ಬಳ್ಳಾರಿ

ವಿಧಾನ ಸಭೆಯಲ್ಲಿ ನೀಟ್ ವಿರುದ್ಧದ ನಿರ್ಣಯ - ರಾಜ್ಯದ ವಿದ್ಯಾರ್ಥಿಗಳ ಹೋರಾಟಕ್ಕೆ ಸ್ಪಂದಿಸಿದ ಸರ್ಕಾರ

ವಿಧಾನ ಸಭೆಯಲ್ಲಿ ನೀಟ್ ವಿರುದ್ಧದ ನಿರ್ಣಯ - ರಾಜ್ಯದ ವಿದ್ಯಾರ್ಥಿಗಳ ಹೋರಾಟಕ್ಕೆ ಸ್ಪಂದಿಸಿದ ಸರ್ಕಾರ

ಬಳ್ಳಾರಿ 25:ರಾಜ್ಯದಲ್ಲಿ ನೀಟ್ ಯುಜಿ ಹಾಗೂ ಪಿಜಿ ಪರೀಕ್ಷೆಗಳಲ್ಲಿ ನಡೆದ ಅವ್ಯಾಹತ ಹಗರಣಗಳ ವಿರುದ್ಧ ಭುಗಿಲೆದ್ದ ಬೃಹತ್ ವಿದ್ಯಾರ್ಥಿ ಚಳುವಳಿಯ ಒತ್ತಡಕ್ಕೆ ಸ್ಪಂದಿಸಿ ಕರ್ನಾಟಕ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ನೀಟ್ ವಿರುದ್ಧದ ನಿರ್ಣಯವನ್ನು ಅಂಗೀಕರಿಸಿದೆ. ನೀಟ್ ಹಗರಣದ ವಿರುದ್ಧ ನಡೆದ ಚಳುವಳಿಯ ಬಹು ಮುಖ್ಯ ಬೇಡಿಕೆಯೆಂದರೆ, ಇನ್ನು ಮುಂದೆ, ರಾಜ್ಯ ಮಟ್ಟದಲ್ಲಿಯೇ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ನಡೆಸಬೇಕು ಎಂಬುದಾಗಿದೆ. ಈ ಹಿನ್ನಲೆಯಲ್ಲಿ ಇಂತಹ ನಿರ್ಣಯವನ್ನು ಕೈಗೊಂಡಿರುವ ರಾಜ್ಯ ಸರ್ಕಾರದ ನಿಲುವು ಸ್ವಾಗತಾರ್ಹ. ರಾಜ್ಯ ಮಟ್ಟದಲ್ಲಿ ಪ್ರವೇಶ ಪರೀಕ್ಷೆ ನಡೆಸುವ ಉದ್ದೇಶ ಸರಿ ಇದ್ದರೂ, ಪರೀಕ್ಷಾ ಪ್ರಕ್ರಿಯೆಯಲ್ಲಿ ಹಗರಣಗಳು ನಡೆಯದಂತೆ, ಪರೀಕ್ಷೆಯ ಪಾವಿತ್ರತೆಯನ್ನು ಕಾಪಾಡುವಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಂಋಖಓ ಬಳ್ಳಾರಿ ಜಿಲ್ಲಾ ಸಮಿತಿ ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತದೆ.  

ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಕೇಂದ್ರ ಬಜೆಟ್ ಕುರಿತುವಿದ್ಯಾರ್ಥಿಗಳನ್ನು ಸಾಲದ ಸುಳಿಗೆ ದೂಡುವ 2024-25ರ ಕೇಂದ್ರ ಬಜೆಟ್ಕೇಂದ್ರ ಬಜೆಟ್ನಲ್ಲಿ 1,48,000 ಕೋಟಿಯನ್ನು ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯಾಭಿವೃದ್ದಿಗೆ ಮೀಸಲಿಡಲಾಗಿದೆ.  ವಿವಿಧ ಕ್ಷೇತ್ರಗಳನ್ನು ಒಂದೇ ತೆಕ್ಕೆಯಲ್ಲಿ ಸೇರಿಸಿ ಶಿಕ್ಷಣಕ್ಕೆ ಹೆಚ್ಚಿನ ಮೊತ್ತ ನೀಡಿರುವುದಾಗಿ ಕೇಂದ್ರ ಸರ್ಕಾರವು ತೋರಿ​‍್ಡಸಿಕೊಳ್ಳುತ್ತಿದೆ.  ತಾವೇ ಜಾರಿಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಶಿಫಾರಸ್ಸಿನಂತೆ ಶೇಕಡ 6ಅನ್ನೂ ಕೂಡ ಶಿಕ್ಷಣಕ್ಕೆ ನೀಡದೆ, ಶೇಕಡ 4ಅಕ್ಕಿಂತ ಕಡಿಮೆ ಅನುದಾನ ನೀಡಿರುವುದು ಖಂಡನೀಯ. ಸ್ಥಳೀಯ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ನಿಬಂಧನೆ ಆಧಾರಿತ ಸಾಲಗಳನ್ನು ನೀಡುವ ಘೋಷಣೆಯು ಆಘಾತಕಾರಿಯಾಗಿದೆ!  ಸಾಲದ ಸುಳಿಯಲ್ಲಿ ಸಿಲುಕಿ ನರಳುವಂತೆ ಸರ್ಕಾರವೇ ವಿದ್ಯಾರ್ಥಿಗಳನ್ನು ಉತ್ತೇಜಿಸುತ್ತಿದೆ. ಸಾಮಾನ್ಯ ಜನರ ಮೇಲಿನ ಶೈಕ್ಷಣಿಕ ವೆಚ್ಚದ ಹೊರೆಯನ್ನು ಇಳಿಸಲು  ಶುಲ್ಕವನ್ನು ಕಡಿಮೆ ಮಾಡುವ ಮತ್ತು ಸಾರ್ವಜನಿಕ ಅನುದಾನಿತ ಸಂಸ್ಥೆಗಳನ್ನು ಹೆಚ್ಚಿಸುವ ಬದಲು,  ಶಿಕ್ಷಣದ ಮೇಲಿನ ಹೆಚ್ಚು ಶುಲ್ಕವನ್ನು ಭರಿಸಲು ಸರ್ಕಾರವು ವಿದ್ಯಾರ್ಥಿಗಳೇ ಸಾಲ ತೆಗೆದುಕೊಳ್ಳಬೇಕೆಂದು ಹೇಳುತ್ತಿದೆ. ಈ ವಿಧಾನವು ಅತ್ಯಂತ ಖಂಡನೀಯವಾಗಿದ್ದು,  ಈ ಮೂಲಕ ಸರ್ಕಾರವು ಪ್ರತಿಯೊಬ್ಬರಿಗೂ ಶಿಕ್ಷಣವನ್ನು ಒದಗಿಸುವ ತನ್ನ ಜವಾಬ್ದಾರಿಯಿಂದ ದೂರ ಸರಿಯುತ್ತಿದೆ.!  

ತಮ್ಮ ಕೌಶಲ್ಯವನ್ನು ಸಾಬೀತುಪಡಿಸಲು 20 ಲಕ್ಷ ವಿದ್ಯಾರ್ಥಿಗಳನ್ನು ಕೇಂದ್ರ ಬಜೆಟ್ ಗುರುತಿಸಿದೆ. ಸಹಜವಾಗಿ ಕೌಶಲ್ಯಗಳು ಅವಶ್ಯಕ, ಆದರೆ ಉದ್ಯೋಗ ಸೃಷ್ಟಿ ಇಲ್ಲದೆ, ಕೌಶಲ್ಯಗಳಿಗೆ ಯಾವುದೇ ಪ್ರಯೋಜನವಿಲ್ಲ! ಸರ್ಕಾರವು ಉದ್ಯೋಗಗಳನ್ನು ಹೇಗೆ ಸೃಷ್ಟಿಸುತ್ತದೆ ಎಂಬುದರ ಕುರಿತು ಬಜೆಟ್ನಲ್ಲಿ ಸ್ಪಷ್ಟ ಮಾರ್ಗಸೂಚಿಯ ಉಲ್ಲೇಖವೇ ಇಲ್ಲ. ಬದಲಿಗೆ ಕೇಂದ್ರ ಸರ್ಕಾರವು ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ನೀಡುವುದಾಗಿ ಘೋಷಿಸಿದೆ! ಇದು ಸರ್ಕಾರದ ಉದ್ಯಮ ಸ್ನೇಹಿತರಿಗೆ ಅಗ್ಗದ ಕಾರ್ಮಿಕರನ್ನು ಒದಗಿಸುವುದಕ್ಕಲ್ಲದೇ ಬೇರೇನೂ ಅಲ್ಲ. ತಿಂಗಳಿಗೆ ? 5000 ಕ್ಕಿಂತ ಕಡಿಮೆ ಸ್ಟೈಫಂಡ್ ನೀಡುವುದರೊಂದಿಗೆ ಇಂಟರ್ನ್ಶಿಪ್ ವಿದ್ಯಾರ್ಥಿ ಸಮುದಾಯವನ್ನು ತೀವ್ರವಾದ ಆರ್ಥಿಕ ಅಸ್ಥಿರತೆಗೆ ತಳ್ಳುತ್ತದೆ. ಮತ್ತು ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ನಿರಂತರವಾಗಿ ಎದುರಿಸುತ್ತಿರುವ ವಿಫಲತೆಯನ್ನು ಮರೆಮಾಡಲು ಈ ಯೋಜನೆ ತರಲಾಗಿದೆಯೇ ಹೊರತು ಉದ್ಯೋಗ ಸೃಷ್ಟಿಸುವ ನೈಜ ಕಾಳಜಿಯೇ ಇಲ್ಲಿ ಕಾಣುತ್ತಿಲ್ಲ.ಸ್ಟೈಫಂಡ್ ಅನ್ನು ನೀಡಲು ಸರ್ಕಾರವು ಯಾವುದೇ  ಹಣವನ್ನು ನಿಗದಿಪಡಿಸದ ಕಾರಣ ಆ ಮೊತ್ತವನ್ನು ಕಂಪನಿಗಳಿಂದಲೇ ನೀಡಲಾಗುತ್ತದೆ.   

ಆದ್ದರಿಂದ ಸ್ಟೈಫಂಡ್ ಮೊತ್ತ ದೊರಕುವುದರಲ್ಲಿ ಕೂಡ ಯಾವುದೇ ಭರವಸೆ ಇಲ್ಲ.ಕೋಚಿಂಗ್ ಮಾಫಿಯಾ ದೇಶಾದ್ಯಂತ ವಿದ್ಯಾರ್ಥಿ ಸಮೂಹವನ್ನು ಹೇಗೆ ಶೋಷಣೆ ಮಾಡುತ್ತಿದೆ ಎಂಬುದನ್ನು ನಾವು ಗಮನಿಸುತ್ತಿದ್ದೇವೆ. ಶಿಕ್ಷಣದ ಸಾರವನ್ನು ಸಂಪೂರ್ಣವಾಗಿ ನಾಶಪಡಿಸುತ್ತಿರುವ  ಈ ರಾಕ್ಷಸೀ ಕೃತ್ಯವನ್ನು ನಿಗ್ರಹಿಸಲು ಕೇಂದ್ರ ಬಜೆಟ್ನಲ್ಲಿ ಯಾವುದೇ ಕ್ರಮವನ್ನು ಘೋಷಿಸಲಾಗಿಲ್ಲ. ಉದ್ಯೋಗಗಳನ್ನು ಸೃಷ್ಟಿಸದೆಯೇ ಸಾಲ, ಅಗ್ಗದ ಶ್ರಮ ಮತ್ತು ಕೇವಲ ಕೌಶಲ್ಯದ ಮೇಲೆ ಕೇಂದ್ರೀಕರಿಸಿದ ಕೇಂದ್ರ ಬಜೆಟ್ ಈಗಾಗಲೇ ಆಳವಾದ ಬಿಕ್ಕಟ್ಟಿನ ಮಧ್ಯೆ ಶಿಕ್ಷಣದ ಮೇಲಿನ ವೆಚ್ಚದ ಹೊರೆಯಿಂದ ಬಳಲುತ್ತಿರುವ ವಿದ್ಯಾರ್ಥಿ ಸಮೂಹಕ್ಕೆ ಗಾಯದ ಮೇಲೆ ಬರೆ ಎಳದಂತೆಯೇ ಆಗಿದೆ.  

ಈ ನಿಟ್ಟಿನಲ್ಲಿಕೇಂದ್ರ ಸರ್ಕಾರವು ಶಿಕ್ಷಣಕ್ಕಾಗಿ ಮೀಸಲಿಟ್ಟಿರುವ ಹಣವನ್ನು ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು ಮತ್ತು ಎಲ್ಲರಿಗೂ ಶಿಕ್ಷಣವು ದೊರಕುವಂತೆ ಖಾತ್ರಿಪಡಿಸಲು ವಿನಿಯೋಗಿಸಬೇಕೆಂದು ಎಐಡಿಎಸ್‌ಓ ಬಳ್ಳಾರಿ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ.!-ಕಂಬಳಿ ಮಂಜುನಾಥ, ಜಿಲ್ಲಾ ಕಾರ್ಯದರ್ಶಿ, ಎಐಡಿಎಸ್‌ಓ ಕಛೇರಿಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಭೆ ಹೋರಾಟದಿಂದ ಏನು ಆಗುವುದಿಲ್ಲ ಎಂದು ಹೇಳುವವರಿಗೆ ಹೇಳಿ - ವಿದ್ಯಾರ್ಥಿಗಳು ಒಗ್ಗಟ್ಟಿನಿಂದ ಭಗತ್ ಸಿಂಗ್, ನೇತಾಜಿ ಅವರ ವಿಚಾರ ಬೆಳೆಸಿಕೊಂಡು ಕರ್ನಾಟಕ ರಾಜ್ಯದಲ್ಲಿ ಎನ್‌.ಇ.ಪಿ ವಿರುದ್ಧ ಚಳುವಳಿ ಯಶಸ್ವಿಯಾಗಿದೆ. ಅಜಯ್ ಕಾಮತ್, ರಾಜ್ಯ ಕಾರ್ಯದರ್ಶಿ ಎಐಡಿಎಸ್‌ಓ.ನಗರದ ಎಐಡಿಎಸ್‌ಓ ಜಿಲ್ಲಾ ಕಛೇರಿಯಲ್ಲಿ ಇಂದು ಜಿಲ್ಲೆಯ ವಿವಿಧ ಶಾಲಾ -ಕಾಲೇಜಿನ ವಿದ್ಯಾರ್ಥಿಗಳಿಂದ ಶೈಕ್ಷಣಿಕ ಸಭೆ ನಡೆಯಿತು.ಸಭೆಯನ್ನು ಉದ್ದೇಶಿಸಿ ಎಐಡಿಎಸ್‌ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಅವರು ದೆಹಲಿಯಲ್ಲಿ ರೈತರ ಹೋರಾಟದಿಂದ ಸ್ಪೂರ್ತಿ ಪಡೆದು ನಮ್ಮ ರಾಜ್ಯದಲ್ಲಿ ಎನ್‌.ಇ.ಪಿ ವಿರುದ್ಧ ಬಲಿಷ್ಠ ಹೋರಾಟಕ್ಕೆ ಬಂದಾಗ ಸಾಕಷ್ಟು ಅಡೆತಡೆ ಬಂದರು ಕೂಡ ವಿದ್ಯಾರ್ಥಿಗಳು ಒಂದೇ ಗುರಿ! ಅದು ಸರ್ಕಾರಿ ಶಾಲೆ-ಕಾಲೇಜುಗಳು ಉಳಿಯಬೇಕು ಎಂದು ಒಗ್ಗಟ್ಟು ಮೂಡಿಸಿ ಭಗತ್ ಸಿಂಗ್, ನೇತಾಜಿ ಅವರು ವಿಚಾರಗಳನ್ನು ಮೈಗೂಡಿಸಿಕೊಂಡು ಹೋರಾಟ ಕಟ್ಟಿ ಕರ್ನಾಟಕದಲ್ಲಿ ಎನ್‌.ಇ.ಪಿ ಹಿಂತೆಗೆದುಕೊಳ್ಳವಂತೆಯಾಯಿತು ಎಂದು ಹೇಳಿದರು.ವಿದ್ಯಾರ್ಥಿಗಳು ಕೇಳಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು.ಸಾಮಾಜಿಕ ಸಮಸ್ಯೆಗಳ ವಿರುದ್ದ ಹೋರಾಟ ಮಾಡುವ ಮನೋಧರ್ಮ ಬೆಳಿಸಿಕೊಳ್ಳಿ, ಭಗತ್ ಸಿಂಗ್, ನೇತಾಜಿ ಯವರ ಆದರ್ಶಗಳನ್ನು ಮೈಗುಡಿಸಿಕೊಳ್ಳಿ, ಶಿಕ್ಷಣ, ಅರೋಗ್ಯ ಸಮಸ್ಯೆಗಳ ವಿರುದ್ದ ದ್ವನಿ ಎತ್ತಬೇಕು ಎಂದು ಕರೆ ನೀಡಿದರು ಎಐಡಿಎಸ್‌ಓ ರಾಜ್ಯ ಖಜಾಂಚಿ ಸುಭಾಷ್ ಅವರು ಮಾತನಾಡಿ ಈಗ ಶೈಕ್ಷಣಿಕ ವರ್ಷ ಪ್ರಾರಂಭವಾಗಿದೆ, ಶುಲ್ಕ ಹೆಚ್ಚಳ, ವಿದ್ಯಾರ್ಥಿ ವೇತನ, ಬಸ್ ಸಮಸ್ಯೆಗಳ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕು ಎಂದು ಕರೆ ನೀಡಿದರು. ಅನ್ಯಾಯದ ವಿರುದ್ದ ಹೋರಾಟ ಮಾಡುವ, ದ್ವನಿ ಎತ್ತುವ ವ್ಯಕ್ತಿತ್ವ ರೂಪಿಸಿ ಕೊಳ್ಳಿ ಎಂದು ಕರೆ ನೀಡಿದರು ಈ ಸಂದರ್ಭದಲ್ಲಿ ಎಐಡಿಎಸ್‌ಓ ರಾಜ್ಯ ಸೆಕ್ರೆಟರಿಯೇಟ್ ಸದಸ್ಯರು ರವಿಕಿರಣ್‌.ಜೆ.ಪಿ, ಜಿಲ್ಲಾ ಅಧ್ಯಕ್ಷರು ಕೆ.ಈರಣ್ಣ, ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ, ಜಿಲ್ಲಾ ಉಪಾಧ್ಯಕ್ಷರು ಎಂ.ಶಾಂತಿ, ಉಮಾ, ಪ್ರಮೋದ್ ಮತ್ತು ಜಿಲ್ಲಾ ಖಜಾಂಚಿ ಅನುಪಮಾ, ಜಿಲ್ಲಾ ಕಛೇರಿ ಕಾರ್ಯದರ್ಶಿ ನಿಹಾರಿಕ ಹಾಗೂ ಹೊನ್ನೂರು ಸ್ವಾಮಿ, ರೂಪ, ಗಣೇಶ್ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ