ಹಗರಿಬೊಮ್ಮನಹಳ್ಳಿ

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಅಗತ್ಯ: ವರ್ಧನ್

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಅಗತ್ಯ: ವರ್ಧನ್

ಲೋಕದರ್ಶನ ವರದಿ 

ಹೂವಿನಹಡಗಲಿ 13:  ಪ್ರೌಢ ಶಾಲಾ ಮುಖ್ಯ ಗುರುಗಳು, ಶಿಕ್ಷಕರು ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಕ್ರಮವಹಿಸಲು ಕಲಬುರಗಿ ಅಪರ ಆಯುಕ್ತ ಕಾರ್ಯಾಲಯದ ನಿರ್ದೇಶಕ ಡಾ. ಬಿ.ಕೆ.ಎಸ್‌.ವರ್ಧನ್ ಹೇಳಿದರು. 

ಇಲ್ಲಿನ ಕಾರ್ಮೆಲ್ ಸೇವಾ ಸದನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಣಾಧಿಕಾರಿಗಳ ಸಂಘದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು ತರಗತಿಯಲ್ಲಿ ಪಠ್ಯಕ್ರಮ ಮುಗಿಸಿ ಪುನರ್ ಮನನ ಮಾಡಬೇಕು ಜತೆಗೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಪರೀಕ್ಷೆಗೆ ನೋಂದಣಿ ಆಗುವ ಹಾಗೆ ಜವಾಬ್ದಾರಿಯಿಂದ ಕೆಲಸ ಆಗಬೇಕಾಗಿದೆ ಎಂದ ಅವರು ಕ್ಲಿಷ್ಟಕರ ವಿಷಯಗಳಾದ ಗಣಿತ, ವಿಜ್ಞಾನ,ಇಂಗ್ಲೀಷ ಪಠ್ಯೆಕ್ರಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ಗಮನ ಹರಿಸಬೇಕು ಎಂದು ತಿಳಿಸಿದರು. 

ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ ಎನ್‌.ಹಳ್ಳಿಗುಡಿ ಮಾತನಾಡಿ 10ನೇತರಗತಿ ಫಲಿತಾಂಶ ಸುಧಾರಣೆಗಾಗಿ ಸಧ್ಯದಲ್ಲೇ ಕಾರ್ಯಾಗಾರ ಆಯೋಜಿಸಲಾಗುವುದು ಎಂದರು.ಡಯಟ್ ಹಿರಿಯ ಉಪನ್ಯಾಸಕ ಪಾರಿಬಸವರಾಜ ಮಾತನಾಡಿದರು. ತಾಲೂಕು ದೈಹಿಕ ಅಧೀಕ್ಷಕ ಮುಸ್ತಫಾ. ಪ್ರೌಢ ಶಾಲಾ ಮುಖ್ಯ ಗುರುಗಳ ಸಂಘದ ಅಧ್ಯಕ್ಷ ಪಿ.ಪ್ರಕಾಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಿಟ್ಯಾನಾಯ್ಕ, ಫಾದರ್ ಡೇಂಜಿಲ್ ವೇಗಸ್,ಸರ್ವಮಂಗಳ, ಶಿಕ್ಷಣ ಸಂಯೋಜಕರಾದ ಮಲ್ಲಿಕಾರ್ಜುನ ಇದ್ದರು. 


ಸುದ್ದಿ ಓದಿ