ಶಾಲಾ ಕಾಲೇಜು ಪ್ರಾರಂಭೋತ್ಸವಕ್ಕೆ ಕೊಠಡಿ ಸ್ವಚ್ಛತೆ
ಮಹಾಲಿಂಗಪುರ 28: ಶಾಲಾ ಕಾಲೇಜು ಪ್ರಾರಂಭೋತ್ಸವ ನಿಮಿತ್ತ ಸ್ಥಳೀಯ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಪ್ರೌಢಶಾಲೆ ಮತ್ತು ಪಪೂ ಕಾಲೇಜ್ನಲ್ಲಿ ಎಲ್ಲ ವರ್ಗ ಕೊಠಡಿಗಳನ್ನು ತೊಳೆದು ಶುಚಿಗೊಳಿಸಲಾಯಿತು.
ಪ್ರೌಢಶಾಲೆ ಮತ್ತು ಪಪೂ ಕಾಲೇಜ್ನಲ್ಲಿ 1000ಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಬೇಸಿಗೆ ರಜೆ ಮುಗಿದ ಹಿನ್ನೆಲೆಯಲ್ಲಿ ಶಾಲಾ ಕಾಲೇಜು ಪುನರಾರಂಭಗೊಳ್ಳುತ್ತಿವೆ. ಮೇ.29 ರಂದು ಪ್ರೌಢಶಾಲೆ ಹಾಗೂ ಮೇ.31ರಂದು ಕಾಲೇಜುಗಳ ತರಗತಿಗಳು ಆರಂಭವಾಗಲಿವೆ. ಆದ್ದರಿಂದ ಪ್ರಾಚಾರ್ಯ ಎಲ್.ಬಿ.ತುಪ್ಪದ, ಉಪಪ್ರಾಂಶುಪಾಲ ಬಿ.ಎನ್.ಅರಕೇರಿ ಮಾರ್ಗದರ್ಶನದಲ್ಲಿ ಸಿಪಾಯಿಗಳಾದ ಶಂಕರ ಕಲ್ಲೋಳಿ, ರಾಮು ಮಾದರ, ರವಿ ಲಕ್ಕನಗೋಳ ಸೇರಿ ಒಟ್ಟು 11 ವರ್ಗ ಕೊಠಡಿಗಳನ್ನು ಕಸಗುಡಿಸಿ, ನೀರಿನಿಂದ ತೊಳೆದು ನೆಲ್ಲಕ್ಕಿ ಒರೆಸಿ ಸಜ್ಜುಗೊಳಿಸಿದರು.