ರಮೇಶ ಜಿಗಜಿಣಗಿ ಅವರ ಬಗ್ಗೆ ಗೌರವ ಇರಲಿ ಅಸಹನೆ ಸರಿಯಲ್ಲ; ಕಟ್ಟಿಮನಿ
ಮುದ್ದೇಬಿಹಾಳ 24: 1998 ರಿಂದ ನಡೆದ 5 ಲೋಕಸಭಾ ಚುನಾವಣೆಯಲ್ಲಿ ಸತತವಾಗಿ ಜಯ ಸಾಧಿಸಿರುವ ವಿಜಯಪುರ ಜಿಲ್ಲೆ ಎಸ್ ಸಿ ಮೀಸಲು ಮತಕ್ಷೇತ್ರದ ಸಂಸದ ರಮೇಶ ಜಿಗಜಿಣಗಿ ಅವರ ಬಗ್ಗೆ, ಬಿಜೆಪಿ ಪಕ್ಷದಲ್ಲಿ ಕೆಲವರಿಗೆ ಅಸಹನೆ ಇದ ಅವರ ಬಗ್ಗೆ ಇಲ್ಲ ಸಲ್ಲದ ನಿರಾಧಾರ ಆರೋಪಗಳನ್ನು ಬಹಿರಂಗವಾಗಿ ಮಾಡುತ್ತಿರುವುದು ಸರಿಯಾದ ಕ್ರಮವಲ್ಲವೆಂದು ಬಿಜೆಪಿ ಪಕ್ಷದ ಮುಖಂಡ ಕಾಳಗಿ ಗ್ರಾಪಂ ಮಾಜಿ ಸದಸ್ಯ ಸುಭಾಷ್ ಕಟ್ಟಿಮನಿ (ಕಾಳಗಿ)ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
ಲೋಕಸಭಾ ಚುನಾವಣೆ ಟಿಕೆಟ್ ಆಕಾಂಕ್ಷೆಗಳಾದವರು ತಮ್ಮ ನಾಲಿಗೆಯ ಮೇಲೆ ಹಿಡಿತವನ್ನು ಕಳೆದುಕೊಂಡು ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿದ್ದಾರೆ ರಮೇಶ ಜಿಗಜಿಣಗಿ ಅವರು ಬಿಜೆಪಿ ಪಕ್ಷದ ಹಿರಿಯ ನಾಯಕರು 5 ಬಾರಿ ಸಂಸದರಾಗಿ ಹಾಗೂ 3 ಬಾರಿ ಶಾಸಕರಾಗಿ ಜಯಗಳಿಸಿದ್ದಾರೆ ಇದು ಅವರು ಜನಪ್ರಿಯತೆ ಮತ್ತು ಅವರ ಕಾರ್ಯವೈಖರಿಗೆ ಜನರು ಮತ ಹಾಕಿ ಗೆಲ್ಲಿಸಿದ್ದಾರೆ.
ಹಿಂದುಳಿದ ಸಮಾಜದಿಂದ ಬಂದು ನಮ್ಮ ನಾಯಕರು ಎಲ್ಲಾ ಸಮಾಜಗಳೊಂದಿಗೆ ಎಲ್ಲಾ ಜನರೊಂದಿಗೆ ಸಾಂಸ್ಕೃತಿಕವಾಗಿ ಸಾಮರಸ್ಯದಿಂದ ಇರುವ ಬಗ್ಗೆ ಜಿಲ್ಲೆಗೆ ಗೊತ್ತು ನರೇಂದ್ರ ಮೋದಿಯವರ ಸರಕಾರದ ಅವಧಿಯಲ್ಲಿ ಜಿಲ್ಲೆಗೆ ಅನೇಕ ಕೇಂದ್ರದ ಯೋಜನೆಗಳನ್ನು ಅವರು ತಂದಿದ್ದಾರೆ ಅವರು ತಾವು ಮಾಡಿರುವ ಕೆಲಸಗಳ ಬಗ್ಗೆ ಎಲ್ಲೂ ಹೇಳಿಕೊಳ್ಳುವುದಿಲ್ಲ ಬಿಟ್ಟಿ ಪ್ರಚಾರ ಪ್ರಿಯರು ಅವರಲ್ಲ ಜಗಜಿಣಗಿಯವರು ಮಾಡಿದ ಜನಪ್ರಿಯ ಕಾರ್ಯಗಳು ಆಯಾ ಮತಕ್ಷೇತ್ರದ ಜನರಿಗೆ ಮತ್ತು ಕಾರ್ಯಕರ್ತರಿಗೆ ಮಾತ್ರ ತಿಳಿದಿದೆ ಈ ನಿಟ್ಟಿನಲ್ಲಿ ಅವರ ಸಾಧನೆಯ ಬಗ್ಗೆ ಸಂಪೂರ್ಣವಾಗಿ ಅರಿತು ಮಾತನಾಡಬೇಕು ಅವರ ಆರೋಪಕ್ಕೆ ಗೌರವವಿರುತ್ತದೆ ಆದರೇ ಯಾರದೂ ತೆಜೋವಧೆಗಾಗಿ ಹೇಳುವ ಹೇಳಿಕೆಗಳು ಜನರ ದಾರಿ ತಪ್ಪಿಸುವ ಉದ್ದೇಶವೆಂದು ಅರ್ಥವಾಗುತ್ತದೆ ಎಂದಿದ್ದಾರೆ.