ಹಗರಿಬೊಮ್ಮನಹಳ್ಳಿ

ಕೇಂದ್ರ ಸರಕಾರದಿಂದ ಕೃಷಿ ಕಾಯ್ದೆ ವಾಪಸ್ : ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ

ಕೇಂದ್ರ ಸರಕಾರದಿಂದ ಕೃಷಿ ಕಾಯ್ದೆ ವಾಪಸ್ : ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ


ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ.ನ.20 :  ದೇಶಾದ್ಯಾಂತ ಅನ್ನದಾತರ ವಿರೋಧದ ನಡುವೆ ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳನ್ನು ಪ್ರಧಾನಿ ನರೇಂದ್ರ ಮೋದಿ ವಾಪಸ್ ಪಡೆಯುವ ಭರವಸೆಯನ್ನು ನೀಡಿದ್ದು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹಲವು ಸಂಘಟನೆಗಳು ಸಿಹಿ ಹಂಚಿ ಪಟಾಕಿ ಸಿಡಿಸುವುದರ ಮೂಲಕ ಸಂಭ್ರಮಿಸಿದರು. 

ಈ ಸಂಧರ್ಭದಲ್ಲಿ ರಾಜ್ಯ ರೈತ ಸಂಘದ ಕಾರ್ಯದ್ಯಕ್ಷರಾದ ಜೆ.ಎಮ್‌. ವೀರಸಂಗಯ್ಯ ಮಾತನಾಡಿ ರೈತರನ್ನು ಕಾರ​‍್ೋರೇಟ್ ಕಂಪನಿಗಳಗೆ ಶರಣಗುವಂತೆ ಮಾಡುವ ಈ ಕಾಯ್ದೆಗಳನ್ನು ವಾಪಸ್ಸು ಪಡೆದಿರುವುದು ನಿಜಕ್ಕೂ ಸಂತಸದ ವಿಷಯವಾಗಿದೆ, ಇದರ ವಿರುಧ್ಧ ಧ್ವನಿ ಎತ್ತಿದ ರೈತ ಸಂಘಟನೆಗಳು ಸೇರಿದಂತೆ ಸಾಥ್ ನೀಡಿದ ಎಲ್ಲಾ ಸಂಘಟನೆಗಳಿಗೆ ಧನ್ಯವಾದಗಳನ್ನು ತಿಳಿಸಿದರು, ಸುಮಾರು ಏಳೂನೂರು ರೈತರು ತಮ್ಮ ಪ್ರಾಣವನ್ನೆ ಕಳೆದುಕೊಂಡಿದ್ದಾರೆ, ಅನೇಕ ರೈತರು ಅಸ್ವಸ್ಥರಾಗಿದ್ದಾರೆ ಇವೆಲ್ಲವನ್ನು ಲೆಕ್ಕಿಸದೇ ರೈತರು ತಮ್ಮ ಹಕ್ಕಿಗಾಗಿ ಮಾಡಿದ ಹೋರಾಟಕ್ಕೆ ಸಂದ ಪ್ರತಿಫಲವಾಗಿದೆ ಎಂದರು. 

ಈ ಸಂಧರ್ಭದಲ್ಲಿ  ಸಂಯುಕ್ತ ಹೋರಾಟ ಕರ್ನಾಟಕದ ಸಂಚಾಲಕರಾದ ಕೊಟಗಿ ಮಲ್ಲಿಕಾರ್ಜುನ್, ಜಿಲ್ಲಾಧ್ಯಕ್ಷ ಸಿದ್ದನಗೌಡ,  ರೈತ ಸಂಘಟನೆಯ ಅಡಿವೆಪ್ಪ, ಗೋಣಿಬಸಪ್ಪ , ಕೃಷಿಕ ಸಮಾಜದ ಅಧ್ಯಕ್ಷರಾದ ಹನ್ಸಿ ದೇವರಾಜ್, ಸಹಮತ ವೇದಿಕೆಯ ಜಿ.ಲಕ್ಷ್ಮಿಪತಿ, ರಾಜು, ಸಿ.ಐ.ಟಿ.ಯು.ನ ಬಸವರಾಜ್, ಜಗನ್ನಾಥ್,ಮಾಳಮ್ಮ ಮತ್ತಿರರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ