ಮಹಲಿಂಗಪುರ

ಜನತಾದಳ ಜಾತ್ಯಾತೀತ ಪಕ್ಷದ ಅಧ್ಯಕ್ಷ ಚಿದಾನಂದ ರಾಜೀನಾಮೆ

ಜನತಾದಳ ಜಾತ್ಯಾತೀತ ಪಕ್ಷದ ಅಧ್ಯಕ್ಷ ಚಿದಾನಂದ ರಾಜೀನಾಮೆ
ಮಹಾಲಿಂಗಪುರ : ಪಕ್ಷದ ವರಿಷ್ಠರಾದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರಿಗೆ ರವಾನಿಸಿದ ರಾಜೀನಾಮೆ ಪತ್ರವನ್ನು ಪ

ಮಹಾಲಿಂಗಪುರ 22: ರಬಕವಿ ಬನಹಟ್ಟಿ ತಾಲೂಕಿನ ಮಾರಾಪೂರ ಗ್ರಾಮ ನಿವಾಸಿ ಹಾಗೂ ಬಾಗಲಕೋಟೆ ಜಿಲ್ಲೆ ಹಿಂದುಳಿದ ವರ್ಗ ಜನತಾದಳ ಜಾತ್ಯಾತೀತ ಪಕ್ಷದ ಅಧ್ಯಕ್ಷ ಚಿದಾನಂದ ಹೋ ಧರ್ಮಟ್ಟಿ  ಜೆಡಿಎಸ್ ಪಕ್ಷಕ್ಕೆ ತಮ್ಮ ರಾಜೀನಾಮೆ ಸಲ್ಲಿಸಲು ನಿರ್ಧರಿಸಿ ಪಕ್ಷದ ವರಿಷ್ಠರಾದ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ.

ಮಾ.22ರಂದು ಸೋಮವಾರ ಜಿಎಲ್ ಬಿ ಸಿ ವಸತಿ ಗೃಹದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಿಕಾ ವರದಿಗೆ ಮಾಹಿತಿ ನೀಡುತ್ತ ಅವರು, ನಾನು 19 ವರ್ಷಗಳಿಂದ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ, ಪ್ರಾಮಾಣಿಕ ಸೇವೆ ಸಲ್ಲಿಸುತ್ತ ಬಂದಿದ್ದೇನೆ. 

ನಾವು ಪಕ್ಷಕ್ಕಾಗಿ ಮಾಡುವ ಕಾರ್ಯದಲ್ಲಿ ಜಿಲ್ಲಾ ಅಥವಾ ರಾಜ್ಯ ಮುಖಂಡರು ರಾಜಕೀಯವಾಗಿ ಯಾರೂ ನಮಗೆ ಇಲ್ಲಿವರೆಗೂ ಸಹಕರಿಸಲಿಲ್ಲ. 

ಈ ಭಾಗದಲ್ಲಿ ನನ್ನ ನಂಬಿರುವ ಕಾರ್ಯಕರ್ತರು ಹಾಗೂ ನಾನು ರಾಜಕೀಯವಾಗಿ ತ್ರಿಶಂಕು ಸ್ಥಿತಿಯಲ್ಲಿರುವುದರಿಂದ ನನ್ನ ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಬೇಸತ್ತು ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೂ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ  ರಾಜೀನಾಮೆ ನೀಡುತ್ತಿದ್ದು ಇದನ್ನು ಅಂಗೀಕರಿಸುವಂತೆ ವರಿಷ್ಠರಿಗೆ ಮನವಿ ಮಾಡಿದ್ದೇನೆ ಎಂದರು.

ಈ ಹಿಂದೆ ಸೈದಾಪುರ್ ಮತಕ್ಷೇತ್ರದಿಂದ ಜೆಡಿಎಸ್ ಜಾತ್ಯಾತೀತ ಪಕ್ಷದಿಂದ ಜಿಲ್ಲಾ ಹಾಗೂ ತಾಲೂಕ ಪಂಚಾಯತ್‍ಗಳಲ್ಲದೆ ಎಪಿಎಂಸಿ ಚುನಾವಣೆಗೂ ಸ್ಪರ್ಧಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. 

ಸುದ್ದಿ ಓದಿ