ನ. 30ರವರೆಗೆ ನೀರು ಬಿಡುವಂತೆ ಒತ್ತಾಯಿಸಿ ಮನವಿ
ಬಳ್ಳಾರಿ 30: ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ವತಿಯಿಂದ ಮುಂದಿನ ದಿನಗಳಲ್ಲಿ ನವಂಬರ್ 30ರವರೆಗೆ ನೀರು ಬಿಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಕೃಷ್ಣಮೂರ್ತಿ(ಅಕ್ಕಿ ಕೃಷ್ಣ) ಅವರು ಮಾತನಾಡುತ್ತಾ ಜಿಲ್ಲೆಯಲ್ಲಿ ಹತ್ತಿ, ಮೆಣಸಿನಗಿಡ, ಭತ್ತ, ಮೆಕ್ಕಜೋಳ ಈಗ ತಾನೆ ತನ್ನೆ ಬರುತ್ತಿದೆ ಆದ್ದರಿಂದ ನವೆಂಬರ್ 30ರವರೆಗೆ ನೀರು ಬಿಡಬೇಕು, ರೈತರಿಗೆ ಬಹಳಷ್ಟು ನಷ್ಟ ಉಂಟಾಗುತ್ತಿದೆ. ನಂತರ ರೈತರು ಬೆಳೆಸುವಂತಹ ಬೆಳೆಗಳಿಗೆ ನೀರು ಇಲ್ಲದಿದ್ದರೆ ಇದಕ್ಕೆ ಸರ್ಕಾರ ಹೊಣೆಗಾರಿಕೆಯಾಗುವುದು ಹಾಗೂ ರೈತರು ಇದರಿಂದ ಆತ್ಮಹತ್ಯೆಗಳು ಆಗುವ ಸಂಭವ ಹೆಚ್ಚಾಗಿರುತ್ತದೆ. ಇಂದಿನ ರೈತರು ಬೆಳೆಯವ ಒಂದು ಬೆಳೆಗಳ ಖರ್ಚು ಮೆಣಸಿನಕಾಯಿ 1, ಲಕ್ಷ ಖರ್ಚು ಎಕರೆಗೆ, ಭತ್ತಕ್ಕೆ 35000 ಎಕರೆಗೆ, ಜೋಳ ಎಕರಿಗೆ 25000, ಹತ್ತಿ ಬೆಳೆಗೆ 50 ಸಾವಿರ ಎಕರೆಗೆ ಈ ರೀತಿಯಾಗಿ ರೈತರಿಗೆ ನಷ್ಟ ಉಂಟಾಗುತ್ತಿದ್ದು ರೈತರ ಜೀವನ ಮಾಡಲು ತುಂಬಾ ಕಷ್ಟಕರವಾಗುತ್ತದೆ. ಆದುದರಿಂದ ನವಂಬರ್ 30ರವರೆಗೆ ನೀರು ಬಿಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಇದರ ಬಗ್ಗೆ ಗಮನ ಹರಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ. ಅಧಿಕಾರಿಗಳು ಇದರ ಬಗ್ಗೆ ನಿರ್ಲಕ್ಷ ತೋರಿದ್ದಲ್ಲಿ ಜಿಲ್ಲೆಯ ಎಲ್ಲಾ ರೈತರು ಸೇರಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ವ್ಯಕ್ತಪಡಿಸಿದರು.
ತಾಲೂಕು ಅಧ್ಯಕ್ಷ ಎರಿಸ್ವಾಮಿ, ಖಜಾಂಚಿ ಕೆ ಮಾರಣ್ಣ, ಸಂಘಟನಾ ಕಾರ್ಯದರ್ಶಿ ಜಗನಾಥ್, ಭೀಮನಾಯಕ, ಗಂಗಾಧರ ಕರೂರು ರೈತರು ಇತರರು ಆಗಮಿಸಿದ್ದರು.