ರೂ. 34.13 ಕೋಟಿ ಮೊತ್ತದ ಚೆಕ್ ಮುಖ್ಯಮಂತ್ರಿಗಳಿಗೆ ಹಸ್ತಾಂತರ
ಕರ್ನಾಟಕ ಸ್ಟೇಟ್ ಮಾರ್ಕೆಂಟಿಗ್ ಕಮ್ಯೂನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ ಕಂಪನಿಯ ವಿಶೇಷ ಲಾಭಾಂಶ ರೂ. 34.13 ಕೋಟಿ ಮೊತ್ತದ ಚೆಕ್ ಅನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ಎಂ.ಬಿ. ಪಾಟೀಲ್, ಕೆಎಸ್‌ಎಂಸಿಎ ಅಧ್ಯಕ್ಷರಾದ ಸತೀಶ ಕೃಷ್ಣ ಸೈಲ್ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮೊಹಮದ್ ಅತೀಕುಯಿಲ್ಲಾ ಶರೀಫ್ ರವರು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರಿಗೆ ಹಸ್ತಾಂತರಿಸುತ್ತಿರುವರು. ಈ ಸಂದರ್ಭದಲ್ಲಿ ಕಂಪನಿಯ ಉಪಪ್ರಧಾನ ವ್ಯವಸ್ಥಾಪಕರಾದ ಪಿ.ಎಸ್. ನಂದೀಶರವರು ಉಪಸ್ಥಿತರಿದ್ದರು.