ಬಳ್ಳಾರಿ

ನಿವೃತ್ತ ನೌಕರರಿಗೆ ಪರಿಷ್ಕೃತ ವೇತನ ; ನಿವೃತ್ತಿ ಸೌಲಭ್ಯವನ್ನು ಒದಗಿಸುವಂತೆ ಒತ್ತಾಯಿಸಿ ಮನವಿ

ನಿವೃತ್ತ ನೌಕರರಿಗೆ ಪರಿಷ್ಕೃತ ವೇತನ ; ನಿವೃತ್ತಿ ಸೌಲಭ್ಯವನ್ನು ಒದಗಿಸುವಂತೆ ಒತ್ತಾಯಿಸಿ ಮನವಿ

ಬಳ್ಳಾರಿ 26: ನಗರದಲ್ಲಿ ಕರ್ನಾಟಕ ನಿವೃತ್ತ ನೌಕರರ ವೇದಿಕೆ ವತಿಯಿಂದ ಏಳನೇ ವೇತನ ಆಯೋಗದ ಅನುಷ್ಠಾನದಲ್ಲಿ ನಿವೃತ್ತರಾದ ನೌಕರರಿಗೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿವೃತ್ತಿ ಸೌಲಭ್ಯವನ್ನು ಒದಗಿಸಿಕೂಡವಂತೆ ಒತ್ತಾಯಿಸಿ  ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು. ಇದೆ ವೇಳೆಯಲ್ಲಿ ನಿವೃತ್ತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣರವರು ಮಾತನಾಡಿ,  ಸರ್ಕಾರದ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ 25 ತಿಂಗಳ ಅವಧಿಯಲ್ಲಿ ನಿವೃತ್ತರಾಗಿರುವ ರಾಜ್ಯದ ಸಮಸ್ತ ನೌಕರರು ತಿಳಿಸುವುದೇನೆಂದರೆ , ಸರ್ಕಾರವು ಪ್ರಸ್ತುತವಾಗಿ 7ನೇ ವೇತನವನ್ನು ಅನುಷ್ಠಾನಕ್ಕೆ ತಂದಿರುತ್ತೀರಿ ಇದಕ್ಕಾಗಿ ತಮಗೆ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು ಹೇಳಿದರು. ತರುವಾಯ 25 ತಿಂಗಳ ಅವಧಿಯಲ್ಲಿ ನಿವೃತ್ತರಾದ ಹಾಗೂ ನಿಧಾನವಾಗಿದೆ.  

ಅಧಿಕಾರಿಗಳು ಪರಿಷ್ಕೃತ ವೇತನದ ಅನ್ವಯ ಅಪಚಾರ ಮಾಡಿದ ಹಳೆಯ ವೇತನ ಶ್ರೇಣಿಯ ಮೇಲೆ ಪರಿಗಣಿಸುತ್ತಿರುವ ನಿವೃತ್ತಿ ಜೀವನ ಸಂಧ್ಯ ಕಾಲದಲ್ಲಿರುವ ನಮ್ಮಗಳಿಗೆ ಅತಿ ಆಘಾತವಾಗಿರುತ್ತದೆ. ನಮ್ಮದಲ್ಲದ ಕಾರಣದಿಂದ ಆಗಸ್ಟ್‌ 2024 ರಿಂದ ನಿವೃತ್ತಿ ಹೊಂದಿರುವ ನೌಕರರು ಪರಿಷ್ಕೃತ ವೇತನದಲ್ಲಿ ನಿವೃತ್ತಿ ಆರ್ಥಿಕ ಸೌಲಭ್ಯವಾಗುತ್ತಿದ್ದು, ಅವರಂತೆ ನಾವುಗಳು ಸಹ 7ನೇ ವೇತನ ಆಯೋಗದ ವರದಿಯಂತೆ ಪರಿಸ್ಕೃತ ವೇತನದಲ್ಲಿ ನಿವೃತ್ತಿ ಆರ್ಥಿಕ ಸೌಲಭ್ಯಗಳನ್ನು ಪಡೆಯುವ ಅರ್ಹತೆ ಹೊಂದಿದ್ದೇವೆ. ಆದ್ದರಿಂದ ನಮಗೆ ಆಗುತ್ತಿರುವ ಆರ್ಥಿಕ ನಷ್ಟವನ್ನು ಅರ್ಥ ಮಾಡಿಕೊಂಡು ದಯಮಾಡಿ ಮೇಲಿನ ಅವಧಿಯಲ್ಲಿ ನಿವೃತ್ತರಾದ ನಮ್ಮಗಳಿಗೂ ಸಹ ಪರಿಸ್ಕೃತ ಮೂಲವೇತನದ ಮೇಲೆನ  ಲೆಕ್ಕಚಾರ ಮಾಡಿ ನ್ಯಾಯೋಜಿತವಾಗಿ ಲಭ್ಯವಾಗುವ ಆರ್ಥಿಕ ಸೌಲಭ್ಯವನ್ನು ದೊರಕಿಸಿಕೊಡಲು ಸಮಸ್ತ ನಿವೃತ್ತ ನೌಕರರು ತಮ್ಮಲ್ಲಿ ಅತ್ಯಂತ ವಿನಮ್ರವಾಗಿ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಿವಾಜಿ ರಾವ್ ಓಉಓ ಅಧ್ಯಕ್ಷರು, ಮಲ್ಲೇಶ ಎಂ ಟಿ ನಿವೃತ್ತ ನೌಕರರ ಸಂಘದ ಜಿಲ್ಲಾ  ಅಧ್ಯಕ್ಷರು, ಸಂಚಾಲಕರಾದ ಚಂದ್ರ​ಪ್ಪ, ಜಿಲಾನಿ, ಬೋಗಪ್ಪ ಕೆಂಚ ಯಲ್ಲಪ್ಪ, ಡಾ. ಹನುಮಂತಪ್ಪ, ಕುಮಾರಸ್ವಾಮಿ, ಮೇರಿ ಇನ್ನು ಮುಂತಾದ ನಿವೃತ್ತ ನೌಕರರು ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ