ಮುದ್ದೆಬಿಹಾಲ್

ಮೂಲಸೌಕರ್ಯ ಕಲ್ಪಿಸಲು ನಿವಾಸಿಗಳ ಆಗ್ರಹ

ಮೂಲಸೌಕರ್ಯ ಕಲ್ಪಿಸಲು ನಿವಾಸಿಗಳ ಆಗ್ರಹ

ಮುದ್ದೇಬಿಹಾಳ : ಪಟ್ಟಣದ ಮಾರುತಿ ನಗರದ ಸವರ್ೆ ನಂ. 179/2ಡಿ ನಲ್ಲಿ ಬರುವ ಪ್ರದೇಶದಲ್ಲಿ ಸರಿಯಾದ ರಸ್ತೆ ಇಲ್ಲ. ಇದರಿಂದ ತಿರುಗಾಡಲು ಕಷ್ಟವಾಗಿದ್ದು ಕೆಲವು ರಸ್ತೆಗಳಿಗೆ ಸಂಪರ್ಕ ರಸ್ತೆಗಳಿಲ್ಲ. ಮೂಲಭೂತ ಸೌಕರ್ಯಗಳಿಂದ ಸಮಸ್ಯೆ ಅನುಭವಿಸುತ್ತಿದ್ದು ಪುರಸಭೆಯವರು ಮೂಲಸೌಕರ್ಯ ಕಲ್ಪಿಸುವಂತೆ ಮಾರುತಿ ನಗರದ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿಗಳಿಗೆ ಬುಧವಾರ ಮನವಿ ಪತ್ರ ಸಲ್ಲಿಸಿದರು.

ಪಟ್ಟಣದ ಮಾರುತಿ ನಗರದ ನಿವಾಸಿಗಳು ಪುರಸಭೆಗೆ ಆಗಮಿಸಿ ಕಂದಾಯ ನಿರೀಕ್ಷಕರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸವರ್ೆದಲ್ಲಿ ಬರುವ ಬಡಾವಣೆಯಲ್ಲಿ ಒಳಚರಂಡಿ, ವಿದ್ಯುತ್ ಮಾಡದೆ ಲೇಔಟ್ ನಿಮರ್ಾಣ ಮಾಡಲಾಗಿದೆ. ಇದರ ಪಕ್ಕದಲ್ಲಿ ಇನ್ನೊಂದು ಸವರ್ೆ ನಂಬರ 179/ಇ ಇದ್ದು ಅಲ್ಲಿನ ರಸ್ತೆಗೆ ಸಂಪರ್ಕ ರಸ್ತೆ ಮಾಡಿ ನಿವಾಸಿಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಲಾಗಿದೆ.

ಈಗಾಗಲೇ 179/ಇ ಸವರ್ೆ ನಂಬರನ ರಸ್ತೆ ಜಾಗದಲ್ಲಿ ಉದ್ಯಾನವನ ಇದ್ದು ಅದಕ್ಕೆ ಗೋಡೆಯನ್ನು ಕಟ್ಟಲಾಗಿದೆ, ಪುರಸಭೆ ಮುಖ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಗೋಡೆ ತೆರವುಗೊಳಿಸಿ ರಸ್ತೆಗೆ ಸಂಪರ್ಕ ರಸ್ತೆ ಕಲ್ಪಿಸಬೇಕು. ಅಲ್ಲದೇ ನಿಯಮದಂತೆ ಪ್ರತಿ ಸವರ್ೆಗೂ ಪ್ರತ್ಯೇಕವಾದ ಉದ್ಯಾನವನ ಬಿಡುವ ನಿಯಮ ಇದ್ದರೂ ಅದು ಇಲ್ಲಿ ಪಾಲನೆ ಆಗಿಲ್ಲ. ಈಗಾಗಲೇ ಈ ವಿಷಯವಾಗಿ ಅದಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಅಧಿಕಾರಿಗಳು ಪರಿಶೀಲನೆ ಮಾಡಿ ಕಾಂಪೌಂಡ್ ತೆರವು ಗೊಳಿಸಿ ರಸ್ತೆಗೆ ರಸ್ತೆ ಲಿಂಕ್ ಕಲ್ಪಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಹಿಂದಿನ ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ ಗಮನಕ್ಕೆ ಈ ವಿಷಯವನ್ನು ತರಲಾಗಿತ್ತು.ಅವರು ವಗರ್ಾವಣೆ ಆದ ನಂತರ ಹಾಗೆ ಈ ಸಮಸ್ಯೆ ಉಳಿದಿದೆ. ತ್ವರಿತವಾಗಿ ರಸ್ತೆಗೆ ರಸ್ತೆ ಲಿಂಕ್ ಮಾಡಿ ಒಳಚರಂಡಿ ಸೌಲಭ್ಯಗಳನ್ನು ಒದಗಿಸಬೇಕು. ಈಗಾಗಲೇ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಈ ಸವರ್ೆ ನಂಬರ್ಗಳಲ್ಲಿ ಸಿ.ಸಿ ರಸ್ತೆ ಕಾಮಗಾರಿ ಮಾಡಲು ಹೇಳಿದ್ದು ಗುಣಮಟ್ಟದ ರಸ್ತೆ ನಿಮರ್ಾಣಕ್ಕೆ ಗುತ್ತಿಗೆದಾರರಿಗೆ ತಿಳಿಸಿದ್ದಾರೆ. ಶಾಸಕರ ಸೂಚನೆಯಂತೆ ಗುಣಮಟ್ಟದ ರಸ್ತೆ ನಿಮರ್ಾಣ ಮಾಡಬೇಕು, ರಸ್ತೆ ಅತಿಕ್ರಮಣ ಮಾಡಿದ್ದನ್ನು ತೆರವುಗೊಳಿಸಿ ರಸ್ತೆ ನಿಮರ್ಾಣ ಮಾಡಬೇಕು. ಎರಡು ರಸ್ತೆಗಳನ್ನು ವಿಜಯಪುರ ಮುಖ್ಯರಸ್ತೆಯವರೆಗೆ ಸಿ.ಸಿ ರಸ್ತೆ ಮಾಡಿ ಸಂಪರ್ಕ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. ಇಲ್ಲದಿದ್ದರೆ ಪುರಸಭೆ ಎದುರಿಗೆ ಪ್ರತಿಭಟನೆ ನಡೆಸುವುದಾಗಿ ನಿವಾಸಿಗಳು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಪುರಸಭೆ ಕಂದಾಯ ಅಧಿಕಾರಿ ಎನ್.ಎಸ್.ಪಾಟೀಲ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಡಾವಣೆಯ ನಿವಾಸಿಗಳಾದ ನೀಲಾ ಗಂಗನಗೌಡ, ಸರೋಜನಿ ಬಿರಾದಾರ, ಕಾಶೀಬಾಯಿ ಬಿರಾದಾರ, ಈರಮ್ಮ ಮಡಿವಾಳರ, ಗೋಪಾಲ ಹೂಗಾರ, ಸಂತೋಷ ಮನಗೂಳಿ ಇದ್ದರು.

 

ಸುದ್ದಿ ಓದಿ