ಶಿಕ್ಷಕ ಎಂ.ಐ.ಡಾಂಗೆ ನಿವೃತ್ತಿ: ಸನ್ಮಾನದೊಂದಿಗೆ ಬೀಳ್ಕೊಡುಗೆ
ಮಹಾಲಿಂಗಪುರ 04 : ಸ್ಥಳೀಯ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಪ್ರೌಢಶಾಲೆಯಲ್ಲಿ ಸೇವಾ ನಿವೃತ್ತಿ ಹೊಂದಿದ ಚಿತ್ರಕಲಾ ಶಿಕ್ಷಕ ಎಂ.ಐ.ಡಾಂಗೆ ಅವರಿಗೆ ಬೀಳ್ಕೊಡುಗೆ ಸಮಾರಂಭ ಇತ್ತೀಚೆಗೆ ಜರುಗಿತು.
ಚಿತ್ರಕಲಾ ಶಿಕ್ಷಕರಾಗಿ ಅಖಂಡ 36 ವರ್ಷ ಸೇವೆ ಸಲ್ಲಿಸಿದ ಡಾಂಗೆ ಅವರು ಚಿತ್ರಕಲೆ ಮಾತ್ರವಲ್ಲದೇ ಹಿಂದಿ, ಕ್ರಾಫ್ಟ್, ಸಾಹಿತ್ಯ, ಸಂಗೀತ, ಬರವಣಿಗೆ ಸೇರಿದಂತೆ ನಾನಾ ಬಹುಮುಖ ಪ್ರತಿಭೆಯ ಮೂಲಕ ಪಟ್ಟಣದಲ್ಲಿ ಹೆಸರಾಗಿದ್ದರು. ಸಾಮರಸ್ಯದೊಂದಿಗೆ ನಿಷ್ಕಳಂಕ ಸೇವೆ ಸಲ್ಲಿಸಿ ನಿರಾಳವಾಗಿ ನಿವೃತ್ತಿ ಹೊಂದಿದರು.
ನಂತರ ಎಲ್ಲ ಸಿಬ್ಬಂದಿ ಸೇರಿ ಎಂ.ಐ.ಡಾಂಗೆ ದಂಪತಿಗಳನ್ನು ಸನ್ಮಾನಿಸಿ ಉಡುಗೊರೆ ನೀಡಿ ಸಿಹಿ ತನ್ನಿಸುವ ಮೂಲಕ ವಿಶ್ರಾಂತ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸಿ ಬೀಳ್ಕೊಟ್ಟರು.
ಪದವಿ ಕಾಲೇಜಿನ ಗ್ರೇಡ್ ಒನ್ ಪ್ರಾಚಾರ್ಯ ಡಾ.ಬಿ.ಎಂ.ಪಾಟೀಲ, ಪಿಯು ವಿಭಾಗದ ಪ್ರಾಚಾರ್ಯ ಡಿ.ಬಿ.ಕೋಳಿ, ಉಪಪ್ರಾಂಶುಪಾಲ ಬಿ.ಎನ್.ಅರಕೇರಿ, ಡಿ.ಬಿ.ಗೋಕಾಕ, ಸಿ.ಎಸ್.ಕೊಣ್ಣೂರ, ಡಿ.ಎ.ಬಿಸನಾಳ, ಎನ್.ಬಿ.ಕಳ್ಳಿಗುದ್ದಿ, ಪ್ರಕಾಶ ಕುಡತೆ, ಜಿ.ಬಿ.ಖೋತ, ಎಂ.ಎಲ್.ರಮೇಶಬಾಬು, ಆರ್.ಎಸ್.ಯರಗಾಣಿ, ಎಸ್.ಎಸ್.ಅನಿಗೋಳ, ಪ್ರತಿಮಾ ಪಡೇಸೂರ, ಎಸ್.ಎಸ್.ಅಡ್ಲಿಮಠ, ಬಿ.ಬಿ.ಹಿರೇಮಠ, ಎಸ್.ಕೆ.ಬಡ್ಡೂರ ಇದ್ದರು.