ಎಸ್.ಎಂ.ಮುಗೆನ್ನವರ ಅವಿರೋಧ ಆಯ್ಕೆ
ಎಸ್.ಎಂ.ಮುಗೆನ್ನವರ ಅವಿರೋಧ ಆಯ್ಕೆ
ಮಹಾಲಿಂಗಪುರ 24: ಸಮೀಪದ ಸಮೀರವಾಡಿಯ ಕಾಮಿಕ ಬಡಾವಣೆಯ ಸಕಿಪ್ರಾ ಶಾಲೆಯ ಶಿಕ್ಷಕ ಎಸ್.ಎಂ.ಮುಗೆನ್ನವರ ರಾಜ್ಯ ಸರ್ಕಾರಿ ನೌಕರರ ಸಂಘ, ರಬಕವಿ ಬನಹಟ್ಟಿ ತಾಲೂಕು ಘಟಕದ ನೂತನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಸಂಘದ ತಾಲೂಕಾ ಅಧ್ಯಕ್ಷ ಬಸವರಾಜ ಹನಗಂಡಿ ತಿಳಿಸಿದ್ದಾರೆ.
ಹಿರಿಯ ಶಿಕ್ಷಕರಾದ ಐ.ಜಿ.ಮಠಪತಿ, ಪಿ.ಎಂ.ಬ್ಯಾಕೋಡ, ಎಸ್.ಎಸ್.ಹಾದಿಮನಿ, ಸಬರದ, ಎಸ್.ಎನ್.ಬ್ಯಾಳಿ, ಕಾಮರಡ್ಡಿ, ಯು.ಬಿ.ಬೆನವಾಡಿ, ಕೆ.ಎಂ.ಕಾಳವ್ವಗೋಳ, ವೈ.ಬಿ.ಲಮಾಣಿ ಇತರರು ಅಭಿನಂದಿಸಿದ್ದಾರೆ.