ಮುದ್ದೆಬಿಹಾಲ್

ಬಲರಾಮ ಕಟ್ಟಿಮನಿ ಯವರಿಗೆ ಇಂದಿರಾ ನಗರ ಬಡಾವಣೆಯ ನಿವಾಸಿಗಳು ಮನವಿ

ಬಲರಾಮ ಕಟ್ಟಿಮನಿ ಯವರಿಗೆ ಇಂದಿರಾ ನಗರ ಬಡಾವಣೆಯ ನಿವಾಸಿಗಳು ಮನವಿ

ಮುದ್ದೇಬಿಹಾಳ 01: ಕಳೆದ ಏಳೆಂಟು ವರ್ಷಗಳಿಂದ ಪಟ್ಟಣದ ಇಂದಿರಾನಗರದ ಸರಕಾರಿ ಜಾಗೆಯಲ್ಲಿ ವಿಜಯಪುರ ಜಿಲ್ಲಾ ಕೊಳಗೇರಿ ಕೋಳಚೆ ನಿರ್ಮೂಲನಾ ಇಲಾಖೆಯಯವರ ಹಕ್ಕು ಪತ್ರ ನೀಡಿದ್ದ ಹಿನ್ನೇಲೆಯಲ್ಲಿ  ಸುಮಾರು ನೂರಕ್ಕೂ ಹೆಚ್ಚು ಬಡ ಕುಟುಂಭಗಳು ನಾವು ತಗಡಿನ ಮನೆಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದೇವೆ ಆದರೇ ಸಧ್ಯ ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಅವರು ನಮ್ಮ ಮನೆಗಳನ್ನು ತೆರವುಗೊಳಿಸಿ ನಮಗೆ ಅನ್ಯಾಯ ಮಾಡಲು ಹೊರಟಿದ್ದಾರೆ ಕಾರಣ ಈಗಿರುವ ತಗಡಿನ ಮನೆಗಳನ್ನು ತೆರವುಗೊಳಿಸದೇ ನಮಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ತಹಶಿಲ್ದಾರ ಬಲರಾಮ ಕಟ್ಟಿಮನಿ ಯವರಿಗೆ ಇಂದಿರಾ ನಗರ ಬಡಾವಣೆಯ ನಿವಾಸಿಗಳು ಸೋಮವಾರ ಮನವಿ ಸಲ್ಲಿಸಿದರು. 

ನಾವು ಮೂಲತಃ ಬಡವರಾಗಿದ್ದು ನಿತ್ಯ  ಕೂಲಿ ನಾಲಿ ಮಾಡಿಕೊಂಡು ನಮ್ಮ ಮಕ್ಕಳ ಜೊತೆ ಕುಟುಂಭ ನಿರ್ವಹಣೆ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ನಮಗೆ ಈ ತಗಡಿನ ಮನೆಗಳನ್ನು ಬಿಟ್ಟು ವಾಸಿಸುವುದಕ್ಕೆ ಬೇರೆ ಯಾವುದು ಮನೆ ಇರುವುದಿಲ್ಲ. ಆದಕಾರಣ 2021 ರಲ್ಲಿ ಸ್ಲಂ ಬೋರ್ಡ್‌ ಅಧಿಕಾರಿಗಳು ಮತ್ತು ಪುರಸಭೆ ಅಧಿಕಾರಿಗಳು ಜಂಟಿ ಸರ್ವೆ ಕೈಕೊಂಡು ಕರ್ನಾಟಕ ಸರಕಾರದ ಸಚಿವಾಲಯ ನಗರಾಭಿವೃದ್ಧಿ ಇಲಾಖೆಯ (ಪೌರಾಡಳಿತ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ) ಆದೇಶದಂತೆ ಸಂಖ್ಯೆ: ನಇ 73 ಜಿಇಎಲ್‌-2020, ದಿ, 18-ಪೇಬ್ರುವರಿ -2021 ರ ಆದೇಶದನ್ವಯ ಸರಕಾರದ ಮಾರ್ಗಸೂಚಿಯಂತೆ ನಮ್ಮಿಂದ ಹಣವನ್ನು ಭರಣೆ ಮಾಡಿಕೊಂಡು ನಮಗೆ ಹಕ್ಕು ಪತ್ರಗಳನ್ನು ವಿತರಿಸಿದ್ದು ಮತ್ತು ನೊಂದಣಿ ಪತ್ರವನ್ನು ನೀಡಿದ್ದು ಇರುತ್ತದೆ. 

ಅದರಂತೆ 'ಸ್ಲಂ ಬೋರ್ಡಿನ ಅಧಿಕಾರಿಗಳ ಆದೇಶದಂತೆ ಪುರಸಭೆಗೆ ತುಂಬಬೇಕಾದ ಕರವನ್ನು ತುಂಬಿ ನಮಗೆ ಉತಾರೆ ನೀಡಲು ಅರ್ಜಿಯನ್ನು ಸಹ ನೀಡಿರುತ್ತೇವೆ. ಈಗ ಏಕಾಏಕಿ ಪುರಸಭೆ ಮುಖ್ಯಾಧಿಕಾರಿಗಳು ಬಂದು ನಿಮ್ಮ ಸೆಡ್ಡುಗಳನ್ನು ತೆರವುಗೊಳಿಸಬೇಕು ಅಂತಾ ತಾಕಿತ್ತು ಮಾಡಿರುತ್ತಾರೆ.  ಇದರಿಂದ ನಮಗೆ ದಿಕ್ಕು ತೋಚದಂತಾಗಿದೆ ಮೊದಲೇ ನಾವು ಕಡು ಬಡವರಿದ್ದು ನಮಗೆ ದುಡಿಯದೇ ಬೇರೆ ದಾರಿಯಿಲ್ಲ ವಾಸ ಮಾಡಲು ನಮಗೆ ಯಾವೂದೇ ತರಹದ ಮನೆಯೂ ಕೂಡ ಇಲ್ಲದಿರುವುದರಿಂದ ದಿನನಿತ್ಯ ಜೀವನ ಕೂಲಿ ನಾಲಿ ಬದುಕುವ ಪರಿಸ್ಥಿತಿಯಲ್ಲಿದ್ದು, ಈ ತಗಡಿನ ಮನೆಗಳನ್ನು ತೆರವುಗೊಳಿಸಿದರೆ ನಮಗೆ ವಾಸಿಸಲು ಬೇರಾವುದು ಸೂರು ಇರುವುದಿಲ್ಲ. 

ಈ ನಿಟ್ಟಿನಲ್ಲಿ ಸರಕಾರ ನೀಡಿದ ಹಕ್ಕು ಪತ್ರಗಳನ್ನು ಪರೀಶೀಲಿಸಿ ಮತ್ತು ನಮ್ಮ ಮೇಲೆ ದಯೇ ತೋರಿ ಮುಖ್ಯಾಧಿಕಾರಿಗಳಿಗೆ ಮಾರ್ಗದರ್ಶನ ನೀಡಿ ನಮಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಇಲ್ಲದಿದ್ದರೇ ನೇಣು ಹಾಕಿಕೊಂಡು ಸಾವಿಗೆ ಶರಣಾಗಬೇಕಾದ ಪರಿಸ್ಥಿತಿ ಎದುರಾಗುತ್ತದೆ ನಮ್ಮ ಕುಟುಂಭಗಳಿಗೆ ಮತ್ತು ನಮ ಸಾವು ನೋವಿಗೆ ಪುರಸಭೆ ಮುಖ್ಯಾಧಿಕಾರಿಗಳಿಗೆ ನೇರ ಹೊಣೆಯಾಗಲಿದ್ದಾರೆ ಎಂದು ಅಳನ್ನು ತೊಂಡಿಕೋಂಡರು. 

ಈ ವೇಳೆ ಮಲ್ಲು ಉಪ್ಪಲದಿನ್ನಿ, ರಾಮು ದಳವಾಯಿ, ಸಿದ್ದರಾಮ ತಳಹಳ್ಳಿ, ಪರುಶು ಚಲವಾದಿ, ಯಲ್ಲಮ್ಮ ದಳವಾಯಿ, ರಾಗಿಣಿ ಮಾದರ, ಶಾರದಾ ಬೂದಿಹಾಳ, ಪರುಶುರಾಮ ದಳವಾಯಿ, ರವಿ ಚಲವಾದಿ, ಚಂದ್ರಶೇಖರ ಹಿರೇಮಠ, ಮುನ್ನಾ ನದಾಫ, ವಿಷ್ಣು ದಳವಾಯಿ, ಪರಶು ಖ್ಯಾತಣ್ಣವರ ಸೇರಿದಂತೆ ಅನೇಕ ಮಹಿಳೆರು ಇದ್ದರು, 


ಸುದ್ದಿ ಓದಿ