ರಾಯಬಾಗ

ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ರಸ್ತೆ ಸುಧಾರಣಾ ಕಾಮಗಾರಿಗೆ ಚಾಲನೆ

ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ರಸ್ತೆ ಸುಧಾರಣಾ ಕಾಮಗಾರಿಗೆ ಚಾಲನೆ

ರಾಯಬಾಗ  27: ತಾಲ್ಲೂಕಿನ  ಚಿಂಚಲಿ ಪಟ್ಟಣದಲ್ಲಿ ರವಿವಾರ  ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ರಸ್ತೆ ಸುಧಾರಣಾ ಕಾಮಗಾರಿಗೆ ಸಂಸದೆ ಪ್ರಿಯಂಕಾ ಜಾರಕಿಹೊಳಿ ಹಾಗೂ ಶಾಸಕ ದುರ್ಯೋಧನ ಐಹೊಳೆ ಚಾಲನೆ ನೀಡಿದರು.ನಂತರ ಸಂಸದರಾದ ಪ್ರೀಯಂಕಾ ಜಾರಕಿಹೊಳಿ ಮಾತನಾಡಿ, 2025-26  ನೇ ಸಾಲಿನ 10ಕೋಟಿ ರೂಗಳ ವೆಚ್ಚದಲ್ಲಿ ಚಿಂಚಲಿಯಿಂದ ಮೊರಬ ಮೂಲಕ ಅಳಗವಾಡಿ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಗುಣಮಟ್ಟದ ಕಾಮಗಾರಿ ಮಾಡಿ ಎಂದು ಗುತ್ತಿಗೆ ದಾರರಿಗೆ ಸಲಹೆ ನೀಡಿದರು.ಶಾಸಕ ದುರ್ಯೋಧನ ಐಹೊಳೆ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಸ್ತೆ ಸುಧಾರಣೆ ಮಾಡಲಾಗುತ್ತಿದೆ. ಸಾರ್ವಜನಿಕರು ರಸ್ತೆಗೆ ಕಾಮಗಾರಿಗೆ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಮಹಾವೀರ ಮೊಹಿತೆ,  ಜೀತೇಂದ್ರ ಜಾಧವ, ಅಪ್ಪಾಸಾಹೇಬ ಕುಲಗುಡ, ಶಿವಗೌಂಡ ಪಾಟೀಲ್, ಜ್ಯೋತಿ ಕೆಂಪಟ್ಟಿ, ನಾಮದೇವ ಕಾಂಬಳೆ, ಕವಿತಾ ಯಡ್ರಾಂವೆ, ಪ್ರವೀಣ್ ಹುಕ್ಕೇರಿ, ಅರುಣ ತರಡೆ, ಕುಮಾರ ಹಾರೂಗೇರಿ, ಅಬ್ಬಾಸ್ ಮುಲ್ಲಾ, ಬಾಲಕೃಷ್ಣ ಕೌಜಲಗಿ, ರಾಮಚಂದ್ರ ಕಾಂಬಳೆ, ಅಜೀತ ಪಾಟೀಲ್, ಯೂನುಸ ದಳವಾಯಿ, ಸುಲ್ತಾನ್ ಹೆಗಡೆ , ರಾವಸಾಬ ಜಾಧವ, ಬಸು ತುಳಜನ್ನವರ, ರಾಮು ಹೊನಕಡೆ, ಯಲ್ಲಪ್ಪ ರೆಂಟೆ , ಬಾಹುಬಲಿ ಹಂಡಗೆ, ಅಂಕುಶ ಜಾಧವ, ಅಬಾ9ಜ್ ಮುಲ್ಲಾ, ಲೋಕೋಪಯೋಗಿ ಇಲಾಖೆ ಅಧಿಕಾರಿ ಆರ್ ಬಿ ಮಣೊವಡ್ಡರ, ಲಕ್ಷ್ಮಣ ತುಳಸಿಕಟ್ಟಿ, ಪಟ್ಟಣ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಪಟ್ಟಣದ ಮುಖಂಡರು  ಅಧಿಕಾರಿಗಳು ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.27 

ಸುದ್ದಿ ಓದಿ