ರಾಣೆಬೆನ್ನೂರ

ರಾಣೆಬೆನ್ನೂರಿನಲ್ಲಿ ಗ್ರಾಮೀಣ ಪೊಲೀಸ್ ಠಾಣೆ ಕಟ್ಟಡ ಉದ್ಘಾಟನೆ

ರಾಣೆಬೆನ್ನೂರಿನಲ್ಲಿ ಗ್ರಾಮೀಣ ಪೊಲೀಸ್ ಠಾಣೆ ಕಟ್ಟಡ ಉದ್ಘಾಟನೆ

ರಾಣಿಬೆನ್ನೂರ 23: ಕರ್ನಾಟಕ ಸರಕಾರದ ಈಗಿನ ಮುಖ್ಯಮಂತ್ರಿ ಯಾಗಿರುವ ಡಿಕೆ ಶಿವಕುಮಾರ ಅವರು ಉಪಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ತಮಗೆ ಸಚಿವ ಸ್ಥಾನ ನೀಡುವದಾಗಿ ಭರವಸೆ ನೀಡಿದ್ದರು ಎಂದು  ವಿಧಾನಸಭೆಯ ಹಂಗಾಮಿ ಅಧ್ಯಕ್ಷ ರುದ್ರ​‍್ಪ ಲಮಾಣಿ ಅಭಿಪ್ರಾಯ ಪಟ್ಟರು.ಮಂಗಳವಾರದಂದು ಸ್ಥಳೀಯ ಹಳೆ ಪಿ.ಬಿ.ರಸ್ತೆಯ ಶಿವಾ ಕಾಲೇಜ್ ಬಳಿ ನೂತನವಾಗಿ ನಿರ್ಮಾಣವಾಗಿರುವ ರಾಣಿಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ನಾನಿನ್ನೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ನನಗೆ ವಿಧಾನಸಭಾ ಹಂಗಾಮಿ ಅಧ್ಯಕ್ಷರಿಗಿಂತಲೂ ಸಚಿವನಾಗಿ ರಾಜ್ಯದ ಅಭಿವೃದ್ಧಿ ಮಾಡುವ ಕಳಕಳಿ, ಮಹಾದಾಸೆ ನನಗಿದೆ ಎಂದರು.  ಈಗ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿಗಳಾಗಿದ್ದಾರೆ. ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಇಲ್ಲವೇ ಸಚಿವ ಸ್ಥಾನ ಹಂಚಿಕೆಯ ಸಂಬಂಧದಲ್ಲಿ ನನಗೆ ಸಚಿವ ಸ್ಥಾನ ನೀಡುತ್ತಾರೆಂಬ ಭರವಸೆ ನನಗಿದೆ ಎಂದವರು ಹೇಳಿದರು.

ಸಚಿವ ಸ್ಥಾನ ನೀಡುವ ಸಂಬಂಧ ನಾನು ಯಾವುದೇ ರೀತಿಯ ಒತ್ತಡ, ಪ್ರಭಾವ ಯಾರ ಮೇಲೂ ಬೀರಲು ಬರುವುದಿಲ್ಲ. ಕೈ ಹೈಕಮಾಂಡ್ ಬಳಿ ಕೇಳೋದಕ್ಕೂ ಆಗುವುದಿಲ್ಲ. ಅದು ನನ್ನ ಕೆಲಸವೂ ಅಲ್ಲ. ಮುಖ್ಯಮಂತ್ರಿಗಳೇ ಸಚಿವ ಸ್ಥಾನ ನೀಡಿದರೆ ಅದನ್ನು ನಿಭಾಯಿಸಲು ಸಿದ್ಧನಿದ್ದೇನೆ ಎಂದವರು ಹೇಳಿದರು.ಶಾಸಕ ಪ್ರಕಾಶ ಕೋಳಿವಾಡ,ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ,

ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಥಾನ ಪ್ರಾಧಿಕಾರದ ಅಧ್ಯಕ್ಷ ಮಂಜುನಾಥ ಹಲವಾಗಲ, ರವೀಂದ್ರಗೌಡ ಪಾಟೀಲ, ಎಸ್ಪಿ ಯಶೋಧಾ ಮಂಟಗೋಡಿ, ಎ ಎಸ್ ಪಿ ಎಲ್ ವೈ ಶಿರಕೋಳ, ಡಿವೈಎಸ್ಪಿ ಜೆ. ಲೋಕೇಶ್, ಸಿಪಿಐ ನಾಗಯ್ಯ ಕಾಡದೇವರ, ಎನ್ ವೆಂಕಟರೆಡ್ಡಿ, ಸಿದ್ದೇಶ್ ಸೇರಿದಂತೆ ಪಿಎಸ್‌ಐ, ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು, ಪೋಲೀಸ್ ಸಿಬ್ಬಂದಿಗಳು ಇದ್ದರು. 


ಸುದ್ದಿ ಓದಿ