ಕಂಪ್ಲಿ

ಸಾಹಿತಿ ವಿದ್ಯಾಲಯ ವಿದ್ಯಾರ್ಥಿಗಳ ಎಸ್ಸೆಸ್ಸೆಲ್ಸಿ ಉತ್ತಮ ಸಾಧನೆ

ಸಾಹಿತಿ ವಿದ್ಯಾಲಯ ವಿದ್ಯಾರ್ಥಿಗಳ ಎಸ್ಸೆಸ್ಸೆಲ್ಸಿ ಉತ್ತಮ ಸಾಧನೆ

ಲೋಕದರ್ಶನ ವರದಿ

ಕಂಪ್ಲಿ26 : ವಿದ್ಯಾರ್ಥಿ ಜೀವನದ ಮಹತ್ತರ ಘಟ್ಟವಾದ ಹತ್ತನೇ ತರಗತಿ ವಾರ್ಷಿಕ ಪರೀಕ್ಷೆಯ ಫಲಿತಾಂಶಗಳು ಪ್ರಕಟವಾಗಿದ್ದು, ಕಂಪ್ಲಿ ಪಟ್ಟಣದ ಸಾಹಿತಿ ವಿದ್ಯಾಲಯ ಆಂಗ್ಲ ಮಾಧ್ಯಮ ಹೈಸ್ಕೂಲ್  ವಿದ್ಯಾರ್ಥಿ ಜೆ.ಸಹನಾ 625ಕ್ಕೆ 594 (ಶೇ.95.04ಅ) ಅಂಕ ಎಸ್‌.ಪ್ರಿಯಾಂಕ 625ಕ್ಕೆ 541 (ಶೇ.86.56ಅ) ಅಂಕ ನಾಸಿರಾ 625ಕ್ಕೆ 540 (ಶೇ.86.04ಅ) ಅಂಕ ಕೆ.ಮಾನಸ 625ಕ್ಕೆ 536 (ಶೇ.85.76ಅ) ಅಂಕ ಸರ‌್ವನ್‌ಚೌದರಿ 625ಕ್ಕೆ 535 (ಶೇ.85.6ಅ) ಅಂಕ ವೈ.ಚಂದ್ರಿತಾ 625ಕ್ಕೆ 535 (ಶೇ.85.6ಅ) ಶೇಕಡ 99ಅ ರಷ್ಟು ಉತ್ತಮ ಅಂಕ ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಸಾಹಿತಿ ವಿದ್ಯಾಲಯ ಮುಖ್ಯಾಸ್ಥರಾದ ಸ್ವಪ್ನ ಉದಯಶಂಕರ ತಿಳಿಸಿದ್ದಾರೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು 36 ರಲ್ಲಿ 35  ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಇದರಲ್ಲಿ ಎ+ ಗ್ರೇಡ್ 01 ಎ ಗ್ರೇಡ್ 08 ಬಿ+ ಗ್ರೇಡ್ 07 ಬಿ ಗ್ರೇಡ್ 09 ಸಿ+ 07 ಸಿ 03 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಈ ಶಾಲೆ 03 ವಿದ್ಯಾರ್ಥಿಗಳು ಕನ್ನಡದಲ್ಲಿ ನೂರಕ್ಕೆ ನೂರು ಮತ್ತು ಹಿಂದಿಯಲ್ಲಿ ಒಬ್ಬ ವಿದ್ಯಾರ್ಥಿ ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾರೆ ಶಿಕ್ಷಕರು ವೃಂದದವರು ಅಭಿನಂದಿಸಿದ್ದಾರೆ. 


ಸುದ್ದಿ ಓದಿ