ಮಹಲಿಂಗಪುರ

ಮಮಕಾರವೂ ಇದ್ದಾಗ ಮಾತ್ರ ಮನುಷ್ಯ ಪರಿಪೂರ್ಣನಾಗಲು ಸಾಧ್ಯ: ಕುಂದಗೋಳ

ಮಮಕಾರವೂ ಇದ್ದಾಗ ಮಾತ್ರ ಮನುಷ್ಯ ಪರಿಪೂರ್ಣನಾಗಲು ಸಾಧ್ಯ: ಕುಂದಗೋಳ

ಮಹಾಲಿಂಗಪುರ 06: ಸಾಮಾಜಿಕ ಜೀವನದಲ್ಲಿ ಅಧಿಕಾರದ ಜೊತೆ ಮಮಕಾರವೂ ಇದ್ದಾಗ ಮಾತ್ರ ಮನುಷ್ಯ ಪರಿಪೂರ್ಣನಾಗಲು ಸಾಧ್ಯ ಎಂದು ಕೆಎಲ್‌ಇ ಪಾಲಿಟೆಕ್ನಿಕ್ ಪ್ರಾಚಾರ್ಯ ಎಸ್‌.ಐ.ಕುಂದಗೋಳ ಹೇಳಿದರು.  

ಸ್ಥಳೀಯ ಕೆಎಲ್‌ಇ ಸಂಸ್ಥೆಯ ಡಿಪ್ಲೋಮಾ ಕಾಲೇಜಿನಲ್ಲಿ ತಮ್ಮ ಹುಟ್ಟು ಹಬ್ಬವನ್ನು ಸಿಬ್ಬಂದಿಯೊಂದಿಗೆ ಸಹಭೋಜನ ಕಾರ್ಯಕ್ರಮವನ್ನಾಗಿ ಆಚರಿಸಿ ಮಾತನಾಡಿದರು. 

ಒಂದು ಸಂಸ್ಥೆಯ ಬೆಳವಣಿಗೆಯಲ್ಲಿ ಸಿಪಾಯಿ, ಗುಮಾಸ್ತ, ಲೆಖ್ಖಿಗ, ಬೋಧಕ ಮತ್ತು ಪ್ರಾಚಾರ್ಯರ ತನಕ ಎಲ್ಲರ ಕೊಡುಗೆ ವಿಶೇಷವೇ ಆಗಿರುತ್ತದೆ. ಆದ್ದರಿಂದ ಅಧಿಕಾರಸ್ಥ ಜನರು ಎಲ್ಲರನ್ನೂ ಸಮಾನವಾಗಿ ನೋಡಬೇಕು ಆಗ ಜೀವನಕ್ಕೊಂದು ಅರ್ಥ ಬರುತ್ತದೆ ಎಂದರು. 

ಉಪನ್ಯಾಸಕ ಶಿವಲಿಂಗ ಸಿದ್ನಾಳ ಮಾತನಾಡಿ ಕಳೆದ 14 ವರ್ಷಗಳಿಂದ ಪಾಲಿಟೆಕ್ನಿಕ್ ಪ್ರಾಚಾರ್ಯರಾಗಿ ಆಡಳಿತ ನಡೆಸುತ್ತಿರುವ ಎಸ್‌.ಐ.ಕುಂದಗೋಳ ಅವರು ತಮ್ಮ ಹುಟ್ಟು ಹಬ್ಬವನ್ನು ಈ ವರ್ಷವೂ “ಸಿಬ್ಬಂದಿಯೊಂದಿಗೆ ಸಹಭೋಜನ” ಆಚರಿಸಿಕೊಂಡು ಇತರೆ ಪ್ರಾಚಾರ್ಯರಿಗೆ ಮಾದರಿಯಾಗಿದ್ದಾರೆ ಎಂದರು. ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರು, ಗುಮಾಸ್ತರು, ಇನ್ನಿತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ