ಬೆಳಗಾವಿ

ಹತ್ತರಿಗಿಯಲ್ಲಿ ಸಾಲು ಸಾಲು ಗಣಪತಿ; ಮಹಾಪ್ರಸಾದ

ಹತ್ತರಿಗಿಯಲ್ಲಿ ಸಾಲು ಸಾಲು ಗಣಪತಿ; ಮಹಾಪ್ರಸಾದ


ಯಮಕನಮರಡಿ 20: ಎರಡನೇ ಪುಲಿಕೇಶಿ ಆಳಿದ ನಾಡು ಹಾಗೂ ಧರ್ಮಗಳ ಬೀಡಾಗಿರುವ ಹತ್ತರಿಗಿ ಗ್ರಾಮದಲ್ಲಿ ಗಣೇಶೋತ್ಸವ ಸಂಭ್ರಮ ಮನೆಮಾಡಿದೆ. ಗ್ರಾಮದ ವಿವಿಧ ಬಡಾವಣೆಗಳು ಹಾಗೂ ಪ್ರಮುಖ ಸ್ಥಳಗಳಲ್ಲಿ ಸಾಲು ಸಾಲು ಗಣಪತಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಭಕ್ತಿಯಿಂದ ಪೂಜಿಸಲಾಗುತ್ತಿದೆ.  

ಗ್ರಾಮದಲ್ಲಿ ಪ್ರತಿಷ್ಠಾಪಿಸಿರುವ ಪ್ರಮುಖ ಗಣಪತಿ ವಿಗ್ರಹಗಳ ಸ್ಥಳಗಳು:  

1.ಲಕ್ಷ್ಮಿ ಮಂದಿರ 2.ಬಡಿಗೇರ ಗಲ್ಲಿ 3.ಕಲ್ಮೇಶ್ವರ ಮಂದಿರ  

4.ಪರಮೇಶ್ವರ ಮಂದಿರ 5.ರಮಗೊಂಡಿ ಗಲ್ಲಿ 6.ಹೊನ್ನ ಕಣವರ ಗಲ್ಲಿ 7.ತೇರಣಿ ಗಲ್ಲಿ 8.ಚಾವಡಿ ಗಣಪತಿ 9.ಅಳಗುಂಡಿ ಗಲ್ಲಿ  

10.ಸೊಸೈಟಿ ಗಲ್ಲಿ ವಿವಿಧ ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಿರುವ ಗಣಪತಿ ವಿಗ್ರಹಗಳಿಗೆ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮ ಹಾಗೂ ಮಹಾಪ್ರಸಾದ ಆಯೋಜಿಸಲಾಗಿದ್ದು, ಗ್ರಾಮಸ್ಥರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಗಣೇಶೋತ್ಸವವು ಗ್ರಾಮದ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವಕ್ಕೆ ಮತ್ತಷ್ಟು ಮೆರುಗು ನೀಡಿದೆ. 


ಸುದ್ದಿ ಓದಿ