ರಾಷ್ಟ್ರೀಯ

ಶಬರಿಮಲೆ; ಜ. 15ಕ್ಕೆ ಮಹಾಸಂಕ್ರಮಣ ಪೂಜೆ

ಶಬರಿಮಲೆ; ಜ. 15ಕ್ಕೆ ಮಹಾಸಂಕ್ರಮಣ ಪೂಜೆ
ಪಥನಮಿಟ್ಟ, ಜ 8 ಕೇರಳದ ಶಬರಿಮಲೆಯ ಅಯ್ಯಪ್ಪ ದೇಗುಲದಲ್ಲಿ ಜ. 15ರಂದು ಮಧ್ಯರಾತ್ರಿ 2 ಗಂಟೆಗೆ ಮಹಾಸಂಕ್ರಮಣ ಪೂಜೆ ನಡೆಯಲಿದೆ. ಜ. 14ರ ಮಧ್ಯಾಹ್ನದಿಂದ ಮಧ್ಯರಾತ್ರಿ 2.30ರವರೆಗೆ ದೇಗುಲದ ಗರ್ಭಗುಡಿ ತೆರೆದಿರಲಿದೆ. 2.30ಕ್ಕೆ ಮಕರವಿಲಕ್ಕು ಪೂಜೆ ಪೂರ್ಣಗೊಂಡ ನಂತರ ಗರ್ಭಗುಡಿಯ ಬಾಗಿಲು ಮುಚ್ಚಲಾಗುವುದು. ನಂತರ ಮುಂಜಾನೆ 4 ಗಂಟೆಗೆ ದಿನನಿತ್ಯದ ಪೂಜೆಗೆ ಮತ್ತೊಮ್ಮೆ ತೆರೆಯಲಾಗುವುದು. ಈ ನಡುವೆ, ಡಿ.30ರಿಂದ ಮಕರವಿಲಕ್ಕು ಹಬ್ಬದ ಪದ್ಧತಿಗಳು ಆರಂಭಗೊಂಡಿದ್ದು, ಇಲ್ಲಿಯವರೆಗೆ 11,434 ಜನರು ಶಬರಿಮಲೆ ಸನ್ನಿಧಾನದಲ್ಲಿನ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇವರಲ್ಲಿ 1680 ಜನರು ಹೃದ್ರೋಗಿಗಳಾಗಿದ್ದು 20ರಿಂದ 76 ವರ್ಷದೊಳಗಿನವರಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿ ಓದಿ