ಹಗರಿಬೊಮ್ಮನಹಳ್ಳಿ

ಕೂಡ್ಲಗಿ ರಸ್ತೆಯ ವೃತ್ತವನ್ನು ಕನ್ನಡಾಂಬೆ ವೃತ್ತ ಎಂದು ನಾಮಕರಣ ಮಾಡುವಂತೆ ಮನವಿ

ಕೂಡ್ಲಗಿ ರಸ್ತೆಯ ವೃತ್ತವನ್ನು ಕನ್ನಡಾಂಬೆ ವೃತ್ತ ಎಂದು ನಾಮಕರಣ ಮಾಡುವಂತೆ ಮನವಿ

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 08: ಪಟ್ಟಣದ ಕೂಡ್ಲಗಿಯ ರಸ್ತೆಯಲ್ಲಿರುವ ವೃತ್ತವನ್ನು ಶಾಸಕರು, ಹೊಸಪೇಟೆ ಉಪವಿಭಾಗಾಧಿಕಾರಿ, ಹಗರಿಬೊಮ್ಮನಹಳ್ಳಿ ಪುರಸಭೆ ರವರ ಜಂಟಿ ಅಧ್ಯಕ್ಷತೆಯಲ್ಲಿ  ಗಂಗಾವತಿ ವೆಂಕೋಬಣ್ಣ ಶ್ರೇಷ್ಠಿ ವೃತ್ತ ಎಂದು ನಾಮಕರಣ ಮಾಡಿದ್ದು ಇದಕ್ಕೆ ತಕರಾರಾಗಿ ವೃತ್ತವನ್ನು ಕನ್ನಡಾಂಬೆ ವೃತ್ತ ಎಂದು ನಾಮಕರಣ ಮಾಡುವಂತೆ ಕನ್ನಡ ಪರ ಸಂಘಟನೆ, ಕನ್ನಡ ಯುವ ಶಕ್ತಿ, ಭಾರತೀಯ ಮಾನವ ಹಕ್ಕು ಹಿತರಕ್ಷಣಾ ವೇದಿಕೆಯು ಸೋಮವಾರ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 


ಈ ಸಂಧರ್ಭದಲ್ಲಿ ಕರವೇ (ನಾರಾಯಣ ಗೌಡ್ರ ಬಣ)ತಾಲೂಕಾಧ್ಯಕ್ಷ ಎನ್‌.ಎಂ.ಗೌಸ್ ಮಾತನಾಡಿ ಕೂಡ್ಲಗಿ ರಸ್ತೆಯ ವೃತ್ತವನ್ನು ಶ್ರೀ ಗಂಗಾವತಿ ವೆಂಕೋಬಣ್ಣ ಶ್ರೇಷ್ಠಿ ವೃತ್ತ ಎಂದು ನಾಮಕರಣ ಮಾಡಿರುವುದು ಸರಿಯಲ್ಲ , ಪ್ರಸ್ತುತ ವೃತ್ತದಲ್ಲಿ ಅನೇಕ ಕನ್ನಡ ಪರ ಸಂಘಟನೆಗಳು ಜನ್ಮ ತಾಳಿವೆ, ಈ ವೃತ್ತದಲ್ಲಿ ಅನೇಕ ಕನ್ನಡ ಪರ ಸಂಘಟನೆಗಳಿಂದ ಸಾಮಾಜಿಕ ಕಾರ್ಯಗಳು ಮಾಡುತ್ತಾ ಬಂದಿದ್ದೆವೆ,30ರಿಂದ40 ವರ್ಷಗಳ ಹಿಂದಿನಿಂದಲೂ ಕನ್ನಡಾಂಬೆ ವೃತ್ತ ಎಂದೇ ಬಿಂಬಿತವಾಗಿರುವ ಈ ವೃತ್ತದಲ್ಲಿ ಕನ್ನಡ ಕಟ್ಟೆ ಕಟ್ಟಿಸಿ ಅಲ್ಲಿಯೇ ಧ್ವಜಾರೋಣ ನೆರವೇರಿಸುತ್ತಾ ಬಂದಿದ್ದೆವೆ ಇಗಿರುವಾಗ ಈ ವೃತ್ತವನ್ನು ಕನ್ನಡಾಂಬೆ ವೃತ್ತವೆಂದು ನಾಮಕರಣ ಮಾಡಬೇಕು ಎಂದರು. 

ರಾಮನಗರದ ಬಸ್ ನಿಲ್ದಾಣದ ವೃತ್ತಕ್ಕೆ ಗಂಗಾವತಿ ವೆಂಕೋಬಣ್ಣ ಶ್ರೇಷ್ಠಿ ವೃತ್ತ ಎಂದು ಹಿಂದಿನಿಂದಲೂ ಹೆಸರಿದ್ದು, ವೃತ್ತವನ್ನು ನಿರ್ಮಿಸಲಾಗಿತ್ತು,ಇದಕ್ಕೆ ಕಾರಣ ಇವರು ಶಾಲಾ,ಕಾಲೇಜು,ಆಸ್ಪತ್ರೆ ಸೇರಿದಂತೆ ಕಟ್ಟಡಗಳನ್ನು ಕಟ್ಟಿಸಿ ಕೊಟ್ಟಿದ್ದು ರಾಮನಗರ ಬಸ್ ನಿಲ್ದಾಣವನ್ನು  ಗಂಗಾವತಿ ವೆಂಕೋಬಣ್ಣ ಶ್ರೇಷ್ಠಿ ವೃತ್ತ ಎಂದು ನಾಮಕರಣ ಮಾಡಿದ್ದರು, ಪಟ್ಟಣದಲ್ಲಿ ಯಾವುದೇ ಸಕಾರಣಗಳಿಲ್ಲದೇ ಹಲವು ವೃತ್ತಗಳಿಗೆ ನಾಮಕರಣ ಮಾಡಲಾಗಿದೆ ಇದರಿಂದ ಸಾರ್ವಜನಿಕರಿಗೆ ಘಾಸಿಉಂಟಾಗಿದ್ದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಠರಾವು ಸಂಖ್ಯೆ 17ದಿನಾಂಕ 08-10-2021ರ ಅಧಿಸೂಚನೆಗೆ ನಮ್ಮ ಎಲ್ಲಾ ಕನ್ನಡ ಪರ ಸಂಘಟನೆಗಳ ಹಾಗೂ ಕೂಡ್ಲಗಿ ವೃತ್ತದ ಸಾರ್ವಜನಿಕರ ಪ್ರಬಲ ವಿರೋಧವಿದ್ದು ಹಾಗೂ ತಕರಾರು ಇದ್ದು, ಗಂಗಾವತಿ ವೆಂಕೋಬಣ್ಣ ಶ್ರೇಷ್ಠಿ ವೃತ್ತಕ್ಕೆ ಸೂಕ್ತ ವೃತ್ತ ಕಲ್ಪಿಸಿಕೊಟ್ಟು ಇದನ್ನು ಕನ್ನಡಾಂಬೆ ವೃತ್ತವೆಂದು ನಾಮಕರಣ ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು. 


ಈ ಸಂದರ್ಭದಲ್ಲಿ ಕರವೇ ಶಿವರಾಮೇಗೌಡ ಬಣದ ತಾಲೂಕಾಧ್ಯಕ್ಷ ಬುಡ್ಡಿ ಬಸವರಾಜ್, ಕನ್ನಡ ಯುವ ಶಕ್ತಿ ವೇದಿಕೆಯ ಎ.ಚಂದ್ರಶೇಖರ್, ಪ್ರವೀಣ ಶೆಟ್ಟಿ ಬಣದ ಕರವೇ ತಾಲೂಕಾಧ್ಯಕ್ಷ ಭರಮಜ್ಜನಾಯಕ, ಕರವೇ ಸ್ವಾಭಿಮಾನಿ ಬಣದ ಸಂತೋಷ ಪೂಜಾರ್, ಮಾನವ ಹಕ್ಕುಗಳ ಹಿತ ರಕ್ಷಣಾ ವೇದಿಕೆಯ ತಾಲೂಕಾಧ್ಯಕ್ಷ ಶ್ಯಾಬುದ್ದೀನ್, ಪ್ರವೀಣ್, ವೇಂಕಟೇಶ್ ಮ್ಯಾದಾರ ಇದ್ದರು. 


ಸುದ್ದಿ ಓದಿ