ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆ ವದ್ದಂತಿ : ಸರಕಾರದ ವಿರುದ್ದ ಪತ್ರ ಸಮರ ಮಾಡುತ್ತಿರುವ ಕೈ ಶಾಸಕರನ್ನು ಹೆದರಿಸುವ ತಂತ್ರ ಇದು : ಬಾಲಚಂದ್ರ ಜಾರಕಿಹೊಳಿ
ಬೆಳಗಾವಿ : ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಎದ್ದಿರುವ ಸುದ್ದಿಯು ಪತ್ರ ಸಮರ ಸಾರಿರುವ ಕಾಂಗ್ರೆಸ್ ಶಾಸಕರನ್ನು ಹೆದರಿಸುವ ತಂತ್ರ ಇದಾಗಿರಬಹುದು ಎಂದು ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೊಸ್ ಬಾಂಬ್ ಸಿಡಿಸಿದ್ದಾರೆ.
ಮಂಗಳವಾರ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ಬಿಜೆಪಿಯ ಕೆಲ ಶಾಸಕರು ಕಾಂಗ್ರೆಸ್ ಹಾದಿಯಲ್ಲಿ ಇದ್ದಾರಾ, ಅಥವಾ ಆಪರೇಶನ್ ಹಸ್ತಕ್ಕೆ ಒಳಗಾಗಿದ್ದಾರಾ, ಕರ್ನಾಟಕದಲ್ಲೂ ಮಹಾರಾಷ್ಟ್ರದ ಮಾಡಲ್ ವಿರುದ್ದ ಕಸರತ್ತು ಆಗತಾ ಇದೆ ನಾ ಎಂಬ ಪ್ರಶ್ನೆಗೆ ಉತ್ತರಿಸಿದ ಬಾಲಚಂದ್ರ ಜಾರಕಿಹೊಳಿ ಅವರು, ಕಾಂಗ್ರೆಸ್ ಗೆ ಆಪರೇಶನ್ ಹಸ್ತ ಮಾಡುವ ಅವಶಕತೆ ಇಲ್ಲ. ಅವರು 136 ಜನ ಶಾಸಕರು ಕಾಂಗ್ರೆಸ್ ನವರು ಇದ್ದಾರೆ. ಕಾಂಗ್ರೆಸ್ ಶಾಸಕರು ತಮ್ಮ ಸರಕಾರದ ವಿರುದ್ದ ಅಸಮಾಧಾನಗೊಂಡು ಈ ರೀತಿಯಾಗಿ ಪತ್ರ ಸಮರ ಮಾಡುತ್ತಿದ್ದು, ಅಂತಹ ಶಾಸಕರನ್ನು ಸಮಾಧಾನ ಮಾಡುವ ಗೋಸ್ಕರ ಹೆದರಿಕೆಯ ರೀತಿ ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ಕಾಂಗ್ರೆಸ್ ನವರು ತಂತ್ರವನ್ನು ಹೆಣೆದಿರಬಹುದು ಎಂದು ನುಡಿದರು.
ಅದರಂತೆ ಬೆಳಗಾವಿ ಜಿಲ್ಲೆ ವಿಭಜನೆಯು ಆಡಳಿತ ದೃಷ್ಟಿಯಿಂದ ಮಾಡಲೇಬೇಕು. ಯಾವ ನಗರಗಳನ್ನು ಜಿಲ್ಲೆ ಮಾಡಬೇಕು ಅನ್ನುವದು ಅದು ಸರಕಾರಕ್ಕೆ ಬಿಟ್ಟ ವಿಷಯವಾಗಿದೆ. ಗಡಿ ಭಾಗದ ಜನರಿಗೆ ಬೆಳಗಾವಿಗೆ ಬಂದು ಕೆಲಸ ಕಾರ್ಯ ಮುಗಿಸಿಕೊಂಡು ಹೋಗಲು ಅನುಕೂಲ ಆಗುವ ನಿಟ್ಟಿನಲ್ಲಿ ಹಾಗೂ ಆಡಳಿತಾತ್ಮಕ ವಾಗಿ ಬೆಳಗಾವಿ ಜಿಲ್ಲೆ ವಿಭಜನೆ ಅವಶಕವಾಗಿದೆ ಎಂದರು.
ಅದರಂತೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿನ ಮೇಲೆ ನಡೆಯುತ್ತದೆ. ನಾನು ಲೋಕಸಭೆ ಸ್ಪರ್ಧೆಯ ಆಕಾಂಕ್ಷೆ ಅಲ್ಲ. ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರ ಪರವಾಗಿ ಎಲ್ಲರೂ ಸೇರಿ ಕೆಲಸ ಮಾಡುತ್ತೇವೆ ಎಂದರು. ಜಾರಕಿಹೊಳಿ ಕುಟುಂಬ ದಲ್ಲಿ ನಾವು ಯಾರು ಬಿಜೆಪಿಯಿಂದ ನಿಲ್ಲುವ ಬಗ್ಗೆ ತೀರ್ಮಾನ ಮಾಡಿಲ್ಲ ಎಂದು ನುಡಿದರು.
ಅದೇ ರೀತಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಬಣಗಳಿರುವುದರಿಂದ ಫಲಿತಾಂಶ ನಮ್ಮ ವಿರುದ್ಧವಾಗಿ ಜನರು ತೀರ್ಪು ನೀಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಯಾವ ಬಣವೂ ಈಗ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಮೋದಿ ವರ್ಚಸ್ಸಿನ ಮೇಲೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಮಾಧ್ಯಮಗಳ ಪ್ರಶ್ನೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಉತ್ತರಿಸಿದರು.