ರಸ್ತೆ ದುರಸ್ತಿ; ಶಾಂತಗೌಡ ಪಾಟೀಲ ವೀಕ್ಷಣೆ
ಮುದ್ದೇಬಿಹಾಳ 18: ಪಟ್ಟಣದ ಅಂಬೇಡ್ಕರ ವೃತ್ತದಿಂದ ತಾಲೂಕಿನ ಅಗಸಬಾಳದವರೆಗೂ ನಡೆಯುತತ್ತಿರುವ ರಸ್ತೆ ಕಾಮಗಾರಿಯನ್ನು ರವಿವಾರ ಸಮಾಜ ಸೇವಕ ಶಾಂತಗೌಡ ಪಾಟೀಲ(ನಡಹಳ್ಳಿ) ಅವರು ವೀಕ್ಷಿಸಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ಹಲವು ವರ್ಷಗಳಿಂದ ಸಧ್ಯ ಪ್ರಾರಂಭಗೊಂಡಿರವ ರಸ್ತೆ ಹದಗೆಟ್ಟು ಸಾರ್ವಜನಿಕರಿಗೆ ಸಂಚಾರಿಗಳಿಗೆ ತೊಂದರಯಾಗಿತ್ತು. ಕಾರಣ ಸಹೋದರ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಯವರ ಕಠಿಣ ಪರಿಶ್ರಮದ ಫಲವಾಗಿ ಕೇವಲ ಒಂದೇ ತಿಂಗಳಲ್ಲಿ ಸರಕಾರದ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರನ್ನು ಸಂಪರ್ಕಿಸಿ ಒತ್ತಾಯ ಮಾಡಿ ಇಲ್ಲಿನ ಅಂಬೇಡ್ಕರ ವೃತ್ತದಿಂದ ತಾಲೂಕಿನ ಅಗಸಬಾಳ ಗ್ರಾಮದ ಕ್ರಾಸ್ವರೆಗೂ ದ್ವಿಪಥ ಗುಣಮಟ್ಟ ರಸ್ತೆ ನಿರ್ಮಿಸಲು ಸುಮಾರು 28 ಕೋಟಿ ಅನುದಾನ ಸೇರಿದಂತೆ ಪಟ್ಟಣದ ವಿವಿಧ ಬಡಾವಣೆಗಳ ಮುಖ್ಯ ರಸ್ತೆ ನಿರ್ಮಾಣಕ್ಕಾಗಿ ಸಮಾರು 35 ಕೋಟಿಗಳ ವಿಶೇಷ ಅನುದಾನ ತರುವ ಮೂಲಕ ಮಾದರಿಯ ಪಟ್ಟಣ ಮಾಡುವ ಕನಸು ಹೊಂದಿದ್ದಾರೆ.
ಈ ನಿಟ್ಟಿನಲ್ಲಿ ಗುಣಮಟ್ಟ ಕಾಮಗಾರಿಯಲ್ಲಿ ಯಾವೂದೇ ಹಸ್ತಕ್ಷೇಪ ಮಾಡುವುದಿಲ್ಲ ನೋ ಕಾಂಪ್ರಮೈಜ್ ಹಾಗಾಗಿ ಎಲ್ಲ ಕಡೆಗಳಲ್ಲಿ ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿವೇ ವೈಜ್ಞಾನಕವಾಗಿ ಗುಣಮಟ್ಟ ಕಾಮಗಾರಿ ನಿರ್ವಹಿಸುವಂತೆ ಗುತ್ತಗೆದಾರರಿಗೆ ಸೂಚಿಸಲಾಗಿದೆ. ಅದರಂತೆ ಪಟ್ಟಣದಲ್ಲಿ ಇನ್ನು ಹಲವು ರೀತಿಯ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಅಭಿವೃದ್ಧಿ ಹಿತದೃಷ್ಠಿಯಿಂದ ಸಾರ್ವಜನಿಕರ ಸಹಕಾರರ ಅತ್ಯಗತ್ಯವಾಗಿದೆ ಎಂದರು.
ಈ ವೇಳೆ ಲೋಕೋಪಯೋಗಿ ಇಲಾಖೆ ಇಂಜಿನೀಯರ ಅಶೋಕ ಬಿರಾದಾರ ಸೇರಿದಂತೆ ಹಲವರು ಇದ್ದರು.ಮುದ್ದೇಬಿಹಾಳ ಪಟ್ಟಣದ ಅಂಬೇಡ್ಕರ ವೃತ್ತದಿಂದ ತಾಲೂಕಿನ ಅಗಸಬಾಳದವರೆಗೂ ನಡೆಯುತತ್ತಿರುವ ರಸ್ತೆ ಕಾಮಗಾರಿಯನ್ನು ರವಿವಾರ ಸಮಾಜ ಸೇವಕ ಶಾಂತಗೌಡ ಪಾಟೀಲ(ನಡಹಳ್ಳಿ) ಅವರು ವಿಕ್ಷೀಸಿದರು.