ಬಳ್ಳಾರಿ

ಬುಡಾದಿಂದ ನಿವೇಶನ ಒದಗಿಸಲು ಮನವಿ

ಬುಡಾದಿಂದ ನಿವೇಶನ ಒದಗಿಸಲು ಮನವಿ

ಬಳ್ಳಾರಿ 30: ಬಳ್ಳಾರಿ ನಗರಾಭಿವೃದ್ದಿ ಪ್ರಾಧಿಕಾರದ ಡೈನಾಮಿಕ್ ಅಧ್ಯಕ್ಷ ದಮ್ಮೂರು ಶೇಖರ್‍ರವರನ್ನು ಅವರ ಕಾರ್ಯಾಲಯದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನ ನೇತೃತ್ವದಲ್ಲಿ ಬಳ್ಳಾರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜಗನ್ಮೋಹನರೆಡ್ಡಿ, ಜಿಲ್ಲಾ ಖಜಾಂಚಿಗಳಾದ ಯಲ್ಲಾರೆಡ್ಡಿ, ಸಿಂಗಪೂರ್ ನಾಗರಾಜ್, ಸಿರುಗುಪ್ಪ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಇಸಾಕ್ ರವರು ಭೇಟಿಯಾಗಿ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳಿಗೆ ಹಾಗೂ ಸದಸ್ಯರುಗಳಿಗೆ ನಗರಾಭಿವೃದ್ದಿ ಪ್ರಾಧಿಕಾರದಿಂದ ನಿವೇಶನ ಒದಗಿಸಿಕೊಡಬೇಕೆಂಬ ಮನವಿಗೆ ಪೂರಕವಾಗಿ ಸ್ಪಂಧಿಸಿರುವ ದಮ್ಮೂರು ಶೇಖರ್ ರವರು ಮನವಿಯನ್ನು ಸ್ವೀಕರಿಸಿದರು.

ಸುದ್ದಿ ಓದಿ