ಶಿಕ್ಷಕ ಶಂಕರ ಪವಾರ್ ಅವರ ನಿವೃತ್ತಿ ಸಮಾರಂಭ: ಗುರುಗಳ ಸೇವೆ ಶ್ಲಾಘನೀಯ
ಲೋಕದರ್ಶನ ವರದಿ
ಮಾಂಜರಿ ಜು.7: ಮಕ್ಕಳ ಜ್ಞಾನಾರ್ಜನೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಡುವ ಶಿಕ್ಷಕರ ಸೇವೆ ಶ್ಲಾಘನೀಯವಾಗಿದೆ. ತಾಯಿ-ತಂದೆಯ ನಂತರ ವ್ಯಕ್ತಿತ್ವ ರೂಪಿಸುವ ಮಹತ್ತರ ಜವಾಬ್ದಾರಿಯನ್ನು ಶಿಕ್ಷಕರು ನಿರ್ವಹಿಸುತ್ತಾರೆ ಎಂದು ಹುಕ್ಕೇರಿ, ಘಟಪ್ರಭಾ, ಮೋದಗಾ ಇಂಚಗೇರಿ ಮಠದ ಅಭಿನವ ಮಂಜುನಾಥ ಸ್ವಾಮೀಜಿ ಹೇಳಿದರು.
ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಶಿಕ್ಷಕ ಶಂಕರ ಪವಾರ್ ಅವರ ನಿವೃತ್ತಿ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣದ ಜೊತೆಗೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿರುವ ಶಂಕರ ಪವಾರ್ ಅವರು ಆದರ್ಶ ಶಿಕ್ಷಕರಾಗಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕ ಶಂಕರ ಪವಾರ್ ಹಾಗೂ ಅವರ ಪತ್ನಿಯನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಶಂಕರ ಪವಾರ್, ತಮ್ಮಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಇಂದು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಸಂತಸ ತಂದಿದೆ. ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾದರೂ ಸಮಾಜ ಸೇವೆ ಮುಂದುವರಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಎಂ.ಬಿ. ಕೊರಬು, ಆರಿ್ಡ. ಕಂಬಳೆ, ಶಿವಾನಂದ ಪಾಟೀಲ, ಅಭಯ ಅಕ್ಕಿವಾಟೆ, ಡಾ. ಸುಧೀರ ಪಾಟೀಲ, ಸಿಪಿಐ ವಿಶ್ವನಾಥ ಚೌಗುಲೆ ಹಾಗೂ ಪುತ್ರಿ ಗೌರಿ ಪವಾರ್ ಸೇರಿದಂತೆ ಹಲವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಅಪ್ಪಾಸಾಹೇಬ ಸೌಂದಲಗೆ, ಅಶೋಕ ತಾರದಾಳೆ, ಅಣ್ಣಾಸಾಹೇಬ ಡಿಗ್ರಜೆ, ಸಿದ್ಧೇಶ್ವರ ವಿದ್ಯಾಲಯದ ಅಧ್ಯಕ್ಷ ಸಾತಗೌಡ ಪಾಟೀಲ, ಜೈ ಹನುಮಾನ ಸಂಸ್ಥೆಯ ಮಾಜಿ ಅಧ್ಯಕ್ಷ ಶ್ರೀಪತಿ ಜಾಧವ್, ಅಶೋಕ ಜೋಶಿ, ಚಿಕ್ಕೋಡಿ ಸಿಬಿಕೆಎಸ್ ಸಕ್ಕರೆ ಕಾರ್ಖಾನೆ ನಿರ್ದೇಶಕ ಅಣ್ಣಾಸಾಹೇಬ ಪಾಟೀಲ, ತಾತ್ಯಾಸಾಹೇಬ ಕಾಟೆ, ಮಹಾವೀರ ಕಾತರಳೆ, ರಂಜಿತ್ ಶಿರಶೆಟ್, ಮೋಹನ್ ಲೋಕರೇ, ರಮಾಕಾಂತ ಬಾಡಗೆ, ಮಾಜಿ ಜಿಪಂ ಸದಸ್ಯ ಅಣ್ಣಾಸಾಹೇಬ ಪವಾರ್ ಸೇರಿದಂತೆ ಅನೇಕ ನಿವೃತ್ತ ಶಿಕ್ಷಕರು, ಶಿಕ್ಷಕರು, ಗ್ರಾಮಸ್ಥರು, ಅಭಿಮಾನಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.