ಬಳ್ಳಾರಿ

ಸರ್ಕಾರಿ ಪ್ರೌಢಶಾಲೆಯಲ್ಲಿ ಹೆಣ್ಣು ಮಕ್ಕಳಿಗೆ ಕರಾಟೆ ತರಬೇತಿ ಪುನರಾರಂಭಿಸಿ

ಸರ್ಕಾರಿ ಪ್ರೌಢಶಾಲೆಯಲ್ಲಿ ಹೆಣ್ಣು ಮಕ್ಕಳಿಗೆ ಕರಾಟೆ ತರಬೇತಿ ಪುನರಾರಂಭಿಸಿ

ಬಳ್ಳಾರಿ 07 :ರಂದು  ಈ ಹಿಂದಿನ ತಮ್ಮ ಸರ್ಕಾರದ ಅಧಿಕಾರಾವಧಿಯಲ್ಲಿ ತಮ್ಮದೇ ಮುತುವರ್ಜಿಯಲ್ಲಿ ಜಾರಿಗೆ ತಂದಿದ್ದ ರಾಜ್ಯದ ಸರ್ಕಾರಿ ಪ್ರೌಢ ಶಾಲೆ ಮತ್ತು ವಸತಿ ಶಾಲಾ ಹೆಣ್ಣುಮಕ್ಕಳಿಗೆ ಕರಾಟೆ ತರಬೇತಿಯನ್ನು ಪುನರಾರಂಭಿಸುವಂತೆ ಬಳ್ಳಾರಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಬುಧವಾರ ಮನವಿ ಪತ್ರ ಸಲ್ಲಿಸಲಾಯಿತು.ಈ ವೇಳೆ ಜಿಲ್ಲಾಧ್ಯಕ್ಷರಾಧ ಡಿ, ಸುರೇಶ್ ಮಾತನಾಡಿ ಈ ಹಿಂದೆ ತಮ್ಮ ನೇತೃತ್ವದ ಅಧಿಕಾರದಲ್ಲಿದ್ದ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಕೆಲವು ದುಷ್ಕರ್ಮಿಗಳಿಂದ ರಾಜ್ಯದಲ್ಲಿ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಮಾನಭಂಗ ಮುಂತಾದ ಅಮಾನವೀಯ ದೌರ್ಜನ್ಯಗಳು ನಡೆದಿದ್ದವು. ಆ ಘಟನೆಗಳಿಂದ ಅಗಾಧವಾಗಿ ನೊಂದಿದ್ದ ತಾವುಗಳು ಇಂತಹ ಕೃತ್ಯಗಳು ರಾಜ್ಯದಲ್ಲಿ ಇನ್ನೂ ಮುಂದೆ ನಡೆಯಬಾರದೆಂದು, ದೃಢ ನಿರ್ಧಾರಕ್ಕೆ ಬಂದು, ಅತ್ಯಾಚಾರಿಗಳಿಂದ ರಕ್ಷಣೆ ಮಾಡಿಕೊಳ್ಳಲು ಮತ್ತು ದುಷ್ಟರನ್ನು ಮಟ್ಟ ಹಾಕಲು ಹೆಣ್ಣು ಮಕ್ಕಳಿಗೆ ಸೂಕ್ತ ತರಬೇತಿ ನೀಡಬೇಕೆಂದು ತಿರ್ಮಾನಿಸಿ, ರಾಜ್ಯದಲ್ಲಿನ ಎಲ್ಲಾ ಆರ್‌.ಎಮ್‌.ಎಸ್‌.ಎ ಶಾಲೆಗಳಲ್ಲಿನ ಹೆಣ್ಣು ಮಕ್ಕಳಿಗೆ ಮಾತ್ರ ಕರಾಟೆ ತರಬೇತಿಯನ್ನು ಆರಂಭಿಸಿ ಹೆಣ್ಣು ಮಕ್ಕಳಿಗೆ ಧೈರ್ಯ ತುಂಬಿದ್ದಿರಿ. 

ಮುಂದೆ ಕೇಂದ್ರ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ರಾಜ್ಯದ ಕಿತ್ತೂರು ರಾಣಿಚೆನ್ನಮ್ಮ ಹಾಗೂ ಮೂರಾರ್ಜಿ ದೇಸಾಯಿ ವಸತಿ ಶಾಲೆಗಳ ಮತ್ತು ಮೇಟ್ರಿಕ್ ನಂತರದ ಮತ್ತು ಮೇಟ್ರಿಕ್ ಪೂರ್ವದ ವಸತಿ ಶಾಲೆಗಳಿಗೂ ಅದನ್ನು ವಿಸ್ತರಿಸಿ, ಹೆಣ್ಣು ಮಕ್ಕಳಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ತುಂಬಿದ್ದಿರಿ.ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಕರಾಟೆ ಪ್ರದರ್ಶನವನ್ನು ಏರಿ​‍್ಡಸಿದ್ದು ಇಡೀ ರಾಜ್ಯ ಮತ್ತು ಪಾಲಕರು ಕೂಡಾ ಇದನ್ನು ಮೆಚ್ಚಿಕೊಂಡು ತಮ್ಮನ್ನು ಕೊಂಡಾಡಿದರು. ಈಗ ಸದರಿ ತರಬೇತಿ ಕಾರಣಾಂತರಗಳಿಂದ ನಿಂತು ಹೋಗಿದೆ. ತಮ್ಮಿಂದ ಆರಂಭವಾದ ಈ ಯೋಜನೆಯು ಈಗ ಪುನಃ ತಮ್ಮಿಂದಲೇ ಅದನ್ನು ಪುನಃ ಆರಂಭಿಸುವದರಿಂದ ಹೆಣ್ಣು ಮಕ್ಕಳಿಗೆ ಧೈರ್ಯ ನೀಡುವದು. 

ಅಲ್ಲದೆ ನಮ್ಮಂತಹ ಬಡ ನಿರುದ್ಯೋಗಿ ಕರಾಟೆ ತರಬೇತಿದಾರರ ಜೀವನ ಮತ್ತು ಅವರ ಕುಟುಂಬಗಳ ನೆಮ್ಮದಿಯ ಜೀವನಕ್ಕೆ ಸಹಕಾರಿಯಾಗುತ್ತದೆ. ಅಲ್ಲದೆ ತರಬೇತಿ ನೀಡುವುದರಿಂದ ಬರುವ ಗೌರವಧನದಿಂದ ನಮ್ಮ ಬದುಕು ನಡೆಯುತ್ತದೆ ಮತ್ತು ತಮ್ಮ ಕೃಪೆಯಿಂದ ನಮ್ಮ ಸುಂದರ ಜೀವನ ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ ಕಾರಣ ರಾಜ್ಯದ ಎಲ್ಲಾ ಸರ್ಕಾರಿ ಅರೇ ಸರ್ಕಾರಿ, ಅನುದಾನಿತ ಪ್ರೌಢಶಾಳೆಗಳಲ್ಲಿ ಕರಾಟೆ ತರಬೇತಿಯನ್ನು ಕಡ್ಡಾಯ ಗೊಳಿಸಲು ತಾವುಗಳು ಹೆಚ್ಚಿನ ಮಹತ್ವ ನೀಡಿ ಪುನರಾರಂಭಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಡೇಶ ,ಕೆ.ರವಿಕುಮಾರ್,ಮಹೇಶ್, , ಹುಲಿಗೆಶ್,ಹಿರೇಮಠ್, ಕಿರಣ್, ಪ್ರಸಾದ, ಗುರುನಾಥ, ಹನುಮಂತ, ಸುನಿಲ್ ಗವಸ್ಕರ್, ರಿಜ್ವನಾ ಮೋಹಿನಿ, ರುದ್ರ​‍್ಪ ಸೇರಿದಂತೆ ಇತರರು ಆಗಮಿಸಿದ್ದರು. 


ಸುದ್ದಿ ಓದಿ