ಬಿ.ವಿ.ಎಸ್ ಪ್ರೌಢ ಶಾಲೆಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ
ರನ್ನಬೆಳಗಲಿ/ಮಹಾಲಿಂಗಪುರ 04: ರನ್ನ ಕ್ರೀಡಾಂಗಣ ಮುಧೋಳ ಮೈದಾನದಲ್ಲಿ ಇತ್ತಿಚೆಗೆ ಮುಕ್ತಾಯಗೊಂಡ ರನ್ನ ಬೆಳಗಲಿ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟದಲ್ಲಿ ಬೆಳಗಲಿ ವಿದ್ಯಾವರ್ಧಕ ಸಂಘದ ಪ್ರೌಢ ಶಾಲೆಯ ಕ್ರೀಡಾಪಟುಗಳು ಹೆಚ್ಚು ಕ್ರೀಡೆಗಳಲ್ಲಿ ವಿಜಯ ಸಾಧಿಸಿ ಹೆಚ್ಚು ಅಂಕಗಳನ್ನು ಪಡೆದು ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದುಕೊಂಡರು.
ಬಾಲಕರ ವಿಭಾಗದಲ್ಲಿ ವಾಲಿಬಾಲ ಪ್ರಥಮ, 5 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ವಿಶ್ವಲ ಮಲಾವಡಿ, ಹ್ಯಾಮರ್ ಎಸೆತದಲ್ಲಿ ವಿನಾಯಕ ಅಂಬಲಝರಿ ಪ್ರಥಮ, ಜಾವಲಿನ್ ಎಸೆತದಲ್ಲಿ ಬಸವರಾಜ ಮಂಟೂರ ದ್ವಿತೀಯ, ಪೋಲವಾಲ್ಟದಲ್ಲಿ ದ್ವಿತೀಯ ಸ್ಥಾನ ಚೇತನ ಹಂಪಿಹೋಳಿ ಪ್ರಶಸ್ತಿ ಪಡೆದುಕೊಂಡರು.
ಬಾಲಕಿಯರ ವಿಭಾಗದಲ್ಲಿ ಕಬಡ್ಡಿ, ಖೋಖೋ, ವಾಲಿಬಾಲ್, ಥ್ರೋಬಾಲ್ ಆಟಗಳಲ್ಲಿ ದ್ವಿತೀಯ ಸ್ಥಾನ, ವೈಯಕ್ತಿಕ ವಿಭಾಗ 200 ಮೀ ಓಟದಲ್ಲಿ ಪ್ರಥಮ ಸ್ಥಾನ ಸುಕನ್ಯಾ ಸವದಿ, 400 ಮೀ ಓಟದಲ್ಲಿ ಸುಧಾ ಲಾಲಿಬುಡ್ಡಿ ಪ್ರಥಮ, 800 ಮೀ ಓಟದಲ್ಲಿ ಶೃತಿ ಧರೆಗೌಡರ ಪ್ರಥಮ, ಗುಂಡು ಎಸೆತ ಮತ್ತು ಚಕ್ರ ಎಸೆತದಲ್ಲಿ ಕಾವೇರಿ ಸಂಕ್ರಟ್ಟಿ ದ್ವಿತೀಯ, ಎತ್ತರ ಜಿಗಿತದಲ್ಲಿ ಸುಚಿತ್ರಾ ಲಾಲಿಬುಡ್ಡಿ ಪ್ರಥಮ, ಹ್ಯಾಮರ್ ಎಸೆತದಲ್ಲಿ ದ್ವಿತೀಯ ಸಂಧ್ಯಾ ಹಂಜಿ, ಸುಧಾ ಲಾಲಿಬುಡ್ಡಿ, ಪೋಲವಾ,ಲ್ಟ್ ದಲ್ಲಿ ಪ್ರಥಮ, ಸುಚಿತ್ರಾ ಲಾಲಿಬುಡ್ಡಿ, ದ್ವಿತೀಯ ಸ್ಥಾನ ಹೀಗೆ ಒಟ್ಟಾರೆ ಕ್ರೀಡೆಯಲ್ಲಿ ಹೆಚ್ಚು ಸ್ಥಾನಗಗಳಲ್ಲಿ ಅಗ್ರಗಣ್ಯರಾದ ಪ್ರಯುಕ್ತ ಅತಿ ಹೆಚ್ಚು ಅಂಕ ಪಡೆದು 'ವಲಯ ಮಟ್ಟದ ಸಮಗ್ರ ವೀರಾಗ್ರಣಿ' ಪ್ರಶಸ್ತಿ ಪಡೆದು
ಮುಧೋಳ ತಾಲೂಕಾ ಮಟ್ಟದ ಪುಟಬಾಲ್ ಕ್ರೀಡೆಯಲ್ಲಿ ಬಾಲಕಿಯರ ತಂಡ ಪ್ರಥಮ, ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡು ತಾಲೂಕಾ ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಆಡುವ ಅರ್ಹತೆ ಪಡೆದುಕೊಂಡಿದ್ದಾರೆ.
ಈ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಮಾರ್ಗದರ್ಶನ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರಾದ ಕೆ.ಬಿ.ಕುಂಬಾಳಿ, ಮುಖ್ಯ ಗುರುಗಳಾದ ಎಮ್.ಎಸ್.ಗಾಣಿಗೇರ ಮತ್ತು ಸಿಬ್ಬಂದಿ ವರ್ಗ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಿ.ವಿ.ಭರಮನಿ ಚೇರಮನ್ನ ಎಸ್.ಆಯ್.ಒಂಟಗೋಡಿ, ಕಾರ್ಯದರ್ಶಿಗಳಾದ ಪಂಡಿತ ಪೂಜಾರ ಹಾಗೂ ಎಲ್ಲ ಆಡಳಿತ ಮಂಡಳಿಯ ಸದಸ್ಯರು ಅಭಿನಂದಿಸಿದ್ದಾರೆ.