ಕಂಪ್ಲಿ

ಇಡಿ ಮತ್ತು ಟಿಇಟಿ ಪ್ರಮಾಣ ಪತ್ರ ಪಡೆದವರಿಗೆ ನೇಮಕಾತಿ ಹೊರಡಿಸಬೇಕೆಂದು ಮನವಿ

ಇಡಿ ಮತ್ತು ಟಿಇಟಿ ಪ್ರಮಾಣ ಪತ್ರ ಪಡೆದವರಿಗೆ ನೇಮಕಾತಿ ಹೊರಡಿಸಬೇಕೆಂದು ಮನವಿ

ಲೋಕದರ್ಶನ ವರದಿ

ಕಂಪ್ಲಿ 07:  ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯಲ್ಲಿರುವ ಶಾಸಕರ ಕಚೇರಿಯಲ್ಲಿ ಪಿಎಸ್‌ಟಿಆರ್ ಹಿರಿಯ ಪ್ರಾಥಮಿಕ ವಿಭಾಗ ಹುದ್ದೆಗಳ ಆಕಾಂಕ್ಷಿಗಳಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ನೇಮಕಾತಿ ಕೈಗೊಳ್ಳುವಂತೆ ಶಾಸಕ ಜೆ.ಎನ್ಗಣೇಶ್ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು. 

ಶಿಕ್ಷಕ ಎಸ್‌.ರಾಮಪ್ಪ ಮತ್ತು ಲಿಂಗರೆಡ್ಡಿ ಮಾತನಾಡಿ, ಕಲ್ಯಾಣ ಕರ್ನಾಟಕದ ಭಾಗಕ್ಕೆ ಈಗಾಗಲೇ 5267 ಹುದ್ದೆಗಳಿಗೆ ಆರ್ಥಿಕ ಇಲಾಖೆಯಿಂದ ಅನುಮೋದನೆ ದೊರೆತಿದ್ದು, ವಿಳಂಬ ಮಾಡದೆ ಶೀಘ್ರವಾಗಿ ಅಧಿಸೂಚನೆ ಹೊರಡಿಸಬೇಕು. ಅಲ್ಲದೆ ಆ ಹುದ್ದೆಗಳನ್ನು ಯಾವುದೇ ಕಾರಣಕ್ಕೂ ಜಿಪಿಟಿ ಮತ್ತು ಪ್ರೌಢಶಾಲಾ ವಿಭಾಗಕ್ಕೆ ವರ್ಗಾಯಿಸದೆ ಕಲ್ಯಾಣ ಕರ್ನಾಟಕ ಭಾಗದ ಡಿಇಡಿ ಮತ್ತು ಟಿಇಟಿ ಪ್ರಮಾಣ ಪತ್ರ ಪಡೆದುಕೊಂಡು ಉದ್ಯೋಗಕ್ಕಾಗಿ ಜಾತಕ ಪಕ್ಷಗಳಿಂದ ಕಾಯುತ್ತಿದ್ದಾರೆ. ಆ ನಿಟ್ಟಿನಲ್ಲಿ ಕೂಡಲೆ ನೇಮಕಾತಿಯ ಸೂಚನೆ ಹೊರಡಿಸಿ ಹುದ್ದೆಗಳ ಆಕಾಂಕ್ಷಿಗಳಿಗೆ ನ್ಯಾಯ ಒದಗಿಸಿ ಕೊಡುವ ನಿಟ್ಟಿನಲ್ಲಿ ಶಾಸಕರು ಶಿಕ್ಷಣ ಇಲಾಖೆ ಆಯುಕ್ತರಾದ ಕಲ್ಯಾಣ ಕರ್ನಾಟಕ ಭಾಗದ ಪ್ರಿಯಾಂಕ ಖರ್ಗೆ ಸಚಿವರ ಗಮನಕ್ಕೆ ತಂದು ನ್ಯಾಯ ಕೊಡಬೇಕೆಂದು ಒತ್ತಾಯಿಸಿದರು. 

ಶಾಸಕ ಜೆ.ಎನ್‌.ಗಣೇಶ್ ಪ್ರತಿಕ್ರಿಯಿಸಿ ಮಾತನಾಡಿ, ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವಂತೆ ಬಹಳಷ್ಟು ಶಿಕ್ಷಕರು ಒತ್ತಾಯಿಸುತ್ತಿದ್ದು, ಈಗಾಗಲೇ ನಮ್ಮ ಗಮನಕ್ಕೆ ಬಂದಿದ್ದು, ಕೂಡಲೇ ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು ನ್ಯಾಯ ಒದಗಿಸಿಕೊಡುವ ಭರವಸೆ ನೀಡಿದರು  ಈ ಸಂದರ್ಭದಲ್ಲಿ ಶಿಕ್ಷಕರಾದ ಗೋಪಾಲ, ಎಸ್‌.ರಾಮು, ಮುದುಕಪ್ಪ, ಶರಣ, ಆಂಜನೇಯ, ಮೋದಿನಸಾಬ್, ರಾಮಚಂದ್ರ, ಮೌನೇಶ, ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ