ಚಿಕ್ಕೋಡಿ

ಪುರಸಭೆ ವ್ಯಾಪ್ತಿಯಲ್ಲಿ ಇಲ್ಲಿಯವರಿಗೆ 1.80ಲಕ್ಷ ರೂ ದಂಡ ವಸೂಲಿ

ಪುರಸಭೆ ವ್ಯಾಪ್ತಿಯಲ್ಲಿ ಇಲ್ಲಿಯವರಿಗೆ 1.80ಲಕ್ಷ ರೂ ದಂಡ ವಸೂಲಿ

ಸಾರ್ವಜನಿಕರೇ ಎಚ್ಚರ ಮಾಸ್ಕ್ ಇಲ್ಲದೇ ಹೊರ ಹೋದರೆ ಬೀಳುತ್ತೆ ದಂಡ

ಚಿಕ್ಕೋಡಿ ಅಕ್ಟೋಬರ್ 05: ಕೋವಿಡ್-19 ನಿಯಮ ಪಾಲನೆ ಮಾಡದೇ ಇರುವ ಸಾರ್ವಜನಿಕರಿಗೆ ಬಾರಿ ದಂಡ ಬಿಳಲು ಆರಂಭವಾಗಿದೆ. ಮಾಸ್ಕ್ ಬಳಸದೇ ಇರುವ ಸಾರ್ವಜನಿಕರನ್ನು ಹಿಡಿದುಸರ್ಕಾರದ ನಿಯಮದಂತೆ ಸ್ಥಳೀಯ ಪುರಸಭೆ ಹಾಗೂ ಪೊಲೀಸ್ ಅಧಿಕಾರಿಗಳ ತಂಡ ಜಂಟಿಯಾಗಿ ದಂಡ ಹಾಕುವ ಪ್ರಕ್ರಿಯೆಗೆ ಮುಂದಾಗಿದೆ.

ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಆದೇಶದನ್ವಯ ಪುರಸಭೆ ಮುಖ್ಯಾಧಿಕಾರಿ ಡಾ, ಸುಂದರ ರೋಗಿ ನೇತೃತ್ವದಲ್ಲಿ ಪೊಲೀಸ್ರು ಎರಡು ತಂಡಗಳನ್ನು ಮಾಡಿಕೊಂಡು ಚಿಕ್ಕೋಡಿ ನಗರದಲ್ಲಿ ಮಾಸ್ಕ್ ಹಾಕದೇ ಇರುವ ಜನರನ್ನು ಪತ್ತೆ ಹಚ್ಚಿ ಅಂತವರಿಗೆ 500 ರಿಂದ 1000 ರೂ ದಂಡ ಹಾಕುತ್ತಿದೆ. ಕಳೆದ ನಾಲ್ಕೈದು ದಿನದಿಂದ ಆರಂಭವಾದ ಈ ಪ್ರಕ್ರಿಯೇಯಲ್ಲಿ ಅಂದಾಜು 1.80 ಲಕ್ಷ ರೂ ದಂಡ ವಸೂಲಿ ಮಾಡಿದ್ದಾರೆ.

ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೊನಾ ತನ್ನ ರೌದ್ರಾವತಾರ ಮುಂದುವರೆಸಿದೆ. ಈಗಾಗಲೇ ಕೊರೊನಾ ಸಮುದಾಯಕ್ಕೆ ಹರಡಿಕೊಂಡಿರುವ ಪರಿಣಾಮ ಪ್ರತಿದಿನ ಸೋಂಕೀತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಇದರಿಂದ ಎಚ್ಚೆತ್ತುಕೊಂಡ ರಾಜ್ಯ ಸರಕಾರ ಮಾಸ್ಕ್ ಇಲ್ಲದೇ ಓಡಾಡುವ ಜನರ ಮೇಲೆ ತೀವ್ರ ನಿಗಾವಹಿಸಿ ದಂಡ ಹಾಕಲು ಆದೇಶ ಮಾಡಿದೆ. 

ಜಿಲ್ಲಾ ಸ್ಥಾನಮಾನ ಹೊಂದಿರುವ ಚಿಕ್ಕೋಡಿ ನಗರದಲ್ಲಿ ಕೋವಿಡ್ ನಿಯಂತ್ರಣಕ್ಕೆ ತರಲು ಅಧಿಕಾರಿಗಳು ತೀವ್ರ ಕಸರತ್ತು ನಡೆಸಿದೆ. ಚಿಕ್ಕೋಡಿ ನಗರದ ಬಸವ ಸರ್ಕಲ, ಬಸ್ ನಿಲ್ದಾಣ, ಅಂಕಲಿಕೂಟ ಬಳಿ ಪುರಸಭೆ ಅಧಿಕಾರಿಗಳು ಹಾಗೂ ಪೊಲೀಸ್ರು ಜಂಟಿಯಾಗಿ ಎರಡು ತಂಡ ರಚನೆಮಾಡಿಕೊಂಡು ಒಂದೊಂದು ದಿನ ಒಂದೊಂದು ಕಡೆ ನಿಂತು ದಂಡ ಹಾಕಲು ಮುಂದುವರೆಸಿದೆ.

ಮಹಾಮಾರಿ ಕೊರೊನಾ ಸೊಂಕಿತರ ಸಂಖ್ಯೆ ಬಾರಿ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಇದು ಜನರಿಗೂ ಗೊತ್ತಿದ್ದರೂ ಸಾಮಾಜಿಕ ಅಂತರ ಕಾಪಾಡಲು ನಿರ್ಲಕ್ಷೆ ವಹಿಸುತ್ತಿದೆ. ಮಾಸ್ಕ್ ಬಳಕೆ ಮಾಡಬೇಕು ಎಂದು ಸರ್ಕಾರ ಪದೇ ಪದೇ ಜನರಲ್ಲಿ ಜಾಗೃತಿ ಮೂಡಿಸಿದರೂ ಕೂಡಾ ಜನ ಅರ್ಥಮಾಡಿಕೊಳ್ಳುತ್ತಿಲ್ಲ, ಜನರ ನಿರ್ಲಕ್ಷೆ ಆಲಿಸಿದ ಸರ್ಕಾರ ಮಾಸ್ಕ್ ಹಾಕದೇ ಇರುವ ಜನರಿಗೆ ಕಠಿನ ಕ್ರಮಕೈಗೊಳ್ಳಲು ಮುಂದಾಗಿದೆ. ನಗರಪ್ರದೇಶದ ಜನರಿಗೆ 1000 ರೂ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ 500 ರೂ ದಂಡ ಹಾಕುತ್ತಿದೆ. 


ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಸೂಚನೆ ಮೇರಿಗೆ ಮಾಸ್ಕ್ ಹಾಕದೇ ಇರುವ ಜನರಿಗೆ ದಂಡ ಹಾಕಲಾಗುತ್ತಿದೆ, ಇಲ್ಲಿಯವರಿಗೆ ಅಂದಾಜು 1.80 ಲಕ್ಷ ರೂ ದಂಡ ವಸೂಲಾಗಿದೆ. ಸಾರ್ವಜನಿಕರು ನಗರ ಪ್ರವೇಶ ಮಾಡಬೇಕಾದರೇ ಕಡ್ಡಾಯವಾಗಿ ಮಾಸ್ಕ ಬಳಕೆ ಮಾಡಿಕೊಳ್ಳಬೇಕು. ಇಲ್ಲದೇ ಹೋದರೇ ದಂಡ ಬಿಳುವುದು ಗ್ಯಾರಂಟಿ.

                           ಡಾ, ಸುಂದರ ರೋಗಿ ಮುಖ್ಯಾಧಿಕಾರಿಗಳು

                                 ಪುರಸಭೆ ಚಿಕ್ಕೋಡಿ. 

       

 

ಸುದ್ದಿ ಓದಿ