ಮಹಲಿಂಗಪುರ

ಪರಿಸರ ದಿನಾಚರಣೆಯಲ್ಲಿ ಗಮನ ಸೆಳೆದ ಸೈದಾಪುರ ಕ್ಲಸ್ಟರ್‌.

ಪರಿಸರ ದಿನಾಚರಣೆಯಲ್ಲಿ ಗಮನ ಸೆಳೆದ ಸೈದಾಪುರ ಕ್ಲಸ್ಟರ್‌.

ಮಹಾಲಿಂಗಪುರ : ಸಿಆರ್‌ಪಿ ಟಿ.ಎಂ.ನಾಯಿಕವಾಡಿ ಅವರ ನೇತೃತ್ವದಲ್ಲಿ ಸಮೀಪದ ಸೈದಾಪುರ ವಲಯದ ಎಲ್ಲಾ ಸರ್ಕಾರಿ,ಅನುದಾನಿತ,ಅನುದಾನ ರಹಿತ ಶಾಲೆಗಳಲ್ಲಿ ಅತ್ಯಂತ ವಿಶೇಷವಾಗಿ ಪರಿಸರ ದಿನ ಆಚರಿಸಿ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಜಾಗೃತಗೊಳಿಸಲಾಯಿತು. ಕೆಸರಗೊಪ್ಪ ತೋಟ ನಂ.1 ರ ಸರ್ಕಾರಿ ಶಾಲೆಯ ಮಕ್ಕಳು ಸಸಿ ನೆಟ್ಟು, ಸೈಕಲ್ ಜಾಥಾ ನಡೆಸಿ ಜಾಗೃತಿ ಮೂಡಿಸಿ ಗಮನ ಸೆಳೆದರು, ಪರಿಸರ ವಿಷಯ ಕುರಿತ ಚರ್ಚಾ ಸ್ಪರ್ಧೆ, ಕ್ವಿಜ್, ಚಿತ್ರಕಲೆ, ಭಾಷಣ, ನಿಬಂಧ, ರಂಗೋಲಿ,ರೂಪಕಗಳು ಮುಂತಾದ ವಿವಿಧ  ಸ್ಪರ್ಧೆಗಳನ್ನು ಏರಿ​‍್ಡಸಿ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು. ಭಗವಂತನ ಸೇವೆಗೆ ಸಮನಾದ ಪರಿಸರ ಜಾಗೃತಿ ಕಾರ್ಯವನ್ನು ಅತ್ಯಂತ ವಿಶಿಷ್ಠವಾಗಿ ಯಶಸ್ವಿಗೊಳಿಸಿದ ಕ್ಲಸ್ಟರಿನ ಗುರುಬಳಗಕ್ಕೆ ಇಲಾಖೆ ಪರವಾಗಿ ಅಭಿನಂದನೆಗಳು : ಟಿ.ಎಂ.ನಾಯಿಕವಾಡಿ, ಸಿಆರ್‌ಪಿ 


ಸುದ್ದಿ ಓದಿ