ಕಂದಾಯ ದಾಖಲೆ ಮನೆ ಬಾಗಿಲಿಗೆ ಕಾರ್ಯಕ್ರಮ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 13: ತಾಲೂಕಿನ ಬ್ಯಾಸಿಗದೇರಿಯ ಸರಕಾರಿ ಶಾಲೆಯ ಆವರಣದಲ್ಲಿ ಶನಿವಾರ ಕಂದಾಯ ದಾಖಲೆ ಮನೆ ಬಾಗಿಲಿಗೆ ಕಾರ್ಯಕ್ರಮ ಜರುಗಿತು.
ಶಾಸಕ ಎಸ್.ಭಿಮಾನಾಯ್ಕ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕಂದಾಯ ದಾಖಲೆ ಮನೆ ಬಾಗಿಲಿಗೆ ಕಾರ್ಯಕ್ರಮ ಸಾರ್ವಜನಿಕರಿಗೆ ತಾಲೂಕು ಕಚೇರಿಯ ಅಲೆದಾಟವನ್ನು ತಪ್ಪಿಸುವಲ್ಲಿ ಸರಕಾರದ ನೂತನ ಕಾರ್ಯಕ್ರಮ ಉತ್ತಮ ಯೋಜನೆಯಾಗಿದೆ, ಈ ಯೋಜನೆಯಿಂದ ಗ್ರಾಮೀಣ ಭಾಗದ ಸಾರ್ವಜನಿಕರ ಹತ್ತಾರು ವೆಚ್ಚಗಳಿಗೆ ಕಡಿವಾಣ ಹಾಕಲು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ ಆದರೆ ಇಲ್ಲಿ ದಾಖಲೆಗಳನ್ನು ತಹಶಿಲ್ದಾರ್ ಅಥವಾ ಜಿಲ್ಲಾಧಿಕಾರಿಗಳಿಗೆ ಕಾರ್ಯ ನಿರ್ವಹಿಸಲು ನೀಡದೆ ರಾಜ್ಯ ಮಟ್ಟದಲ್ಲಿ ತಯಾರು ಮಾಡಿರುವುದು ಗೊಂದಲಗಳಿಗೆ ಕಾರಣವಾಗಿದೆ, ಈ ಕಾರ್ಯವನ್ನು ತಾಲೂಕು ಕಚೇರಿಯಿಂದ ಮಡಿದ್ದರೆ ಉದ್ದೇಶ ಫಲಿಸುತ್ತಿತ್ತು, ಕಡತಗಳನ್ನು ಸಿದ್ಧಪಡಿಸಿದ್ದು ಒಬ್ಬರ ಹೆಸರಿನ ದಾಖಲೆಗಳ ಮತ್ತೊಬ್ಬರ ಹೆಸರಿಗೆ ನಮೂದಾಗಿದೆ, ಸರ್ವೆ ಸಂಖ್ಯೆಗಳು ಒಂದರ ಮೆಲೋಂದು ಮುದ್ರಣವಾಗಿದೆ ಹಿಗಿದ್ದರೆ ಯಾವ ರೀತಿ ಗುರುತು ಮಡಬೇಕು ಹಾಗೂ ಸಾರ್ವಜನಿಕರ ಅರ್ಜಿಗಳನ್ನು ಕೈಗೆಟುಕದಂತಾಗಿದ್ದು ಹುಡುಕುವ ಕೆಲಸವಾಗುತ್ತದೆ. ವರಲಹಳ್ಳಿಯ ಪಹಣಿಗಳು ಒಂದರ ಮೇಲೆ ಒಂದು ಹೆಸರು ಮುದ್ರಣವಾಗಿವೆ, ಇಂತಹ ಕಾರ್ಯಗಳನ್ನು ಶೀಘ್ರವೇ ಸರಿಪಡಿಸಬೇಕಿದೆ, 13 ಹೋಬಳಿಗಳು ಮಾತ್ರ ಜಾತಿ ಪ್ರಮಾಣ ಪತ್ರ ಮುದ್ರಣವಾಗಿವೆ. ಗ್ರಾಮ ಮತ್ತು ವಿಕಾಸ ಅವಧಿ ಮುಗಿದು ಮುದ್ರಣ ಇಂತಹ ಗೊಂದಲಗಳು ಶೀಘ್ರವೇ ಸರಿಪಡಿಸಬೇಕಿದೆ ಇಲ್ಲವಾದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತದೆ ಇ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಮಾತನಾಡುವೆ ಎಂದು ಹೇಳಿದರು.
ತಹಶಿಲ್ದಾರ್ ಶರಣಮ್ಮ ಪ್ರಾಸ್ತಾವಿಕವಾಗಿ ಮಾತನಾಡಿ ಸರಕಾರದ ಈ ಯೋಜನೆ ಮಹತ್ತರವಾಗಿದ್ದು ಆಡಳಿತದ ವಿಕೇಂದ್ರೀಕರಣಕ್ಕೆ ಚಾಲನೆ ದೊರೆಯಲಿದೆ, ಸರಕಾರದ ಹತ್ತಾರು ಯೋಜನೆಗಳು ಜಾರಿಯಾಗಿವೆ ಅದರಲ್ಲಿ ಸಂದ್ಯಾ ಸುರಕ್ಷ ಯೋಜನೆ, ಮೈತ್ರಿ ಯೋಜನೆ, ವಿಶೇಷ ಚೇತನರಿಗೆ ಯೋಜನೆ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯಡಿ ನಮ್ಮ ತಾಲೂಕಿನಲ್ಲಿ 11852 ಕುಟುಂಬಗಳನ್ನು ಗುರುತಿಸಲಾಗಿದ್ದು ಅ ಕುಟುಂಬಗಳಿಗೆ ದಾಖಲೆಗಳು ಬಂದಿದ್ದು ಆ ದಾಖಲೆಗಳನ್ನು ಇಂದು ವಿತರಿಸಲಾಗುವುದು ಭಾರತವನ್ನು ಪ್ರಗತಿ ಶೀಲರಾಗುತ್ತಿದ್ದೆವೆ ಎನ್ನುವುದಕ್ಕಿಂತ ಪ್ರಗತಿ ಹೊಂದಿದ್ದೆವೆ ಎಂದು ತೋರಿಸಬೇಕಿದೆ, ನಮ್ಮ ಹಕ್ಕುಗಳನ್ನು ಚಾಲಾಯಿಸಬೇಕಾದರೆ ಮೊದಲಿಗೆ ಶಿಕ್ಷಣವನ್ನು ಪಡೆದೊಕೊಳ್ಳುವಂತೆ ಕರೆ ನೀಡಿದರು. ಸಾಕಷ್ಟು ಮಕ್ಕಳು ಅರೆಬರೆ ಶಿಕ್ಷಣ ಪಡೆದು ಕೆಲಸಕ್ಕೆ ಹೋಗುತ್ತಿರುವುದು ಮತ್ತು ಬಾಲ ಕಾರ್ಮಿಕರನ್ನಾಗಿಸುವುದು, ಬಾಲ್ಯ ವಿವಾಹ ಅಕ್ಷಮ್ಯ ಅಪರಾಧವಾಗಿದೆ ಕಾನೂನು ಚೌಕಟ್ಟಿನಲ್ಲಿ ಇದ್ದು ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಸೂಚಿಸಿದರು. ಕೋವಿಡ್ನಿಂದ ಮೃತ ಪಟ್ಟ ಮೃತರ ಸಂಭಂಧಿಕರಿಗೆ ವೇದಿಕೆಯಲ್ಲಿ ಸರಕಾರದ ಸಹಾಯ ಧನದ ಚೆಕ್ಗಳನ್ನು ವಿತರಿಸಲಾಯಿತು.
ಈ ಸಂಧರ್ಭಧಲ್ಲಿ ಹಗರಿಬೊಮ್ಮನಹಳ್ಳಿ ಪುರಸಭೆ ಸದಸ್ಯ ಮರಿರಾಮಪ್ಪ, ಗಣೇಶ್ ಲಮಾಣಿ, ಪವಾಡಿ ಹನುಮಂತಪ್ಪ, ಡಿಶ್ ಮಂಜುನಾಥ್, ಮುಟುಗನಹಳ್ಳಿ ಕೊಟ್ರೇಶ್, ಹೆಗ್ಡಾಳ್ ರಾಮಣ್ಣ, ಕ್ಷೆತ್ರ ಶಿಕ್ಷಣಾಧಿಕಾರಿ ಆನಂದ, ಲೋಕೋಪಯೋಗಿ ಇಲಾಖೆ ಪುರುಷೋತ್ತಮ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್ವರ, ಪಶು ಇಲಾಖೆಯ ಪ್ರಶಾಂತ್, ಕೃಷಿ ಇಲಾಖೆ ನಾಗರಾಜ, ಗ್ರಾ.ಪಂ. ಸದಸ್ಯ ವೀರಯ್ಯ ಸೇರಿದಂತೆ ಬ್ಯಾಸಿಗದೇರಿ ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮಸ್ಥರು ಇದ್ದರು.