ಎಸ್ಸಿಎಸ್ಟಿ ಮೀಸಲಾತಿ ಹೆಚ್ಚಳ ಚರ್ಚಿಸಿ ಕೂಡಲೇ ಒದಗಿಸುವಂತೆ ಒತ್ತಾಯ
ರೋಣ 28: ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಸ್ವಾಭಿಮಾನ ಎಸ್.ಸಿ.ಎಸ್.ಟಿ. ಸಂಘಟನೆಗಳ ಒಕ್ಕೂಟ ಮತ್ತು ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ರೋಣಇವರ ಸಂಯುಕ್ತ ಆಶ್ರಯದಲ್ಲಿ ಪತ್ರಿಕಾ ಗೋಷ್ಟಿ ನಡೆಯಿತು. ಈ ಸಭೆಯ ಅಧ್ಯಕ್ಷತೆಯನ್ನು ವಹಿಸಿದ ರೋಣ ತಾಲೂಕಾ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಬಸವಂತಪ್ಪ ತಳವಾರ ಮಾತನಾಡಿ ಸೆಪ್ಟೆಂಬರ್-23 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶೀಘ್ರದಲ್ಲೇ ಸರ್ವಪಕ್ಷಗಳ ಸಭೆಯನ್ನು ಕರೆದು ಎಸ್.ಸಿ. ಮತ್ತು ಎಸ್.ಟಿ.ಗಳ ಮಿಸಲಾತಿಯನ್ನು ಹೆಚ್ಚಳ ಮಾಡುವ ತೀರ್ಮಾನ ತೆಗೆದುಕೊಳ್ಳುತ್ತೇನೆ.ಎಂದು ಸದನದಲ್ಲಿ ಹೇಳಿರುವುದಾಗಿ ಪತ್ರಿಕೆಗಳಲ್ಲಿ ವರದಿಯಾಗಿದೆ ಎಂದರು. ಮುಖ್ಯಮಂತ್ರಿಗಳ ಈ ಹೇಳಿಕೆಗೆ ಪೂರಕವಾಗಿ ಸಭಾಪತಿಗಳಾದ ವಿಶ್ವೇಶ್ವರ ಹೆಗಡೆ ಕಾಗೇರಿ ಯವರು ಸಹ ಮಾತನಾಡಿರುವುದಾಗಿ ವರದಿಯಾಗಿದೆ. ಮುಖ್ಯಮಂತ್ರಿಗಳ ಹಾಗೂ ಸಭಾಪತಿಯವರ ಈ ಹೇಳಿಕೆಯನ್ನು ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ.ಮುಖ್ಯಮಂತ್ರಿಗಳು ತಾವು ನೀಡಿರುವ ಭರವಸೆಯಂತೆ ಎಸ್.ಸಿ. ಎಸ್.ಟಿ. ಮೀಸಲಾತಿಯನ್ನು ಹೆಚ್ಚಳ ಮಾಡಿ ಶೀಘ್ರವೇ ಆದೇಶ ಹೊರಡಿಸಿದರೆ ಅದು ನಮ್ಮ ಗುರುಗಳಾದ ಪ್ರಸನ್ನಾನಂದ ಮಹಾಸ್ವಾಮಿಜಿಗಳ 231 ದಿನಗಳ ಸುದೀರ್ಘ ಹೋರಾಟಕ್ಕೆ ಮತ್ತು ನಮ್ಮ ನಾಡಿನ ಸಂವಿಧಾನಕ್ಕೆ ಸಲ್ಲುವ ಗೌರವಾಗಿರುತ್ತದೆ.
ನಾವು ಕೂಡ ಸರ್ಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ನಮ್ಮ ಹಳ್ಳಿಗಳಲ್ಲೇ ಅತೀ ಸಂಭ್ರಮದಿಂದ ಆಚರಿಸುತ್ತೇವೆ.ಆದರೆ ಸರಕಾರವು ಈ ವಿಚಾರವನ್ನು ಕುರಿತಂತೆ ತನ್ನ ವಿಳಂಭ ನೀತಿಯನ್ನು ಮುಂದುವರೆಸಿದ್ದೆ ಆದಲ್ಲಿ ಈ ಹಿಂದೆ ನಿರ್ಧರಿಸಿರುವಂತೆ ರಾಜ್ಯದಲ್ಲಿರುವ ಎಲ್ಲಾ ಎಸ್.ಸಿ.ಎಸ್.ಟಿ. ಸಂಘಟನೆಗಳು ಎಲ್ಲಾ ಸಂವಿಧಾನದ ಸ್ವಾಮೀಜಿಗಳ ನೇತೃತ್ವದಲ್ಲಿ ಸಾಗರೋಪಾದಿಯಲ್ಲಿ ಸಂಗಮಗೊಂಡು,ಅಕ್ಟೋಬರ್ 9, 2022 ರಂದು ನಡೆಯಲಿರುವ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅದ್ಧೂರಿಯಾಗಿ ಆಚರಿಸುತ್ತೇವೆ.
ಕರ್ನಾಟಕ ಸರಕಾರವು 7.5 ಮೀಸಲಾತಿಯನ್ನು ಹಾಗೂ 15 ರಿಂದ 17 ರವರೆಗೆ ಮೀಸಲಾತಿಯನ್ನು ಶೀಘ್ರದಲ್ಲಿಯೇ ಘೋಷಣೆ ಮಾಡಬೇಕೆಂದು ಸಭೆಯಲ್ಲಿ ಮಾತನಾಡಿದರು. ಈ ಸಭೆಯಲ್ಲಿ ಹನಮಂತಪ್ಪ ಹೊಸಮನಿ ಮಾತನಾಡಿ ಬಹುದಿನಗಳಿಂದ ಎಸ್.ಸಿ. ಎಸ್.ಟಿ.ಮೀಸಲಾತಿಯನ್ನು ಕರ್ನಾಟಕ ಸರಕಾರವು ಬೇಗನೆ ಆದೇಶ ಮಾಡಬೇಕೆಂದು ಸಭೆಯಲ್ಲಿ ಮಾತನಾಡಿದರು.ಸಂತೋಷ ಪಿ ಕಡಿವಾಲ ಮಾತನಾಡಿ ಪ್ರಸನ್ನಾನಂದ ಮಹಾಸ್ವಾಮಿಗಳು ಬೆಂಗಳೂರು ಪ್ರೀಡಂ ಪಾರ್ಕ್ ನಲ್ಲಿ 231 ದಿನಗಳ ವರೆಗೆ ಸತ್ಯಾಗ್ರಹಕ್ಕೆ ಕುಳಿತಿದ್ದಾರೆ.ಅವರ ಬೇಡಿಕೆ ಅನುಸಾರವಾಗಿ ಶೀಘ್ರದಲ್ಲಿ ಮೀಸಲಾತಿಯನ್ನು ಆದೇಶ ಮಾಡಬೇಕೆಂದು ಸರಕಾರಕ್ಕೆ ಒತ್ತಾಯ ಮಾಡಿದರು. ಈ ಸಭೆಯಲ್ಲಿ ಬಸವಂತಪ್ಪ ಎಚ್. ತಳವಾರ, ಹನಮಂತಪ್ಪ ರಾ ಹೊಸಮನಿ,ಸಂತೋಷ ಕಡಿವಾಲ,ಮಲ್ಲಿಕಾರ್ಜುನ ಕಲ್ಲೇಶ್ಯಾನಿ, ಬಸವರಾಜ ತಳವಾರ,ಶಿವರಾಜಕುಮಾರ ತಳವಾರ, ವೀರ್ಪ ತೆಗ್ಗಿನಮನಿ, ಎಚ್.ವಾಯ್, ಹೊಂಬಳ,ಹನಮಪ್ಪ ಬಿ ಕರಮಡಿ, ಭೀಮಪ್ಪ ಹ ತಳವಾರ, ಮೌನೇಶ ಹಾದಿಮನಿ, ಅಂದಪ್ಪ ಬ ಹೊಸಳ್ಳಿ, ಆರಿ್ಬ. ತಳವಾರ, ಎ.ಆರ್. ಹೆಬ್ಬಳ್ಳಿ ಮುಂತಾದವರು ಈ ಸಭೆಯಲ್ಲಿ ಉಪಸ್ಥಿತರಿದ್ದರು.