ಎಲ್ಲ ಭಾಷೆಯನ್ನು ಗೌರವಿಸಿ ಕನ್ನಡವನ್ನು ಪ್ರೀತಿಸಿ: ಡಾ ಬೆನ್ನುರ
ಮಹಾಲಿಂಗಪುರ 20: ವಿದ್ಯಾರ್ಥಿಗಳು ಎಲ್ಲ ಭಾಷೆಯನ್ನು ಗೌರವಿಸಬೇಕು ಆದರೆ ಕನ್ನಡ ಭಾಷೆಯನ್ನು ಹೆಚ್ಚು ಪ್ರೀತಿಸಬೇಕು,ಕಲಿಗೆಗಾಗಿ ಯಾವ ಭಾಷೆಯನ್ನಾದರೂ ಕಲಿಯಿರಿ ಆದರೆ ಬದುಕಿಗೆ ಕನ್ನಡ ಭಾಷೆಯಾಗಿರಲಿ ಎಂದು ಎಸ್.ಟಿ.ಸಿ ಕಾಲೇಜ ಬನಹಟ್ಟಿಯ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಎಮ್.ಎನ್.ಬೆನ್ನುರ ಹೇಳಿದರು.
ಸ್ಥಳೀಯ ಕೆ.ಎಲ್.ಇ ಸಂಸ್ಥೆಯ ಎಸ್.ಸಿ.ಪಿ ಕಲಾ,ವಿಜ್ಞಾನ ಮತ್ತು ಡಿ.ಡಿ ಶಿರೋಳ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಇಂಗ್ಲೀಷ ವಿಭಾಗದ ವತಿಯಿಂದ ಆರ್ಟಿಪಿಸಿಯಲ್ ಇಂಟಲಿಜೆನ್ಸ ಇನ್ ಇಂಗ್ಲೀಷ ಲ್ಯಾಂಗವೇಜ ಟಿಚಿಂಗ್ ಆಂಡ್ ಲರ್ನಿಂಗ್ ಹಾಗೂ ಇತಿಹಾಸ ವಿಭಾಗದಿಂದ ಕರ್ನಾಟಕ ಏಕೀಕರಣ ಚಳುವಳಿ ವಿಷಯದ ಕುರಿತು ರಾಜ್ಯ ಮಟ್ಟದ ಒಂದು ದಿನದ ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಉಧ್ಘಾಟನೆ ಮಾಡಿ ಮಾತನಾಡಿದ ಅವರು ಕನ್ನಾಟಕದಲ್ಲಿ ಇರುವವರು ಕಡ್ಡಾಯವಾಗಿ ಕನ್ನಡವನ್ನೆ ಬಳಸ ಬೇಕು ಎಂದು ಸರ್ಕಾರ ಆದೇಶ ಹೊರಡಿಸಿದರು ಕೆಲವರು ಬರಿ ತಮ್ಮ ಪ್ರತಿಷ್ಠೆಗಾಗಿ ಅನ್ಯ ಭಾಷೆಗಳನ್ನು ಮಾತನಾಡುವ, ಬರೆಯುವ ಕೆಲಸ ಮಾಡುತ್ತಿರುವುದು ನಮಗೆ ನಾವೇ ಮಾಡಿಕೊಳ್ಳುವ ಅವಮಾನ ನಮ್ಮ ಭಾಷೆಯನ್ನು ನಾವು ಗೌರವಿಸದಿದ್ದರೆ ಅದಕ್ಕೆ ಉಳಿಗಾಲ ವಿಲ್ಲ, ಕಾರಣ ಕನ್ನಡಿಗರಾದ ನಾವು ನಮ್ಮ ಭಾಷೆಯಲ್ಲೆ ಮಾತನಾಡುವ ಮೂಲಕ ಕನ್ನಡ ಉಳಿಸಿ ಬೆಳೆಸುವ ಹೋಣೆ ನಮ್ಮೇಲ್ಲರದ್ದಾಗಿದೆ ಎಂದರು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಎಸ್.ವಿ.ಎಮ್. ಕಾಲೇಜ ಇಳಕಲ್ನ ಇಂಗ್ಲೀಷ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಎಸ್.ಬಿ.ಬಿರಾದಾರ ಅವರು ಎ.ಆಯ್ ಬಂದು ಜನರ ಉದ್ಯೋಗಗಳನ್ನು ಕಸಿದುಕೊಂಡಿತು, ಮನುಷ್ಯನ ಜೊತೆ ಇಂದು ಮಶೀನ್ ಸ್ಪರ್ಧೆಗೆ ಇಳಿದಿದೆ, ವಿದ್ಯಾರ್ಥಿಗಳು ಎ.ಆಯ್ ಗಿಂತ ಜೊರಾಗಿರಬೇಕು, ಕನ್ನಡವನ್ನು ಉಳಿಸಿ ಬೇಳಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ.ಕೆ.ಎಮ್.ಅವರಾದಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ಈ ವಿಚಾರ ಸಂಕೀರ್ಣವನ್ನು ಆಯೋಜಿಸಲಾಗಿದೆ, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಹೆಚ್ಚಿನ ಜ್ಞಾನ ಬೆಳಸಿಕೋಳ್ಳಿ. ಅಲ್ಲದೆ ಎಲ್ಲರೂ ಆದಷ್ಟು ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಆರೋಗ್ಯವನ್ನು ಸದೃಡವಾಗಿಟ್ಟುಕೊಳ್ಳಿ ಆರೋಗ್ಯ ಚನ್ನಾಗಿದ್ದರೆ ಎಲ್ಲವನ್ನು ಸಾಧಿಸಬಹುದು ಎಂದರು.
ಇಂಗ್ಲೀಷ ವಿಭಾಗ ಎ.ಆಯ್ ಇನ್ ಇಂಗ್ಲೀಷ ಟಿಚಿಂಗ್ ಆಂಡ್ ಲರ್ನಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಎಸ್.ಎನ್.ಜಿ.ಪಿ ಎಸ್.ಎನ್.ಎಮ್.ಎಸ್ ಪದವಿ ಕಾಲೇಜ ನಿಡಸೋಸಿ, ಕಾಲೇಜಿನ ವಿದ್ಯಾರ್ಥಿನಿ ಖುಷಿ ಬೊಸಲೆ ದ್ವೀತಿಯ ಡಾ.ಸಿ.ಬಿ ಕುಲಗೂಡ, ಮುಗಳಖೋಡ ಕಾಲೇಜಿನ ವಿದ್ಯಾರ್ಥಿನಿ ಸೃಷ್ಠಿ ಗಾನಗೇರ ಹಾಗೂ ತೃತಿಯ ಜೆ.ಎಸ್.ಎಸ್.ಬನಶಂಕರಿ ಕಾಲೇಜಿನ ವಿದ್ಯಾರ್ಥಿನಿ ಕೀರ್ತನಾ ದೊಡ್ಡಮನಿ ಪಡೆದುಕೊಂಡರು.
ಇತಿಹಾಸ ವಿಭಾಗ ಕರ್ನಾಟಕ ಏಕೀಕರಣ ಚಳುವಳಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಕಮಲಾ ಬಳಿಗಾ ಕಾಲೇಜ ಆಪ್ ಎಜುಕೇಶನ್ ಕುಮಟಾಕಾಲೇಜಿನ ವಿದ್ಯಾರ್ಥಿ ಮಹೇಶ ಶಿವಾಜಿ ಕಲ್ಯಾನಕರ ದ್ವೀತಿಯ ಜಿ.ಎಪ್.ಜಿ.ಸಿ ಕಾಲೇಜ ಜಮಖಂಡಿ ಕಾಲೇಜಿನ ವಿದ್ಯಾರ್ಥಿನಿ ಭಾಗಿರತೀ ಅಲುಗುರ ಹಾಗೂ ತೃತಿಯ ಬಿ.ಎಲ್.ಡಿ.ಇ ಕಾಲೇಜ ಜಮಖಂಡಿ ಕಾಲೇಜಿನ ವಿದ್ಯಾರ್ಥಿನಿ ಪ್ರೀತಿಕಾ ಮಂಜರಗಿಪಡೆದುಕೊಂಡರು.
ಈ ಸಂಧರ್ಭದಲ್ಲಿ ಸ್ಥಳಿಯ ಆಡಳಿತ ಮಂಡಳಿ ಸದಸ್ಯರಾದ ಅಶೋಕ.ಬಿ.ಅಂಗಡಿ, ಸಂತೋಷ ಹುದ್ದಾರ ಐಕ್ಯೂಎಸಿ ಸಂಯೋಜಕರಾದ ಡಾ ಶ್ರೀಮತಿ ಎಸ್.ಡಿ.ಸೊರಗಾಂವಿ, ಇಂಗ್ಲೀಷ ವಿಭಾಗ ಮುಖ್ಯಸ್ಥರಾದ ವಿ.ಎ.ಅಡಹಳ್ಳಿ, ಇತಿಹಾಸ ವಿಭಾಗ ಮುಖ್ಯಸ್ಥ ಟಿ.ಡಿ.ಡಂಗಿ, ಸಿ.ಎಮ್.ಐಗಳಿ, ಎ.ಎಮ್.ಉಗಾರೆ, ಪಿ.ಎಸ್.ಹಿಪ್ಪರಗಿ, ಎಸ್.ಸಿ.ಬಿಜ್ಜರಗಿ. ಎಸ್.ಎಸ್.ಮುಗಳ್ಯಾಳ, ಬಿ.ಎನ್.ಹಂದಿಗುಂದ, ಆರ್.ಕೆ.ಕಲ್ಲೋಳಿ ಇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.