುಟುಂಬಕ್ಕೆ ಬೇಸರ…!
ಹೈದ್ರಾಬಾದ್: ಮಾರ್ಚ್ 10 :ಟಾಲಿವುಡ್ನ ಕ್ಯೂಟ್ ಕಪಲ್ ಎನಿಸಿಕೊಂಡಿದ್ದ ಸಮಂತಾ ಹಾಗೂ ನಾಗಚೈತನ್ಯ ಕಳೆದ ಅಕ್ಟೊಬರ್ 2ರಂದು ವಿಚ್ಛೇದನವನ್ನು ಘೋಷಿಸಿ, ತಮ್ಮ ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದರು. ಈ ವಿಚಾರ ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು. ಅಲ್ಲದೇ ಇವರಿಬ್ಬರ ಡಿವೋರ್ಸ್ ವಿಚಾರ ಟಾಲಿವುಡ್ನ ಅಂಗಳದಲ್ಲಿ ಸಖತ್ ಸದ್ದು ಮಾಡಿತ್ತು. ಅನೇಕರು ಸಮಂತಾ ಅವರನ್ನು ಟ್ರೋಲ್ ಮಾಡಿದ್ದರು. ಅಲ್ಲದೇ ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದಾಗಿನಿಂದಲೂ ಸಮಂತಾ ವಿರುದ್ಧದ ಟೀಕೆಗಳು ನಿಂತಿಲ್ಲ.ಸಾಮಾಜಿಕ ಜಾಲತಾಣದಲ್ಲಿ, ಯೂಟ್ಯೂಬ್ ಚಾನೆಲ್ಗಳಲ್ಲಿ ಬರುತ್ತಿದ್ದ ಕಾಮೆಂಟ್ಗಳು, ಟ್ರೋಲಿಂಗ್ ಮಾನನಷ್ಟವಾಗಿ ಸ್ಯಾಮ್ ಈ ಹಿಂದೆ ನ್ಯಾಯಾಲಯದ ಮೊರೆ ಹೋಗಿದ್ದರು. ಹೀಗೆ ಒಂದಲ್ಲಾ ಒಂದು ವಿವಾದಗಳ ಮೂಲಕ ಸುದ್ದಿಯಲ್ಲಿದ್ದ ಸಮಂತಾ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.ಹೌದು ಸ್ಯಾಮ್ ತಮ್ಮ ಮದುವೆ ಸೀರೆಯನ್ನು ಅಕ್ಕಿನೇನಿ ಕುಟುಂಬಕ್ಕೆ ವಾಪಸ್ ಮಾಡಿದ್ದಾರೆ. ಅಂದರೆ ಮದುವೆಯಲ್ಲಿ ನಾಗಚೈತನ್ಯ ಮನೆಯವರು ಕೊಟ್ಟಿದ್ದ ರೇಷ್ಮೆ ಸೀರೆಯನ್ನು ಅವರಿಗೇ ಮರಳಿಸಿದ್ದಾರೆ ಎಂಬ ಗುಸು ಗುಸು ಕೇಳಿಬಂದಿದೆ. ಇನ್ನು ಸಮಂತಾ ಸೀರೆ ವಾಪಸ್ ಮಾಡಿರುವುದನ್ನು ಅಕ್ಕಿನೇನಿ ಫ್ಯಾಮಿಲಿ ವಿರೋಧ ಮಾಡಿದೆಯಂತೆ. ಮದುವೆ ಸೀರೆಯನ್ನು ವಾಪಸ್ ಕೊಟ್ಟಿದ್ದು, ಕುಟುಂಬದ ಸದಸ್ಯರಲ್ಲಿ ಬೇಸರ ಮೂಡಿಸಿದೆಯಂತೆ.