ಮಹಲಿಂಗಪುರ

ಶ್ರೀರಾಮ ಮಂದಿರ ನಿರ್ಮಾಣಕ್ಕೆ ಧನ ಸಮರ್ಪನಾ ಅಭಿಯಾನಕ್ಕೆ ಚಾಲನೆ

ಶ್ರೀರಾಮ ಮಂದಿರ ನಿರ್ಮಾಣಕ್ಕೆ ಧನ ಸಮರ್ಪನಾ ಅಭಿಯಾನಕ್ಕೆ ಚಾಲನೆ

ಮಹಾಲಿಂಗಪುರ : ದೇಶದ ಸಂಕಲ್ಪ ಹಾಗೂ ಸ್ವಾಭಿಮಾನ ರಾಮಮಂದಿರ ನಿರ್ಮಾಣದ ಕನಸು ಐದು ಶತಮಾನಗಳದಾಗಿದೆ. ಲಕ್ಷಾಂತರ ಜನ ಈ ಕಾರ್ಯದಲ್ಲಿ ತಮ್ಮ ಪ್ರಾಣ ಸಮರ್ಪಣೆಯನ್ನೂ ಮಾಡಿದ್ದಾರೆ. ಇಸ್ಲಾಂ ಹಾಗೂ ಕ್ರೈಸ್ತ ಧರ್ಮಿಯರು ನಮ್ಮ ಮೇಲೆ ನಿರಂತರ ದಾಳಿ ದಬ್ಬಾಳಿಕೆಗಳಿಂದ ಭರತಖಂಡದ ಸಂಸ್ಕೃತಿ ಹಾಳು ಮಾಡಿದ್ದಾರೆ ಎಂದು ಶ್ರೀರಾಮಸೇನೆಯ ಕರ್ನಾಟಕ ರಾಜ್ಯ ಉತ್ತರ ಪ್ರಾಂತ ಸಂಚಾಲಕ ಮಹಾಲಿಂಗಪ್ಪ ಗುಂಜಿಗಾವಿ ಹೇಳಿದರು.ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣಕ್ಕೆ ಸಾರ್ವಜನಿಕರಿಂದ ಧನ ಸಮರ್ಪನ ಅಭಿಯಾನ ಕಾರ್ಯಕ್ರಮ ಸೋಮವಾರ ಸಮೀಪದ ಮಧೋಳ ತಾಲೂಕಿನ ರನ್ನ ಬೆಳಗಲಿ ಗ್ರಾಮದ ಬಂದ ಲಕ್ಷ್ಮಿ ದೇವಿ ದೇವಸ್ಥಾನದಲ್ಲಿ ಜರುಗಿತು.

ವಿಶ್ವ ಹಿಂದೂ ಪರಿμÀತ್, ಬಿಜೆಪಿ, ಸಂಘ ಪರಿವಾರ, ಲಾಲಕೃμÀ್ಣ ಅಡ್ವಾಣಿಯವರ ನಿರಂತರ ಹೋರಾಟದ ಫಲವಾಗಿ ಈಗ ರಾಮಮಂದಿರ ನಿರ್ಮಾಣವಾಗುವುದರ ಮೂಲಕ ದೇಶದ ಸ್ವಾಭಿಮಾನ ಮತ್ತೆ ತಲೆಯೆತ್ತುತಿದೆ. ಕಾರಣ ಗ್ರಾಮದ ಎಲ್ಲರೂ ಈ ಸಮರ್ಪನ ಅಭಿಯಾನದಲ್ಲಿ ಪಾಲ್ಗೊಂಡು ಕೃತಾರ್ಥರಾಗಬೇಕು ಎಂದು ಕರೆಕೊಟ್ಟರು. 

ಇದೇ ಸಂದರ್ಭದಲ್ಲಿ ಬಾಗಲಕೋಟ ಜಿಲ್ಲಾ ಪಂಚಮಸಾಲಿ ಸಮುದಾಯದ ಅಧ್ಯಕ್ಷ ಧರೆಪ್ಪ ಸಾಂಗ್ಲಿಕರ್ ಮಾತನಾಡಿದರು.ಅಭಿಯಾನದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಸಿದ್ದು ಗೌಡ ಪಾಟೀಲ್, ಮುಧೋಳ ತಾಲೂಕ ಭಾಜಪ ಗ್ರಾಮೀಣ ಮಂಡಲದ ಉಪಾಧ್ಯಕ್ಷ ಪಂಡಿತ್ ಪೂಜಾರಿ,ಚಿಕ್ಕಪ್ಪ ನಾಯಕ್, ಶಿವನಗೌಡ ಪಾಟೀಲ, ಮೋಹನ್ ರಾವ್ ಕುಲಕರ್ಣಿ, ಅಶೋಕ ಸಿದ್ದಾಪುರ, ಸಂಗನಗೌಡ ಪಾಟೀಲ್, ಬಸವರಾಜ್ ಚಿಕ್ಕಣ್ಣವರ್, ರಂಗಪ್ಪ ಒಂಟಗೋಡಿ, ಸಂಗಪ್ಪ ಹಿಪ್ಪಲಕರ, ಅಶೋಕ್ ಮಲಕಾಪುರ, ಲಕ್ಕಪ್ಪ ಮೇಡ್ಯಾಗೋಳ, ಶ್ರೀಶೈಲ ಹೊಸಮನಿ, ಚೆನ್ನಪ್ಪ ತೋಳನೂರ, ಗಂಗಪ್ಪ ಗುಡ್ಲಾರ, ಪರಮಾನಂದ್ ಬಂದಕ್ಕನವರ್, ಪರಪ್ಪ ದೊಡ್ಡಟ್ಟಿ, ಪುಟ್ಟು ಕುಲಕರ್ಣಿ, ಪಾಂಡಪ್ಪ ಸಿದ್ದಾಪುರ, ಮಹಾಲಿಂಗಪ್ಪ ಶೇಗುಣಸಿ ಇತರರು ಇದ್ದರು.

ಸುದ್ದಿ ಓದಿ