ಮುದ್ದೆಬಿಹಾಲ್

ಸವಳು ಜವಳು ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಮನವಿ

ಸವಳು ಜವಳು ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಮನವಿ

ಮುದ್ದೇಬಿಹಾಳ : ನಾರಾಯಣಪೂರ ಹಿನ್ನೀರು ಹಾಗೂ ಕಾಲುವೆಗಳಿಂದ ತಾಲೂಕಿನ ಹಡಗಲಿ ಗ್ರಾಮದ ಅಂದಾಜು 150 ಎಕರೆ ಜಮೀನುಗಳು ಸವಳು ಜವಳು ಸಮಸ್ಯೆಯಿಂದ ರೈತರು ತೊಂದರೆಗೆ ಸಿಲುಕಿದ್ದು ಸರಕಾರ ಈ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು ಎಂದು ಆಗ್ರಹಿಸಿ ಹಡಗಲಿ ಗ್ರಾಮದ ರೈತರು ಬುಧವಾರ ತಹಸೀಲ್ದಾರ್‌ಎ ಮನವಿ ಪತ್ರ ಸಲ್ಲಿಸಿದರು. 

ಪಟ್ಟಣದ ತಹಸೀಲ್ದಾರ್ ಕಛೇರಿಗೆ ಆಗಮಿಸಿದ್ದ ರೈತರು ಶಿರಸ್ತೇದಾರ ವೀರೇಶ ತೊನಶ್ಯಾಳ ಅವರಿಗೆ ಮನವಿ ಪತ್ರ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಪ್ರಗತಿಪರ ರೈತ ಬಾಪುರಾವ್ ದೇಸಾಯಿ, ಸವಳಾಗಿರುವ ಜಮೀನಿನಲ್ಲಿ ಯಾವುದೇ ಬೆಳೆ ಬೆಳೆಯುತ್ತಿಲ್ಲ.ಈ ಜಮೀನುಗಳನ್ನು ನಂಬಿಕೊಂಡಿದ್ದ ರೈತರು ಉಪ ಜೀವನ ನಡೆಸಲು ಕಷ್ಟಕರವಾಗಿದೆ.ಸರಕಾರಕ್ಕೆ ಈ ಕುರಿತಂತೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು.ಈ ಹಿಂದೆ ಅಧಿಕಾರಿಗಳು ಕೃಷಿ ವಿಶ್ವವಿದ್ಯಾಲಯದಿಂದ ಸವಳು ಜಮೀನು ಎಂದು ಮಣ್ಣು ಪರೀಕ್ಷೆ ಮಾಡಿಸಿಕೊಂಡು ಬರಲು ತಿಳಿಸಿದ್ದರು.ಅದರಂತೆ ವರದಿ ಕೂಡಾ ಸಲ್ಲಿಸಿದ್ದರೂ ನಮಗೆ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ ಎಂದು ಹೇಳಿದರು. 

        ಇದೇ ಪರಿಸ್ಥಿತಿ  ಮುಂದುವರೆದರೆ ತಾಲೂಕಾಡಳಿತ ಸೌಧದ ಎದುರಿಗೆ ಧರಣಿ ಸತ್ಯಾಗ್ರಹ ಕೂಡುವುದಾಗಿ ಹೇಳಿದರು.ಈ ವೇಳೆ ರೈತರಾದ ನಬಿಸಾ ಮುಲ್ಲಾ,ಸಂಗಣ್ಣ ಕುಂಚಗನೂರ,ಗುರುಭೀಮರಾವ ದೇಸಾಯಿ,ರವಿಕುಮಾರ ಮಾಗಿ,ಬೀರ​‍್ಪ ಕುರಿ,ರಜಿಯಾಬೇಗಂ ಗುಂತಗೂಳಿ,ತಿಪ್ಪಮ್ಮ ರತ್ನಾಕರ,ಅಸ್ಪಾಕ ಬಿಳೇಕುದರಿ,ಧರಿಯಪ್ಪ ಬಟಕುರ್ಕಿ,ರಾಜೇಸಾಬ ವಾಲೀಕಾರ, ಹಣಮಂತಪ್ಪ ತಳವಾರ,ನಾಗರಾಜ ಬಡಿಗೇರ,ಮುತ್ತಪ್ಪ ಅಂಬಿಗೇರ,ಚಂದ್ರ​‍್ಪ ಹುಡೇದ,ಹಣಮಂತಗೌಡ ಪಾಟೀಲ್ ಮೊದಲಾದವರು ಇದ್ದರು. 


ಸುದ್ದಿ ಓದಿ