ಅತಿಥಿ ಉಪನ್ಯಾಸಕರ ಧರಣಿಗೆ ಎಸ್ಎಫ್ಐ ಬೆಂಬಲ
ಹಗರಿಬೊಮ್ಮನಹಳ್ಳಿ 14: ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆ ಈಡೇರಿಸುವಂತೆ ತರಗತಿ ಬಹಿಷ್ಕರಿಸಿ ಪಟ್ಟಣದ ಪದವಿ ಕಾಲೇಜಿನಲ್ಲಿ ನಡೆಸುತ್ತಿರುವ ಧರಣಿಗೆ ಎಸ್ಎಫ್ಐನ ತಾಲೂಕು ಸಮಿತಿಯು ಬೇಡಿಕೆ ಈಡೇರಿಸುವಂತೆ ತಹಶಿಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಬೆಂಬಲ ಸೂಚಿಸಿ ಮನವಿ ಪತ್ರವನ್ನು ನೀಡಿದರು.
ಈ ಸಂಧರ್ಭದಲ್ಲಿ ಎಸ್ಎಫ್ಐನ ಜಿಲ್ಲಾ ಮುಖಂಡ ಜಯಸೂರ್ಯ ಮಾತನಾಡಿ ಅತಿಥಿ ಉಪನ್ಯಾಸಕರು ವಿವಿಧ ಬೇಡಿಕೆಗಳನ್ನು ಸರಕಾರ ಅಧಿವೇಶನದಲ್ಲಿ ಕೂಡಲೆ ಚರ್ಚಿಸಿ ಅವರಿಗೆ ನೆರವಾಗುವುದರ ಜೊತೆ ಬಹಿಷ್ಕರಿಸಿದ ತರಗತಿಗಳನ್ನು ಈ ಮೊದಲಿನಂತೆ ನಡೆಯುವ ಹಾಗೆ ಮಾಡಬೇಕು, ಉಪನ್ಯಾಸಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಎಸ್ಎಫ್ಐ ತಾಲೂಕು ಸಮಿತಿಯು ಮನವಿಯನ್ನು ಮಾಡುತ್ತದೆ, ತರಗತಿ ಬಹಿಷ್ಕಾರದಿಂದ ಮಕ್ಕಳ ವಿದ್ಯಾಭ್ಯಸಕ್ಕೆ ತೊಂದರೆಯಾಗಿದೆ, ಪ್ರತಿದಿನವೂ ಹತ್ತಾರು ಕಿ.ಮೀ. ದೂರದಿಂದ ತರಗತಿಗಳಿಗೆ ಬರುತ್ತಿದ್ದರೂ ,ಉಪನ್ಯಾಸಕರ ತರಗತಿ ಬಹಿಷ್ಕಾರದಿಂದ ತೊಂದರೆಯಾಗುತ್ತಿದೆ, ರಾಜ್ಯದಲ್ಲಿ ಜಾರಿಯಾಗಿರುವ ಎನ್ಇಪಿ ವಿಷಯಗಳಿಗೆ ಸೂಕ್ತ ಪಠ್ಯವಿಲ್ಲದೆ ವಿದ್ಯಾರ್ಥಿಗಳು ಮೊದಲೇ ಗೊಂದಲಕ್ಕಿಡಾಗಿದ್ದಾರೆ ಅಂತಹುದರಲ್ಲಿ ತರಗತಿಗಳ ಬಹಿಷ್ಕಾರ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರಬಹುದಗಿದೆ ಎಂದರು.
ತಾಲೂಕು ಸಂಚಾಲಕ ಅಬ್ದುಲ್ ಸುಭಾನ್ ಮಾತನಾಡಿ ಅಲ್ಪ ಮೊತ್ತಕ್ಕೆ ಅತಿಥಿ ಉಪನ್ಯಾಸಕರು ತಮ್ಮ ವೃತ್ತಿಯನ್ನು ಮಾಡುತ್ತಿದ್ದು, ಸೇವಾ ಭದ್ರತೆಯನ್ನು ನೀಡದ ಕಾರಣ ಅವರು ತರಗತಿಗಳನ್ನು ಬಹಿಷ್ಕರಿಸಿ ಧರಣಿಯನ್ನು ಮಾಡುತ್ತಿದ್ದು, ಕಾಲೇಜುಗಳಿಗೆ ವಿದ್ಯಾರ್ಥಿಗಳು ಪ್ರತಿದಿನವೂ ಹಾಜರಾಗುತ್ತಿದ್ದು ತರಗತಿಗಳು ನಡೆಯದೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ, ಅತಿಥಿ ಉಪನ್ಯಾಸಕರು ಸರರ್ಕಾದ ಮುಂದಿಟ್ಟುರುವ ಬೇಡಿಕೆಗಳನ್ನು ಕೂಡಲೇ ಸಂಭಂಧ ಪಟ್ಟ ಇಲಾಖೆಯೊಂದಿಗೆ ಚರ್ಚಿಸಿ, ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.
ಈ ಸಂಧರ್ಭದಲ್ಲಿ ವರದರಾಜು, ಜಯಶ್ರೀ, ರಾಮು, ಅನುಷ, ಪೂಜಾ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಇದ್ದರು.