ಮಹಲಿಂಗಪುರ

ಸೈದಾಪುರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ

ಸೈದಾಪುರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ

ಮಹಾಲಿಂಗಪುರ  25:  ಸ್ವಾಮಿ ವಿವೇಕಾನಂದರ ವಾಣಿಯಂತೆ ಮಗುವಿನಲ್ಲಿ ಅಂತರ್ಗತವಾಗಿರುವ ದೈವೀಕತೆಯನ್ನು ಹೊರಗೆಳೆಯುವುದೇ ಶಿಕ್ಷಣದ ಮೂಲ ಧ್ಯೇಯ, ಪ್ರತಿಭಾ ಕಾರಂಜಿ ಅದಕ್ಕೆ ಪೂರಕ ಎಂದು ವಿಜಯಪುರ ಮತ್ತು ಬಾಗಲಕೊಟ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಈರನಗೌಡ ಕರಿಗೌಡ ಹೇಳಿದರು. 

ಸಮೀಪದ ಕೆಸರಗೊಪ್ಪ ಗ್ರಾಮದ ಮಾಯವ್ವ ವಿಠ್ಠಲ ಕಪರಟ್ಟಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸೈದಾಪುರ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ ತೆರೆದು ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಜ್ಯೋತೆಪ್ಪ ಕಪರಟ್ಟಿಯವರ ಕಾರ್ಯ ಶ್ಲಾಘನೀಯ ಎಂದರು. 

ಕೆಎಂಎಫ್ ಮಾಜಿ ಅಧ್ಯಕ್ಷ ರಂಗನಗೌಡ ಪಾಟೀಲ ಮಾತನಾಡಿ, ಕಪರಟ್ಟಿಯವರ ಶಿಕ್ಷಣ ಪ್ರೇಮ ಮಾದರಿ, ಸರ್ವರೂ ಬೆಂಬಲಿಸಿ ಎಂದರು. 

ಕ್ಲಸ್ಟರಿನ 30ಕ್ಕೂ ಅಧಿಕ ಶಾಲೆಯ ಮಕ್ಕಳು ಭಾಗವಹಿಸಿ ಪ್ರತಿಭೇ ಮೆರೆದರು. 

ಸಂಸ್ಥೆಯ ಅಧ್ಯಕ್ಷ ಮಹಾದೇವ ಕಪರಟ್ಟಿ ಅಧ್ಯಕ್ಷತೆ ವಹಿಸಿ, ಕೆಎಂಎಫ್ ನಿರ್ದೇಶಕ ಸಿದ್ದಣ್ಣ ಕಡಪಟ್ಟಿ, ಗ್ರಾಪಂ ಅಧ್ಯಕ್ಷೆ ಸವಿತಾ ದೊಡ್ಡಮನಿ, ಉಪಾಧ್ಯಕ್ಷೆ ತಿಪ್ಪವ್ವ ಬಾಡಗಿ, ಸಿಆರ್‌ಪಿ ಟಿ.ಎಂ.ನಾಯಕವಾಡಿ, ಬಿಆರ್‌ಪಿ ಎಸ್‌.ಎಲ್‌.ಗಣಿ, ಸಜ್ಜನ, ಮುಖಂಡರಾದ ಪರ​‍್ಪ ಬ್ಯಾಕೋಡ, ಭೀಮಶಿ ಸಸಾಲಟ್ಟಿ, ದುಂಡಪ್ಪ ಜಾಧವ, ಮಾರುತಿ ಖರೋಶಿ, ಧರೆಪ್ಪ ಬ್ಯಾಕೋಡ, ಬಸಪ್ಪ ಬರಗಿ, ಭೀಮಶಿ ಬ್ಯಾಕೋಡ, ವಿಠ್ಠಲ ಢವಳೇಶ್ವರ, ಯಮನಪ್ಪ ಕಾರಜೋಳ, ವಿಠ್ಠಲ ಸಂಶಿ, ಸತ್ಯಪ್ಪ ಹುದ್ದಾರ, ಮಹಾದೇವ ಸಸಾಲಟ್ಟಿ, ಸಿ.ವಿ.ಚೌದ್ರಿ, ಪರಸಪ್ಪ ಕೊಣ್ಣೂರ, ಮಹಾಲಿಂಗ ಬಾಡಗಿ, ಸಿದ್ದು ಸತ್ತಿಗೇರಿ, ವಿಠ್ಠಲ ಬನಾಜ, ನಾಗಪ್ಪ ಪೂಜಾರಿ, ಜಾನವ್ವ ಕಪರಟ್ಟಿ, ಮಲ್ಲಿಕಾರ್ಜುನ  ಖಾನಟ್ಟಿ, ಅನ್ನಪೂರ್ಣ ಕಪರಟ್ಟಿ, ಸುಚಿತ್ರಾ ಕಪರಟ್ಟಿ, ಮಹಾನಂದ ಬರಗಿ, ಸುನಂದಾ ಕಪರಟ್ಟಿ ಇತರರಿದ್ದರು. 

ಶಿಕ್ಷಕಿ ಶಶಿಕಲಾ, ಸುಜಾತಾ ಪ್ರಾರ್ಥಿಸಿ, ಸಂಸ್ಥೆಯ ಸಂಸ್ಥಾಪಕ ಜ್ಯೋತೆಪ್ಪ ಕಪರಟ್ಟಿ ಸ್ವಾಗತಿಸಿ, ಶಿಕ್ಷಕ ಆನಂದ ತಮದಡ್ಡಿ ನಿರೂಪಿಸಿದರು. 


ಸುದ್ದಿ ಓದಿ