ಗ್ರಾಪಂ. ಸದಸ್ಯರ ಹಕ್ಕು, ಅಧಿಕಾರಕ್ಕಾಗಿ ಹೋರಾಟ: ಕೊಂಡಯ್ಯ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 08: ಸ್ಥಳೀಯ ಸಂಸ್ಥೆ ಚುನಾಯಿತ ಪ್ರತಿನಿಧಿಗಳಿಂದ ಆಯ್ಕೆಯಾಗಿರುವ ನಾನು ಗ್ರಾ.ಪಂ.ಸದಸ್ಯರ ಹಕ್ಕು ಮತ್ತು ಅಧಿಕಾರಕ್ಕಾಗಿ ಹೋರಾಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಹೇಳಿದರು.
ಪಟ್ಟಣದ ಕನ್ನಿಕಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಏರಿ್ಡಸಿದ್ದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ನನ್ನ ವ್ಯಾಪ್ತಿಯ ಕ್ಷೇತ್ರದ ಕಳೆದ 8ತಿಂಗಳ ಹಿಂದೆ ನಡೆದ ಗ್ರಾ.ಪಂ.ಚುನಾವಣೆಯಲ್ಲಿ ಗೆದ್ದ ಎಲ್ಲಾ ಸದಸ್ಯರಿಗೂ ಅಭಿನಂದನಾ ಪತ್ರ ಕಳುಹಿಸಿದ್ದೇನೆ. ಆ ಹಿನ್ನೆಲೆಯಲ್ಲಿ ಪ್ರತಿ ಗ್ರಾ.ಪಂ.ಗಳಿಗೂ ಭೇಟಿ ನೀಡುವೆ ಎಂದರು. ಗ್ರಾ.ಪಂ.ಅಧ್ಯಕ್ಷರಿಗೆ ಕಾರ್ಯಾಂಗ ಅಧಿಕಾರ ಕೊಡುವುದಕ್ಕಾಗಿ ಅವರ ಏಳಿಗೆಗೆ ಮತ್ತು ಅವರ ಹಕ್ಕುಗಳಿಗಾಗಿ ಸದಾ ಹೋರಾಟ ಮಾಡುತ್ತಾ ಬಂದಿದ್ದೇನೆ. 25 ಎಂ.ಎಸ್.ಸಿಗಳ ಒಂದು ಒಕ್ಕೂಟ ಮಾಡಿಕೊಂಡಿದ್ದೇವೆ ಅದರಡಿಯಲ್ಲಿ ಗ್ರಾ.ಪಂಗಳಿಗೆ ಕಾರ್ಯಾಂಗ ಅಧಿಕಾರ ದೊರಕಿಸಿಕೊಡುವುದೇ ನಮ್ಮ ಮುಖ್ಯ ಹೋರಾಟವಾಗಿದೆ ಎಂದರು.
ಗ್ರಾ.ಪಂ ಅಧಿಕಾರದ ಬಗ್ಗೆ ಮನವರಿಕೆ ಮಾಡಿಕೊಸುವುದರ ಜೊತೆಗೆ ಅವರನ್ನು ಇನ್ನಷ್ಟು ಸಶಕ್ತರನ್ನಾಗಿ ಮಾಡಲೇಬೇಕಿದೆ. ಆ ನಿಟ್ಟಿನತ್ತ ನನ್ನ ಹೋರಾಟ ಸದಾ ಜಾರಿಯಲ್ಲಿರುತ್ತದೆ. ಗ್ರಾ.ಪಂ ಅಧ್ಯಕ್ಷರಾದವರು ಕನಿಷ್ಠ 5ವರ್ಷಅವಧಿ ಸಂಪೂರ್ಣಗೊಳ್ಳುವಂತೆ ಕಾನೂನು ನಿಗಧಿಯಾಗಬೇಕು. ಅಧ್ಯಕ್ಷರ ಅಧಿಕಾರ ಅವಧಿ 5 ವರ್ಷ ಸಂಪೂರ್ಣವಿದ್ದಾಗ ಮಾತ್ರ ಪಂಚಾಯಿತಿ ವ್ಯಾಪ್ತಿಯಲ್ಲಿ ಏನಾದರೂ ಹೊಸ ಹೊಸ ಯೋಜನೆಗಳ ಮೂಲಕ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ.
ಈ ಸಂದರ್ಭದಲ್ಲಿ ಜಿಪಂಮಾಜಿ ಉಪಾಧ್ಯಕ್ಷೆ ಮಮತಾ ಸುರೇಶ್, ಮಾಜಿ ಸದಸ್ಯ ಸೋಮಪ್ಪ ನಾಯಕ, ಕಾಂಗ್ರೆಸ್ ಹಿಂದುಳಿದ ವರ್ಗದ ರಾಜ್ಯ ಕಾರ್ಯದರ್ಶಿ ಹನುಮಜ್ಜ, ತಾಲೂಕು ಕಾರ್ಯದರ್ಶಿ ಪ್ರಹ್ಲಾದ್, ಮುಖಂಡರಾದ ಕದರಮ್ಮರ ಕೊಟ್ರೇಶ್, ನೀಲಪ್ಪ, ಆಯಾಜ್, ಅಸುಂಡಿ ನಾಗರಾಜ, ಕೊಟ್ರ್ಪ, ಮೋರಿಗೇರಿ ನಾಗರಾಜ, ಜಿಂಕೇರಿ ರಾಜಣ್ಣ, ಟೀಪುಡಿ ಮಲ್ಲಣ್ಣ ಮತ್ತಿತರರು ಇದ್ದರು. ಕಾಂಗ್ರೆಸ್ ಪಕ್ಷದ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ ನಿರೂಪಿಸಿದರು.