ಮೀಸಲಾತಿ ಹೆಚ್ಚಳ ಹೋರಾಟ: ಸಿಪಿಎಂ ಬೆಂಬಲ, ತಹಸೀಲ್ದಾರ್ಗೆ ಮನವಿ
ಹಗರಿಬೊಮ್ಮನಹಳ್ಳಿ 11: ಪರಿಶಿಷ್ಟ ಜಾತಿ ಹಾಗೂ ಪಂಗಡದ ಮೀಸಲಾತಿ ಹೆಚ್ಚಿಸುವ ಹೋರಾಟಕ್ಕೆ ಸಿಪಿಎಂ ಪಕ್ಷವು ಬೆಂಬಲಿಸಿ ತಹಸೀಲ್ದಾರ್ ಮೂಲಕ ಮುಖ್ಯ ಮಂತ್ರಿಗಳಿಗೆ ಸೋಮವಾರ ಮನವಿಯನ್ನು ನೀಡಿದರು.
ಈ ವೇಳೆ ಕಾರ್ಯದರ್ಶಿ ಬಿ.ಮಾಳಮ್ಮ ಮಾತನಾಡಿ ರಾಜ್ಯಾದ್ಯಾಂತ ನಡೆಯುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮೀಸಲಾತಿಗೆ ಪಕ್ಷವು ಬೆಂಬಲಿಸುತ್ತಿದೆ, ರಾಜ್ಯ ಸರಕಾರ ಕೂಡಲೇ ಮೀಸಲಾತಿ ಸೌಲಭ್ಯವನ್ನು ಈಡೇರಿಸಬೇಕು. ಹೊಸ ರಾಷ್ಟ್ರೀಯ ನೀತಿ ಹಾಗೂ ಸಾರ್ವಜನಿಕ ರಂಗದ ಉದ್ದಿಮೆಗಳ ಖಾಸಗೀಕರಣ ಮಾಡುವ ಮೂಲಕ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡದಂತೆ ಶಿಕ್ಷಣ ಹಾಗೂ ಉದ್ಯೋಗದ ಮೀಸಲಾತಿ ದೊರೆಯದಂತೆ ಅಪ್ರಸ್ತುತಗೊಳಿಸುರುವ ಸರ್ಕಾರದ ನಡೆ ಖಂಡನೀಯವಾಗಿದೆ ಎಂದರು. ಇದು ಕೇವಲ ಪ.ಜಾ, ಪ.ಪಂಗಳಿಗೆ ಮಾತ್ರವಲ್ಲದೇ ಹಿಂದುಳಿದ ಹಾಗೂ ಮಹಿಳಾ ಸಮುದಾಯಗಳಿಗೆ ಮಾಡಿದ ಮಹಾವಂಚನೆಯಾಗಿದೆ, ಒಕ್ಕೂಟ ಹಾಗೂ ರಾಜ್ಯ ಸರ್ಕಾರಗಳು ಶಿಕ್ಷಣ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ತಕ್ಷಣ ಕೈಬಿಡುವುದರ ಜೊತೆ ಸಾರ್ವಜನಿಕ ಬಂಡವಾಳವನ್ನು ಹೆಚ್ಚಳ ಮಾಡಬೇಕು, ದೇಶದ್ಯಾಂತ ಖಾಲಿಯಿರುವ ಹುದ್ದೆಗಳ ಭರ್ತಿಗೆ ಮುಂದಾಗಬೇಕು ಅಲ್ಪ ಮೊತ್ತಕ್ಕೆ ದುಡಿಸಿಕೊಳ್ಳುತ್ತಿರುವ ಹೊರಗುತ್ತಿಗೆ ಮತ್ತು ಗುತ್ತಿಗೆ ಕಾರ್ಮಿಕರನ್ನು ಶೀಘ್ರವೇ ಖಾಯಂಗೊಳಿಸಬೇಕು ಅರ್ಹ ಸಮುದಾಯಗಳ ಮೀಸಲಾತಿಯನ್ನು ನಾಶ ಮಾಡಲು ಮುಂದಾಗಿರುವ ರಾಜ್ಯ ಸರ್ಕಾದ ಈ ನಡೆಯನ್ನು ಪಕ್ಷವು ತೀವ್ರವಾಗಿ ಖಂಡಿಸುತ್ತದೆ ಎಂದರು.
ಈ ಸಂಧರ್ಭದಲ್ಲಿ ಸಿಪಿಎಂ ರಾಜ್ಯ ಸಮಿತಿ ಸದಸ್ಯ ಆರ್.ಎಸ್.ಬಸವರಾಜ, ಜಗನ್ನಾಥ್, ಕೆ.ಸಂಜೀವಮ್ಮ, ಎಂ.ಆನಂದ, ಜಿ.ಸರೋಜಮ್ಮ, ರೇಣುಕಮ್ಮ, ರಮೇಶ್, ಹನುಮಂತಪ್ಪ ಸೇರಿದಂತೆ ಇನ್ನಿತರರು ಇದ್ದರು.