ಕಾರವಾರ

ನಾಯಿಗಳ ದಾಳಿಯಿಂದ ತಪ್ಪಿಸಿಕೊಂಡು ಊರಿಗೆ ಬಂದ ಪುನುಗು ಬೆಕ್ಕು ರಕ್ಷಣೆ

ನಾಯಿಗಳ ದಾಳಿಯಿಂದ ತಪ್ಪಿಸಿಕೊಂಡು ಊರಿಗೆ ಬಂದ ಪುನುಗು ಬೆಕ್ಕು ರಕ್ಷಣೆ

ಲೋಕದರ್ಶನ ವರದಿ  

ಮುಂಡಗೋಡ 25 : ಪಟ್ಟಣದ ಇಂದಿರಾ ನಗರ ಪ್ಲಾಟ್ ಪ್ರದೇಶದಲ್ಲಿ ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಊರೊಳಗೆ ಬಂದಿದ್ದ ಪುನುಗು ಬೆಕ್ಕನ್ನು ಅರಣ್ಯ ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಶುಕ್ರವಾರ  ರಾತ್ರಿ ಸ್ಥಳೀಯರು ಪುನುಗು ಬೆಕ್ಕನ್ನು ಕಂಡು ಅರಣ್ಯಇಲಾಖೆ ಅಧಿಕಾರಿಗಳಾದ  ಡಿ ಆರ್ ಎಫ್ ಓ ಅರುಣಕುಮಾರ ಕಾಶಿ ಅವರಿಗೆ ಮಾಹಿತಿ ನೀಡಿದರು. ಅವರು ಅರಣ್ಯ ಇಲಾಖೆಯ ಬೀಟ್ ಫಾರೆಸ್ಟರ್ ಮುತ್ತುರಾಜ ಹಳ್ಳಿ ಅವರನ್ನು ಸ್ಥಳಕ್ಕೆ ಕರೆಸಿಕೊಂಡರು. ಬಳಿಕ ಮುತ್ತುರಾಜ ಹಳ್ಳಿ ಅವರು ಪುನುಗು ಬೆಕ್ಕನ್ನು ಸುರಕ್ಷಿತವಾಗಿ ಸೆರೆಹಿಡಿದು ಅರಣ್ಯ ಪ್ರದೇಶಕ್ಕೆ ಬಿಡುಗಡೆ ಮಾಡಿದರು.    ಪುನುಗು ಬೆಕ್ಕು ನೋಡಲು ಸಾಮಾನ್ಯ ಬೆಕ್ಕಿನಂತಿದ್ದರೂ, ಇದು ವಿವೆರಿಡೆ ಕುಟುಂಬಕ್ಕೆ ಸೇರಿದ ಅಪರೂಪದ ಕಾಡು ಪ್ರಾಣಿಯಾಗಿದೆ. ಮುಖ್ಯವಾಗಿ ರಾತ್ರಿ ವೇಳೆ ಸಂಚರಿಸುವ ಈ ಪ್ರಾಣಿ ಇಲಿ, ಕೀಟ, ಹಾವು ಹಾಗೂ ಹಣ್ಣು-ಹಂಪಲುಗಳನ್ನು ಆಹಾರವಾಗಿ ಸೇವಿಸುತ್ತದೆ. ಪರಿಸರ ಸಮತೋಲನ ಕಾಪಾಡುವಲ್ಲಿ ಹಾಗೂ ಇಲಿಗಳ ನಿಯಂತ್ರಣದಲ್ಲಿ ಇದರ ಪಾತ್ರ ಮಹತ್ವದ್ದಾಗಿದೆ.  


ಸುದ್ದಿ ಓದಿ