ಗ್ರಾಮೀಣ ಯುವಕ ಯುವತಿಯರ ಸಮಾವೇಶ .,...
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 29: ತಾಲೂಕಿನ ಶ್ರೀ ಕ್ಷೇತ್ರ ನಂದಿಪುರ ಗ್ರಾಮದ ದೊಡ್ಡ ಬಸವೇಶ್ವರ ಮಠದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘ ಕಲಬುರಗಿ ಇವರಿಂದ ಗ್ರಾಮೀಣ ಯುವಕ ಯುವತಿಯರ ಸಮಾವೇಶ ನಡೆಯಿತು.
ಸಮಾವೇಶವನ್ನು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಾಜಿ ಸಚಿವ ಬಸವರಾಜ್ ಪಾಟೀಲ್ ಸೇಡಂ ಉದ್ಘಾಟಿಸಿ ಮಾತನಾಡಿ ಹಳ್ಳಗಾಡಿನ ಪ್ರದೇಶಗಳ ಏಳ್ಗೆಯಿಂದ ದೇಶದ ಏಳ್ಗೆಯಾಗಲಿದೆ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ವಿವಿಧ ಯೋಜನೆಗಳು ಇದ್ದು ಇದರ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು. ಎಲ್ಲರೂ ಸರಕಾರಿ ಯುವಕ ಯುವತಿಯರು ಸರಕಾರಿ ಉದ್ಯೋಗವನ್ನು ನೆಚ್ಚಿಕೊಳ್ಳದೆ ಸ್ವಯಂ ಉದ್ಯೋಗದಿಂದ ಪ್ರಭಲರಾಗುವ ಅಗತ್ಯವಿದೆ. ಸೂಕ್ತ ರೀತಿಯ ಕ್ರಮಗಳನ್ನು ಅನುಸರಿಸಿ ವ್ಯವಸಾಯದಿಂದ ಅತಿ ಹೆಚ್ಚು ಲಾಭ ಗಳಿಸಬಹುದಾಗಿದೆ ಕಳೆದು ಹೋದ ಕಾಲ ಎಂದಿಗೂ ಹಿಂತಿರುಗಿ ಬರುವುದಿದಲ್ಲಾ ಹಾಗಾಗಿ ಕಾಲಹರಣ ಮಾಡದೇ ಸೂಕ್ತ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಕರೆ ನೀಡಿದರು.
ಶ್ರೀ ಕ್ಷೇತ್ರ ನಂದಿಪುರದ ಡಾ. ಮಹೇಶ್ವರ ಸ್ವಾಮೀಜಿ, ಹಿರೇಹಡಗಲಿಯ ಅಭಿನವ ಹಾಲವೀರ್ಪಜ್ಜ ಸಾನಿಧ್ಯ ವಹಿಸಿ ಮಾತನಾಡಿದರು. ನಿರ್ದೇಶಕರಾದ ಲೀಲಾ ಕಾರಟಗಿ, ಸದಾನಂದಗೌಡ ನಾನುಪಾಟೀಲ್, ಗಿರಿಧರ್ ಪೂಜಾರಿ, ಮೋರಾ್ನಳ್ ಶಶಿಕುಮಾರ, ವಿಜಯನಗರ ಜಿಲ್ಲೆಯ ತಾಲೂಕು ಸಂಯೋಜಕರು ಉಪಸ್ಥಿತರಿದ್ದರು. ಸಮಾವೇಶದಲ್ಲಿ 2000ಕ್ಕೂ ಹೆಚ್ಚು ಯುವಕ ಯುವತಿಯವರು ಪಾಲ್ಗೊಂಡಿದ್ದರು. ಗ್ರಾಮೀಣ ಬಾಗದಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಸಮಾವೇಶದಲ್ಲಿ ಮಾಹಿತಿ ನೀಡಲಾಯಿತು. ಕಾರ್ಯಕ್ರಮವನ್ನು ಸುಲ್ತಾನಪ್ಪ, ಪುನೀತ್ ದೊಡ್ಡಮನಿ, ಮಲ್ಲಿಕಾರ್ಜುನ ನಿರ್ವಹಿಸಿದರು.